ನವದೆಹಲಿ,ಆ.25-ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸಮೀಪದ ಗುರುಗ್ರಾಮವು ಕೆಲವು ದಶಕಗಳಿಂದ ವಾಯುಮಾಲಿನ್ಯಕ್ಕೆ ನಲುಗಿಹೋಗಿವೆ. ವಾಯು ಮಾಲಿನ್ಯಕ್ಕೆ ಸಾರಿಗೆ ಕ್ಷೇತ್ರವು ಪ್ರಮುಖ ಕಾರಣವಾಗಿದೆ. ಐಸಿಸಿಟಿ ಹಾಗೂ ಎಫ್ಐಎ ಫೌಂಡೇಶನ್ ಸಹಯೋಗದಲ್ಲಿ ದಿ ರಿಯಲ್ ಅರ್ಬನ್ ಎಮಿಷನ್ಸ್ ಇನಿಶಿಯೇಟವ್ (ಟಿಆರ್ಯುಇ) ಸಂಸ್ಥೆಯು ನಿಯಮಿತವಾಗಿ ವಾಹನಗಳ ತಪಾಸಣೆ ಹಾಗೂ ವಾಯು ಮಾಲಿನ್ಯಕಾರಕ ವಾಹನಗಳ ಪತ್ತೆ ಮಾಡಿದೆ.
ಐಸಿಸಿಟಿ ತಾಂತ್ರಿಕ ಸಹಯೋಗದಲ್ಲಿ ಅಧ್ಯಯನ ವರದಿ ತಯಾರಿಸಲಾಗಿದ್ದು, ದೆಹಲಿ ಹಾಗೂ ಗುರುಗ್ರಾಮದಲ್ಲಿ ವಾಹನಗಳು ವಾಯು ಮಾಲಿನ್ಯಕಾರಕ ಅಂಶಗಳನ್ನು ಹೊರಸೂಸುತ್ತಿವೆ ಎಂಬುದು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಬಳಕೆ ಬಳಿಕ ಸಾಬೀತಾಗಿದೆ.
ದ್ವಿಚಕ್ರ ವಾಹನಗಳು, ಆಟೋಗಳು, ಖಾಸಗಿ ಕಾರುಗಳು ಹಾಗೂ ಲಘು ಸಗಟು ಸಾಗಣೆ ವಾಹನಗಳಿಂದ (ಎಲ್ಜಿವಿ) ನೈಟೋಜೆನ್ ಆಕ್ಸೈಡ್ (ಎನ್ಒಎಕ್‌್ಸ), ಕಾರ್ಬನ್ ಮೊನಾಕ್ಸೈಡ್ (ಸಿಒ), ಹೈಡೋಕಾರ್ಬನ್ (ಎಚ್ಸಿ) ಹಾಗೂ ಅಲ್ಟ್ರಾವೈಲೆಟ್ (ಯುವಿ) ಸೇರಿ ಹಲವು ಮಾಲಿನ್ಯ ಕಾರಕ ಅಂಶಗಳನ್ನು ಹೊರಸೂಸುತ್ತಿವೆ ಎಂದು ವರದಿ ತಿಳಿಸಿದೆ. ವಾಯುಮಾಲಿನ್ಯ ತಡೆಗಾಗಿ ನೀತಿ ಜಾರಿಗೆ ತರಬೇಕು ಎಂಬುದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಹಾಗೂ ಗುರುಗ್ರಾಮದ 20 ಕಡೆಗಳಲ್ಲಿ 10 ಸಾವಿರ ವಾಹನಗಳನ್ನು ತಪಾಸಣೆ ಮಾಡಿದ ಬಳಿಕ ಈ ಅಂಶವು ಬಯಲಾಗಿದೆ.
ಸಾರಿಗೆ ವಾಹನಗಳಿಂದ ರಿಯಲ್ ವರ್ಲ್ಸ್ ಹೊರಸೂಸುವಿಕೆ ಪ್ರಮಾಣವು ಜಾಸ್ತಿಯಾಗಿದೆ ಎಂದು ಸಮೀಕ್ಷಾ ವರದಿಯಿಂದ ದೃಢಪಟ್ಟಿದೆ. ಹಾಗಾಗಿ, ನಾವು ದೇಶದಲ್ಲಿ ಇದೇ ಮೊದಲ ಬಾರಿಗೆ ವಾಹನಗಳ ತಪಾಸಣೆ ಮೂಲಕ ವರದಿ ತಯಾರಿಸಿದ್ದೇವೆ.
ಹಾಗಾಗಿ, ದೇಶದಲ್ಲಿ ವಾಯುಮಾಲಿನ್ಯ ತಡೆಗೆ ನೀತಿ ಜಾರಿಗೊಳಿಸುವ ಹಾಗೂ ಇನ್ನಷ್ಟು ವಾಹನಗಳನ್ನು ತಪಾಸಣೆ ಮಾಡಿ, ಮಾಲಿನ್ಯ ಕಾರಕಗಳು ರಹಿತವಾದ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಐಸಿಸಿಟಿ ಇಂಡಿಯಾ ಎಂಡಿ ಅಮಿತ್ ಭಟ್ ತಿಳಿಸಿದ್ದಾರೆ.
ಐಸಿಸಿಟಿ ಇಂಡಿಯಾ ಸಂಶೋಧಕ ಅನಿರುದ್‌್ಧ ನಾಲಾ ಮಾತನಾಡಿ, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವು ವಾಯುಮಾಲಿನ್ಯ ಕಾರಕ ಅಂಶಗಳನ್ನು ಬಿಡುಗಡೆ ಮಾಡುವ ವಾಹನಗಳನ್ನು ಪತ್ತೆಹಚ್ಚಲು ಹೆಚ್ಚಿನ ಸಹಕಾರಿಯಾಗಿದೆ ಎಂದರು.