Monday, September 16, 2024
Homeರಾಷ್ಟ್ರೀಯ | Nationalಕುಸಿದು ಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ, ತನಿಖೆಗೆ ಆದೇಶ

ಕುಸಿದು ಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ, ತನಿಖೆಗೆ ಆದೇಶ

Chhatrapati Shivaji Maharaj Statue Collapse: FIR filed against contractor Jaydeep Apte

ಮುಂಬೈ,ಆ.27-ಭಾರೀ ಗಾಳಿ,ಮಳೆಯ ನಡುವೆ ಸಿಂಧುದುರ್ಗ ಜಿಲ್ಲೆಯ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆ ಕುಸಿದು ಬಿದ್ದ ಕೆಲವೇ ಗಂಟೆಗಳ ಬಳಿಕ ಭಾರತೀಯ ನೌಕಾಪಡೆ ತನಿಖೆಗೆ ಆದೇಶಿಸಲಾಗಿದೆ.

ಈ ನಡುವೆ ಗುತ್ತಿಗೆದಾರ ಮತ್ತು ರಚನಾತ್ಮಕ ಸಲಹೆಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಏಕಾಏಕಿ ಸುಮಾರು 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನಗೊಂಡಿದ್ದು ಭಾರಿ ಆತಂಕ ಮೂಡಿಸಿತ್ತು. ಈಗ ಗುತ್ತಿಗೆದಾರ ಜಯದೀಪ್‌ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್‌ ಪಾಟೀಲ್‌ ವಿರುದ್ಧ ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಡಲ ತೀರ ಸಮೀಪವೇ 8 ತಿಂಗಳ ಹಿಂದೆಯಷ್ಟೇ ನೌಕಾಪಡೆಯ ದಿನದಂದು ಪ್ರತಿಮೆ ಅನಾವರಣಗೊಂಡಿತ್ತು.ಈಗ ಅದು ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಘಟನೆಯ ಕುರಿತು ತನಿಖೆ ಮಾಡುವುದಾಗಿ ಭಾರತೀಯ ನೌಕಾಪಡೆ ಹೇಳಿದೆ.

ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ನೆರವನ್ನೂ ಪಡೆಯಲಿದ್ದೇವೆ ,ಈಗಾಗಲೆ ವಿಶೇಷ ತಂಡವನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಮೆಯನ್ನು ಮರುಸ್ಥಾಪಿಸಲು ಕಾಮಗಾರಿ ಶುರುವಾಗಿದೆ ಅವರು ಹೇಳಿದರು

RELATED ARTICLES

Latest News