Sunday, November 24, 2024
Homeಅಂತಾರಾಷ್ಟ್ರೀಯ | Internationalಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ರಾಜನಾಥ್‌ ಸಿಂಗ್‌ ಚರ್ಚೆ

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ರಾಜನಾಥ್‌ ಸಿಂಗ್‌ ಚರ್ಚೆ

Rajnath Singh discusses 'key' strategic matters with US NSA Jake Sullivan

ವಾಷಿಂಗ್ಟನ್‌, ಆ 24 (ಪಿಟಿಐ)- ಭಾರತ ಮತ್ತು ಅಮೆರಿಕ ತಮ ಸಮಗ್ರ ಜಾಗತಿಕ ಉತ್ತೇಜನಕ್ಕಾಗಿ ಎರಡು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ ಒಂದು ದಿನದ ನಂತರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಯುಎಸ್‌‍ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಅವರನ್ನು ಭೇಟಿ ಮಾಡಿದ್ದಾರೆ. ಪರಸ್ಪರ ಹಿತಾಸಕ್ತಿಯ ಪ್ರಮುಖ ಕಾರ್ಯತಂತ್ರದ ವಿಷಯಗಳ ಕುರಿತು ದಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ.

ಯುಎಸ್‌‍ ಮತ್ತು ಭಾರತದ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲು ದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ನಾಲ್ಕು ದಿನಗಳ ಅಧಿಕತ ಭೇಟಿಗಾಗಿ ಸಿಂಗ್‌ ಅವರು ಅಮೆರಿಕಕ್ಕೆ ಆಗಮಿಸಿದ್ದಾರೆ. ಯುನೈಟೆಡ್‌ ಸ್ಟೇಟ್ಸ್ ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅವರನ್ನು ಭೇಟಿಯಾಗಲು ಸಂತೋಷ ವಾಗಿದೆ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಮುಖ ಕಾರ್ಯತಂತ್ರದ ವಿಷಯಗಳ ಕುರಿತು ದಷ್ಟಿಕೋನಗಳನ್ನು ಹಂಚಿ ಕೊಳ್ಳಲು ಸಂತೋಷವಾಗಿದೆ ಎಂದು ಸಿಂಗ್‌ ತಮ ಸಭೆಯ ನಂತರ ಎಕ್ಸ್ ಮಾಡಿದ್ದಾರೆ.

ಅವರು ಪ್ರಮುಖ ಅಮೆರಿಕ ರಕ್ಷಣಾ ಕಂಪನಿಗಳೊಂದಿಗೆ ಫಲದಾಯಕ ವಿನಿಮಯವನ್ನು ಹೊಂದಿದ್ದರು ಮತ್ತು ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮವನ್ನು ವೇಗಗೊಳಿಸಲು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡಲು ಅವರನ್ನು ಆಹ್ವಾನಿಸಿದರು.
ಯುಎಸ್‌‍ಐಎಸ್‌‍ಪಿಎಫ್‌ (ಯುಎಸ್‌‍ ಇಂಡಿಯಾ ಸ್ಟ್ರಾಟೆಜಿಕ್‌ ಪಾರ್ಟ್‌ನರ್‌ಶಿಪ್‌ ಫೋರಮ್‌‍) ಆಯೋಜಿಸಿದ್ದ ಡಿಫೆನ್ಸ್‌‍ ಇಂಡಸ್ಟ್ರಿ ರೌಂಡ್‌ಟೇಬಲ್‌ನಲ್ಲಿ ಪ್ರಮುಖ ಯುಎಸ್‌‍ ರಕ್ಷಣಾ ಕಂಪನಿಗಳೊಂದಿಗೆ ಫಲಪ್ರದ ಸಂವಾದ ನಡೆಸಿದೆ.

ರಕ್ಷಣಾ ವಲಯದಲ್ಲಿ ಆತನಿರ್ಭರ್ತವನ್ನು ಸಾಧಿಸಲು ನಮ ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮವನ್ನು ವೇಗಗೊಳಿಸಲು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡಲು ಅವರನ್ನು ಆಹ್ವಾನಿಸಿದೆ. ಒಟ್ಟಾಗಿ, ಭಾರತೀಯ ಮತ್ತು ಅಮೆರಿಕ ಕಂಪನಿಗಳು ಜಗತ್ತಿಗೆ ಸಹ-ಅಭಿವದ್ಧಿ ಮತ್ತು ಸಹ-ಉತ್ಪಾದನೆ ಮಾಡುತ್ತವೆ ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದರು.

RELATED ARTICLES

Latest News