ಪ್ಯಾರಿಸ್,ಆ.27-ಜಾಗತಿಕ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನು ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ನಿಂದನೆ ಚಿತ್ರಗಳ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ರಷ್ಯಾದಲ್ಲಿ ಜನಿಸಿದ ಡುರೊವ್ ಅವರು ತಮ ಬಾಲ್ಯದ ಬಹುಪಾಲು ಇಟಲಿಯಲ್ಲಿ ಕಳೆದಿದ್ದರು ಮತ್ತು ಫ್ರಾನ್ಸ್ , ರಷ್ಯಾ, ಕೆರಿಬಿಯನ್ ದ್ವೀಪ ರಾಷ್ಟ್ರವಾದ
ಸೇಂಟ್ ಕಿಟ್ಸ್ ಮತ್ತು ನೆವಿಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನ ನಾಗರಿಕರಾಗಿದ್ದಾರೆ.ಕಳೆದ ಆ.24 ರಂದು ಅಜೆರ್ಬೈಜಾನ್‌ನಿಂದ ತಮ ಖಾಸಗಿ ಜೆಟ್ ವಿಮಾನದಲ್ಲಿ ಫ್ರಾನ್ಸ್ ನ ಪ್ಯಾರಿಸ್-ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದಂತೆ ಬಂಧಿಸಲಾಯಿತು.
ಆದರೆ ಬಂಧನದ ಬಗ್ಗೆ ಯಾವುದೇ ಮಾಹಿತಿ ನೀಡದ ಹಿನ್ನಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಪರ ವಿರೋಧ ಮಾತುಗಳು ಕೇಳಿಬಂದಿತ್ತು.ಟೆಲಿಗ್ರಾಮ್ ಕಾರ್ಯವಿಧಾನ ಕಾನೂನುಗಳಿಗೆ ಬದ್ಧವಾಗಿದೆ ಮತ್ತು ಅದರ ವಿಷಯಗಳು ಮಾಡರೇಶನ್ ಉದ್ಯಮದ ಮಾನದಂಡಗಳನ್ನು ಪಾಲಿಸಿದೆ ಮರೆಮಾಚಲು ಏನೂ ಇಲ್ಲ ಮತ್ತು ಯುರೋಪ್‌ಗೆ ಆಗಾಗ್ಗೆ ಪ್ರಯಾಣಿಸುತ್ತಾನೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಫ್ರಾನ್ಸ್ ನಲ್ಲಿ 950 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಟೆಲಿಗ್ರಾಮ್ ಬಳಕೆದಾರರಿದ್ದಾರೆ.ಸಂದೇಶ ಕಳುಹಿಸುವ ಸಾಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ಇಸ್ಲಾಮಿಕ್ ಉಗ್ರಗಾಮಿಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಈ ಅಪ್ಲಿಕೇಶನ್ ಬಳಸಿದ್ದಾರೆ ಎಂದು ಫ್ರೆಂಚ್ ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
2013 ರಲ್ಲಿ ಡ್ಯುರೊವ್ ಮತ್ತು ಅವರ ಸಹೋದರ ನಿಕೊಲಾಯ್ ಅವರು ಟೆಲಿಗ್ರಾಮ್ ಅನ್ನು ಪ್ರಾರಂಭಿಸಿದರು.ಟೆಲಿಗ್ರಾಮ್ ಮೊದಲು, ಡುರೊವ್ ರಷ್ಯಾದ ಅತಿದೊಡ್ಡ ಸಾಮಾಜಿಕ ಜಾಲತಾಣವನ್ನು ಸ್ಥಾಪಿಸಿದರು. 2011 ಮತ್ತು 2012 ರ ಅಂತ್ಯದಲ್ಲಿ ಮಾಸ್ಕೋದಲ್ಲಿ ಸಾಮೂಹಿಕ ಪ್ರಜಾಪ್ರಭುತ್ವ-ಪರ ಪ್ರತಿಭಟನೆಗಳು ನಡೆದ ನಂತರ ರಷ್ಯಾದ ಸರ್ಕಾರದ ಕೆಂಗಣ್ಣಿಗೆ ಗುರುಯಾಗಿ ಕಂಪನಿಯು ಒತ್ತಡಕ್ಕೆ ಒಳಗಾಯಿತು.ನಮತರ ಅದರ ಬಳಕೆಗೆ ನಿರ್ಬಂಧ ಹೇರಲಾಗಿತ್ತು.
2014 ರಲ್ಲಿ ರಷ್ಯಾದ ಅಧಿಕಾರಿಗಳ ಒತ್ತಡದ ನಂತರ ಡುರೊವ್‌ನಲ್ಲಿ ತನ್ನ ಪಾಲನ್ನು ಮಾರಾಟ ಮಾಡಿ ದೇಶವನ್ನು ತೊರೆದರು.ನಂತರ ಟೆಲಿಗ್ರಾಮ್ ದುಬೈನಲ್ಲಿ ನೆಲೆಗೊಂಡಿದೆ, ಟೆಲಿಗ್ರಾಮ್ ಸದ್ಯ ಜಾಗತಿಕವಾಗಿ ಪ್ರಾಭಲ್ಯ ಹೆಚ್ಚಿಸಿಕೊಳ್ಳುವ ನಡುವೆ ನಮ ಬಳಕೆದಾರರ ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ನಾವು ರಕ್ಷಿಸಬಹುದು ಎಂದು ಕಳೆದ ನೀಡಿದ್ದ ಹೇಳಿಕೆ ಫ್ರೆಂಚ್ ಮಾಧ್ಯಮದಲ್ಲಿ ವರದಿಯಾಗಿತ್ತು.ನಂತರ ಟೆಲಿಗ್ರಾಮ್ ತಾಣದ ಮೇಲೆ ಕಣ್ಣಿಟ್ಟು ತನಿಖೆ ನಡೆಸಿದಾಗ ಹಲವು ಕಾನೂನು ಬಾಹಿರ ಕೃತ್ಯ ಕಂಡುಬಂದು ವಾರೆಂಟ್ ಹೊರಡಿಸಲಾಗಿತ್ತು.
ಈಗ ಡ್ಯುರೊವ್ ಅವರನ್ನು ಬಂಧಿಸಲಾಗಿದೆ ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಇತರ ಅಪರಾಧಗಳಿಗೆ ಟೆಲಿಗ್ರಾಮ್ ಬಳಸಲಾಗಿದೆ ಎಂದು ಆರೋಪಿಸಲಾಗಿದೆ ಎಂಬ ವಿವರಗಳು ಲಭ್ಯವಿವೆ.
ಫ್ರೆಂಚ್ ಕಾನೂನಿನ ಪ್ರಕಾರ, ಡುರೊವ್ ನಾಲ್ಕು ದಿನಗಳವರೆಗೆ ವಿಚಾರಣೆಗಾಗಿ ಕಸ್ಟಡಿಯಲ್ಲಿ ಉಳಿಯಬಹುದು. ಅದರ ನಂತರ, ನ್ಯಾಯಾಧೀಶರು ಅವನ ಮೇಲೆ ರುವ ಆರೋಪ ಕುರುತು ತನಖೆ ಅಥವಾ ಬಿಡುಗಡೆ ಮಾಡಲು ನಿರ್ಧರಿಸಬಹುದು