Friday, September 20, 2024
Homeರಾಜಕೀಯ | Politicsಯಾವುದೇ ಹಂತದಲ್ಲೂ ಸಿಎಂ ರಾಜೀನಾಮೆ ನೀಡಲ್ಲ : ಎಚ್.ಸಿ.ಮಹದೇವಪ್ಪ

ಯಾವುದೇ ಹಂತದಲ್ಲೂ ಸಿಎಂ ರಾಜೀನಾಮೆ ನೀಡಲ್ಲ : ಎಚ್.ಸಿ.ಮಹದೇವಪ್ಪ

ಬೆಂಗಳೂರು,ಆ.25- ಮುಡಾ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ನಲ್ಲಿ ಎತ್ತಿ ಹಿಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕತೆ ಹಿನ್ನಲೆಯಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಹಂತದಲ್ಲೂ ಭಾಗಿಯಾಗಿಲ್ಲ. ಸ್ವಜನಪಕ್ಷಪಾತ, ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ ಇದರಲ್ಲಿ ನೈತಿಕತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು.

ದೆಹಲಿಯಲ್ಲಿ ನಡೆದಿರುವ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಮುಡಾ ಪ್ರಕರಣದ ಬಗ್ಗೆ ಚರ್ಚೆಯಾಗಿದೆ. ಆದರೆ ನಾಯಕತ್ವ ಬದಲಾವಣೆ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಹೈಕಮಾಂಡ್, ಕಾಂಗ್ರೆಸ್ನ ಶಾಸಕರು, ಸಚಿವರು ಮುಖ್ಯಮಂತ್ರಿಯೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಈ ಹಂತದಲ್ಲಿ ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ ಎಂದರು.

ಆಪರೇಷನ್ ಕಮಲ ಹೊಸದಲ್ಲ. ಬಿಜೆಪಿ-ಜೆಡಿಎಸ್ನವರು ಜನರಿಂದ ಮತ ಪಡೆದು ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲು ಯಶಸ್ವಿಯಾಗಿಲ್ಲ. ಹೀಗಾಗಿ ಹಿಂಬಾಗಿಲ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದು ಯಶಸ್ವಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿಯ ನಾಯಕರು, ಜೆಡಿಎಸ್ ಮುಖಂಡರು ಹತ್ತು ತಿಂಗಳಲ್ಲೇ ಸರ್ಕಾರ ಬದಲಾಗಲಿದೆ ಎಂದು ಹೇಳಿದ್ದಾರೆ. ಸಂಖ್ಯಾ ಬಲದ ಕೊರತೆ ಇದ್ದಾಗಲೂ ಸರ್ಕಾರ ರಚಿಸುತ್ತೇವೆ ಎಂದು ಯಾವ ಆಧಾರದ ಮೇಲೆ ಹೇಳಲು ಸಾಧ್ಯ? ಅದರ ಅರ್ಥ ಬಿಜೆಪಿಯವರು ತಮ ಹಳೆಯ ಛಾಳಿಯನ್ನೇ ಮುಂದುವರೆಸಿದ್ದಾರೆ. ಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆಂದೇ ಅರ್ಥವಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸುತ್ತಿದೆ. ಇದನ್ನು ಸಹಿಸಲು ವಿಪಕ್ಷಗಳಿಗೆ ಆಗುತ್ತಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. 1999ರಲ್ಲಿ ಸೋಲು ಕಂಡಿದ್ದರು. ಡಾಲರ್ರಸ ಕಾಲೋನಿಯ ಮನೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಮನೆಯ ಖರ್ಚಿಗೆ ಕಷ್ಟಪಟ್ಟು ಹೇಗೋ ಹೊಂದಿಸಿ 50 ಸಾವಿರ ನೀಡುತ್ತಿದ್ದರು. ಹಬ್ಬ ಹಾಗೂ ಇತರ ಸಂದರ್ಭಗಳು ಬಂದಾಗ ಖರ್ಚುಗಳು ಹೆಚ್ಚಾಗಿ ಮತ್ತಷ್ಟು ಹಣ ಕೇಳಿದರೆ, ಮನೆಯ ಖರ್ಚಿಗೆ ಇನ್ನು ಎಷ್ಟು ಹಣ ಬೇಕೆಂದು ಜಗಳ ಮಾಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹಳೆಯ ಘಟನೆಯನ್ನು ಸರಿಸಿಕೊಂಡರು.

ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಯಾರೂ ಕಾಯುತ್ತಿಲ್ಲ. ಬಿಜೆಪಿ ಜೆಡಿಎಸ್ನಲ್ಲಿ ಗೊಂದಲಗಳಿವೆ. ನಮ ಸರ್ಕಾರವನ್ನು ಅಸ್ಥಿರಗೊಳಿಸಲು ಅವರು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ದಲಿತ ಮುಖ್ಯಮಂತ್ರಿ ವಿಚಾರ ಸದ್ಯಕ್ಕಿಲ್ಲ. ಎಲ್ಲಾ ಸಮುದಾಯಗಳಿಗೂ ಅವಕಾಶ ಸಿಗಬೇಕೆಂಬುದು ಕಾಂಗ್ರೆಸ್ನ ಉದ್ದೇಶ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ತಾವು ಸದಾಕಾಲ ಸಿದ್ದರಾಮಯ್ಯನವರ ಜೊತೆಗಿರುವುದಾಗಿ ಮಹದೇವಪ್ಪ ತಿಳಿಸಿದರು.

RELATED ARTICLES

Latest News