Sunday, September 15, 2024
Homeರಾಜ್ಯಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದ್ದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ

ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದ್ದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ

ಬೆಂಗಳೂರು,ಆ.20- ಕೋರಮಂಗಲದ ಮಂಗಳ ಜಂಕ್ಷನ್‍ನಲ್ಲಿ ಕಳೆದ 17ರ ಮಧ್ಯರಾತ್ರಿ ಎರಡು ಆಟೋಗಳಿಗೆ ಹಾಗೂ ಬೈಕ್‍ಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ವಿದ್ಯಾರ್ಥಿನಿ ಚಾಲನೆ ಮಾಡುತ್ತಿದ್ದ ಕಾರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕಳೆದ ಶನಿವಾರ ಮಧ್ಯರಾತ್ರಿ ಕಾರೊಂದು ಯೂಟರ್ನ್ ಪಡೆದುಕೊಳ್ಳುವ ವೇಳೆ ಮಂಗಳ ಜಂಕ್ಷನ್‍ನಲ್ಲಿ ನಿಯಂತ್ರಣ ತಪ್ಪಿ ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದ್ದು, ಕಾರು ಚಾಲನೆ ಮಾಡುತ್ತಿದ್ದವರು ವಾಹನ ನಿಲ್ಲಿಸದೆ ಮುಂದೆ ಹೋಗುತ್ತಿದ್ದರು.

ತಕ್ಷಣ ಇದನ್ನು ಗಮನಿಸಿದ ಆಟೋ ಚಾಲಕ ಹಾಗೂ ಬೈಕ್ ಸವಾರ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ತಡೆದು ನಿಲ್ಲಿಸಿದ್ದಾರೆ. ಆ ವೇಳೆ ಕಾರಿನಲ್ಲಿದ್ದ ಯುವಕ-ಯುವತಿ ಜೊತೆ ಆಟೋ ಚಾಲಕ ಜಗಳವಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದೇ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಬಂದ ಹೊಯ್ಸಳ ಪೊಲೀಸರು ಗುಂಪು ಸೇರಿರುವುದು ಗಮನಿಸಿ ಸಮೀಪ ಹೋಗಿ ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸುವಷ್ಟರಲ್ಲಿ ಇತ್ತ ಕಾರು ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಕಾರಿನಿಂದ ಇಳಿದು ಅದೇ ಮಾರ್ಗದಲ್ಲಿ ಬಂದ ಬೈಕ್ ಸವಾರನಿಗೆ ಡ್ರಾಪ್ ಕೇಳಿದ್ದಾಳೆ.

ನಂತರ ಡ್ರಾಪ್ ಕೊಡುವ ನೆಪದಲ್ಲಿ ಕೊರಿಯೊಗ್ರಾಫರ್ ಆಕೆಯನ್ನು ನಿರ್ಜನಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆಟೋ ಜಖಂಗೊಂಡ ಬಗ್ಗೆ ಆಟೋ ಚಾಲಕ ಅಂದೇ ಆಡಿಗೋಡಿ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರು ಯಾರದ್ದು? ಯಾರು ಕಾರು ಚಲಾಯಿಸುತ್ತಿದ್ದರು? ಎಂಬ ಬಗ್ಗೆ ತನಿಖೆ ಕೈಗೊಂಡಾಗ ಆ ಕಾರು ಸಂತ್ರಸ್ತೆಯ ಸ್ನೇಹಿತನದು. ಅಂದು ಕಾರನ್ನು ಆಕೆಯೇ ಚಾಲನೆ ಮಾಡುತ್ತಿದುದ್ದಾಗಿ ಗೊತ್ತಾಗಿದೆ.

ಕಾರಿನ ಮಾಲೀಕ ಹಾಗೂ ಸಂತ್ರಸ್ತೆ ಸ್ನೇಹಿತನಿಂದ ಹೇಳಿಕೆ ಪಡೆದುಕೊಂಡಿರುವ ಆಡುಗೋಡಿ ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News