Sunday, September 15, 2024
Homeರಾಷ್ಟ್ರೀಯ | Nationalಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಫಿಕ್ಸ್

ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಫಿಕ್ಸ್

Former Jharkhand CM Champai Soren will join BJP, Himanta Biswa Sarma confirms

ನವದೆಹಲಿ,ಆ.27-ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್‌ ಆ.30 ರಂದು ಬಿಜೆಪಿ ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

ಸೋರೆನ್‌ ಆ30ರಂದು ರಾಂಚಿಯಲ್ಲಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸೊರೆನ್‌ ಭೇಟಿಯಾಗಿರುವ ಚಿತ್ರವನ್ನು ಅವರು ಇಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಸಹ-ಪ್ರಭಾರಿಯಾಗಿರುವ ಶರ್ಮಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸೋರೆನ್‌ ಅವರು ಆ.18 ರಂದು ದೆಹಲಿಯಲ್ಲಿ ಕೆಲವು ಶಾಸಕರೊಂದಿಗೆ ಭೇಟಿಯಾದ ನಂತರ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಿಂದ ಬದಲಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಈ ಬೆಳವಣಿಗೆ ನಡೆದಿದೆ.

ಇದಲ್ಲದೆ, ಎಕ್ಸ್ ನಲ್ಲಿ ವಿವರವಾದ ಹೇಳಿಕೆಯನ್ನು ನೀಡಿದ ಸೋರೆನ್‌ ಮುಖ್ಯಮಂತ್ರಿ ಸ್ಥಾನಕ್ಕೆ ಕೆಳಗಿಳಿಸುವಾಗ ಅವಮಾನಿಸಿದರು,ಮತ್ತು ಎಲ್ಲಾ ತತ್ವ ಸಿದ್ದಾಂತ ಜೆಎಂಎಂನಲ್ಲಿ ನಾಶವಾಗಿದೆ ಎಂದು ಕಿಡಿಕಾಡಿದದರು.

ಬುಡಕಟ್ಟು ಸಮುದಾಯ ಚಂಪೈ ಸೊರೆನ್‌ ಅವರಿಗೆ ಸೂಕ್ತ ಸ್ಥಾನಮಾನ ಭರವಸೆ ನೀಡಿದ ನಂತರ ಅವರು ಕಮಲ ಪಡೆ ಸೇರುತ್ತಿದ್ದಾರೆ ಇದು ಇಂಡಿಯಾ ಮೈತ್ರಿಗೆ ದೊಡ್ಡ ಆಗಾತ ಎನ್ನಲಾಗಿದೆ ,ಸಮೀಪವಿರುವ ವಿಧಾನಸಭೆ ಚುನಾವಣೆ ನಡುವೆ ಈ ಬೆಳವಣಿಗೆ ಜಾರ್ಖಂಡ್‌ನಲ್ಲಿ ಭಾರಿ ರಾಜಕೀಯ ಸಂಚಲನ ಉಂಟಾಗಿದೆ.

RELATED ARTICLES

Latest News