Friday, November 22, 2024
Homeರಾಜ್ಯಸಿಎಂ ವಿರುದ್ಧದ 73 ಹಗರಣಗಳನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಲು ಆಗ್ರಹ

ಸಿಎಂ ವಿರುದ್ಧದ 73 ಹಗರಣಗಳನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಲು ಆಗ್ರಹ

Demand to investigate 73 scamsof CM by CBI or CID

ಬೆಂಗಳೂರು,ಆ.24– ಅನ್ಯ ಪಕ್ಷದ ನಾಯಕರ ಹಗರಣಗಳನ್ನು ಎಸ್‌‍ಐಟಿ ತನಿಖೆಗೆ ವಹಿಸುವ ಮತ್ತು ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವ ಬಗ್ಗೆ ರಾಜ್ಯಪಾಲರನ್ನು ಒತ್ತಾಯಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ ವಿರುದ್ಧ ದಾಖಲಾಗಿರುವ 73 ಬಹತ್‌ ಹಗರಣಗಳನ್ನು ಸಿಬಿಐ, ಸಿಐಡಿ ಇಲ್ಲವೇ ಲೋಕಾಯುಕ್ತ ತನಿಖೆಗೆ ವಹಿಸುವ ಬಗ್ಗೆ ಆದೇಶ ನೀಡಲು ಹಿಂಜರಿಯುತ್ತಿರುವುದು ಏಕೆ ಎಂದು ಬಿಜೆಪಿ ಮುಖಂಡ ಎನ್.ಆರ್‌.ರಮೇಶ್‌ ಪ್ರಶ್ನಿಸಿದ್ದಾರೆ.

2013 ರಿಂದ 2018 ರವರೆಗಿನ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ 120 ಕ್ಕೂ ಹೆಚ್ಚು ಬಹತ್‌ ಹಗರಣಗಳು ನಡೆದಿದ್ದು, ಇವುಗಳ ಪೈಕಿ 73 ಬಹತ್‌ ಹಗರಣಗಳಲ್ಲಿ ಖುದ್ದಾಗಿ ಸಿದ್ಧರಾಮಯ್ಯನವರೇ ಭಾಗಿಯಾಗಿರುವ ಬಗ್ಗೆ ದಾಖಲೆಗಳ ಸಹಿತ ಮುಖ್ಯಮಂತ್ರಿಗಳ ಅಧಿಕತ ಕಛೇರಿಗೆ ದೂರುಗಳನ್ನು ಸಲ್ಲಿಸಲಾಗಿತ್ತು. ಅಲ್ಲದೇ, ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್‌ನಂತಹ ತನಿಖಾ ಸಂಸ್ಥೆಗಳಲ್ಲಿಯೂ ಸಹ ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಲಾಗಿತ್ತು.

ಈ 73 ಹಗರಣಗಳಿಗೆ ಸಂಬಧಿಸಿದಂತೆ 1,17,236 ಪುಟಗಳ ಸಂಪೂರ್ಣ ದಾಖಲೆಗಳನ್ನು ಆಯಾ ಹಗರಣಗಳನ್ನು ಬಯಲಿಗೆಳೆದ ದಿನವೇ ಮುಖ್ಯಮಂತ್ರಿಗಳ ಅಧಿಕತ ಕಛೇರಿಗೆ ತಲುಪಿಸಿ ಸ್ವೀಕತಿ ಪತ್ರವನ್ನು ಪಡೆದಿರುತ್ತೇವೆ.

ಸಿದ್ಧರಾಮಯ್ಯನವರು ಭಾಗಿಯಾಗಿರುವ ಸದರಿ 73 ಬಹತ್‌ ಹಗರಣಗಳ ಪೈಕಿ ಅವರ ರಾಜಕೀಯ ಪ್ರಭಾವವನ್ನು ಬಳಸಿ ಅಥವಾ ಸಿದ್ಧರಾಮಯ್ಯನವರ ಅಧಿಕಾರದ ಪ್ರಭಾವಕ್ಕೆ ಒಳಗಾಗಿ ಲೋಕಾಯುಕ್ತ ಪೋಲೀಸರು ಬಿ ರಿಪೋರ್ಟ್‌ಅನ್ನು ಸಲ್ಲಿಸಿರುತ್ತಾರೆ ಹಾಗೂ 19 ಪ್ರಕರಣಗಳನ್ನು ಮುಕ್ತಾಯಗೊಳಿಸಿರುತ್ತಾರೆ.

ಇವುಗಳನ್ನು ಹೊರತುಪಡಿಸಿ ಇನ್ನುಳಿದ ಸಿದ್ಧರಾಮಯ್ಯನವರ ವಿರುದ್ಧದ 54 ಪ್ರಕರಣಗಳು ಲೋಕಾಯುಕ್ತದಲ್ಲಿ ಇನ್ನೂ ಚಾಲ್ತಿಯಲ್ಲಿರುತ್ತದೆ ಹಾಗೂ ನಿಜಕ್ಕೂ ಸಿದ್ಧರಾಮಯ್ಯನವರು ಮಾಧ್ಯಮಗಳ ಮುಂದೆ ನನ್ನದು ಅತ್ಯಂತ ಸ್ವಚ್ಛವಾದ ರಾಜಕಾರಣ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಹೇಳಿರುವುದು ನಿಜಕ್ಕೂ ಅವರ ಮನಸ್ಸಾಕ್ಷಿಯಿಂದ ಬಂದ ಮಾತುಗಳೇ ಆಗಿದ್ದರೆ, ಅವರು ಈ ಕೂಡಲೇ 54 ಬಹತ್‌ ಹಗರಣಗಳ ತನಿಖೆಯನ್ನು ಸಿಬಿಐ, ಸಿಐಡಿ ಅಥವಾ ಲೋಕಾಯುಕ್ತಕ್ಕೆ ವಹಿಸುವ ಬಗ್ಗೆ ಆದೇಶ ನೀಡಬೇಕೆಂದು ರಮೇಶ್‌ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

RELATED ARTICLES

Latest News