No menu items!
Monday, September 16, 2024
No menu items!
Homeರಾಜ್ಯಡಿಸಿಇಟಿ-2024ಗೆ ಪ್ರವೇಶ ಪಡೆಯಲು ಆ.27ರ ಗಡುವು

ಡಿಸಿಇಟಿ-2024ಗೆ ಪ್ರವೇಶ ಪಡೆಯಲು ಆ.27ರ ಗಡುವು

August 27 is the deadline for admission to DCET-2024

ಬೆಂಗಳೂರು,ಆ.25- ಕರ್ನಾಟಕ ಪ್ರದೇಶ ಪ್ರಾಧಿಕಾರವು ಡಿಸಿಇಟಿ-2024ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಆ.27ರ ಗಡುವು ನಿಗದಿಪಡಿಸಿದೆ.

ಅಂದು ಸಂಜೆ 5.30 ಗಂಟೆಯೊಳಗೆ ಸಂಬಂಧಿಸಿದ ಕಾಲೇಜಿನಲ್ಲಿ ಅಭ್ಯರ್ಥಿಗಳು ಪ್ರವೇಶ ಪಡೆಯಬೇಕಾಗಿದೆ. ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಆ.20 ರಂದು ಪ್ರಕಟಿಸಿದೆ.

ಕೆಲವು ಅಭ್ಯರ್ಥಿಗಳು ದಿನಾಂಕ ವಿಸ್ತರಣೆ ಕೋರಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರದ ಪ್ರಕ್ರಿಯೆಗಳಿಗೆ ಕೆಇಎ ಮತ್ತೊಮೆ ದಿನಾಂಕವನ್ನು ವಿಸ್ತರಿಸಿ ವೇಳಾಪಟ್ಟಿಯನ್ನು ಮರುನಿಗದಿ ಮಾಡಿದೆ.

ಅಭ್ಯರ್ಥಿಗಳು ಚಲನ್ ಡೌನ್ಲೌಡ್ ಮಾಡಿಕೊಳ್ಳಲು ನಾಳೆ ಸಂಜೆ 4 ಗಂಟೆಯವರೆಗೆ ಅವಕಾಶವಿದೆ. ಶುಲ್ಕ ಪಾವತಿ ಮಾಡಲು ನಾಳೆಯಿಂದ ಆ.27 ರವರೆಗೆ ಕಾಲಾವಕಾಶ ನೀಡಲಾಗಿದೆ.ಶುಲ್ಕ ಪಾವತಿಯ ನಂತರ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಆ.27 ರ ಸಂಜೆ 4 ಗಂಟೆಯವರೆಗೆ ಅವಕಾಶವನ್ನು ಕೆಇಎ ನೀಡಲಾಗಿದೆ.

RELATED ARTICLES

Latest News