ಬೆಂಗಳೂರು,ಆ.28– ಕನ್ನಡ ವಿಶ್ವವಿದ್ಯಾಲಯ, ಜಾನಪದ ವಿವಿ, ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಉತ್ತರ ಸೇರಿದಂತೆ ಹತ್ತು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ರಾಜ್ಯ ಸರ್ಕಾರ ಸದಸ್ಯರನ್ನು ನಾಮನಿರ್ದೇಶನ ಮಾಡಿದೆ.
ಮೂರು ವರ್ಷಗಳ ಅವಧಿಗೆ ಸಿಂಡಿಕೇಟ್ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಮಹಿಳೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗಕ್ಕೆ ನಾಮನಿರ್ದೇಶನ ಸದಸ್ಯರ ನೇಮಕದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ಡಾ.ಬಿ.ಯು.ಸುಮ, ಸೋಮಶೇಖರ ಬಣ್ಣದಮನೆ, ಡಾ.ಎಸ್.ಎಂ.ಮುತ್ತಯ್ಯ, ಎನ್.ಎ.ಮೊಹಮದ್, ಇಸಾಯಿಲ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಪಣಿರಾಜ್, ಡಾ.ನಟರಾಜ್ ಹುಳಿಯಾರ್, ಬಿ.ಆರ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ವಿವಿ ಸಿಂಡಿಕೇಟ್‌ಗೆ ಡಾ.ಜಯಶ್ರೀ ಹೆಗಡೆ, ಎಂ.ಎ.ಮಹದೇವ ನಾಯ್ಕ, ಡಾ.ಕೆ.ಷರೀಫಾ, ಡಿ.ವಿ.ಗಂಗರಾಜು, ದಂಡಕೆರೆ ನಾಗರಾಜ್, ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಆಯೇಷ, ಫರ್ಜಾನಾ, ಡಾ.ಎಚ್.ಕೃಷ್ಣರಾಮ್, ಡಾ.ಫ್ರಾನ್ಸಿಸ್ ಅಸ್ಸಿಸಿ ಅಲೇದ, ವಿ.ಶಿವಕುಮಾರ್, ಕೆ.ಪಿ.ಪಾಟೀಲ್, ಡಾ.ಬೀರಪ್ಪ.ಎಚ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಸಹನ.ಎಸ್.ಆರ್, ಜಯದೀಪ್, ಅರ್ಬಾಜ್ ಪಾಷ, ಎಂ.ಗೋಪಾಲಗೌಡ, ನಿರೂಪ್, ಕೆ.ಬಸವರಾಜ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಪ್ರೊ.ಸಾಕಮ.ಬಿ, ಶಿವಕುಮಾರ್.ಎಂ, ಮುಸಾವಿರ್ ಬಾಷಾ.ಎಂ, ಲಕ್ಷ್ಮಿಕಾಂತ ಚಿಮನೂರು, ಕೆ.ಪಿ.ಸಿ.ಪಾಲ್, ಎಚ್.ಜಿ.ಅರವಿಂದ, ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಡಾ.ಶ್ರೀದೇವಿ.ಎಸ್ ಕಟ್ಟಿಮನಿ, ಸಿದ್ದಪ್ಪ ಸುಳ್ಳದ್, ಡಾ.ಬೀರ್‌ಜಾದ ಪಹೀ ಮುದ್ದೀನ್, ಮಲ್ಲಣ್ಣ.ಎಸ್ ಮಡಿವಾಳ, ಉದಯ್ ಕಾಂತ್, ಸಿದ್ದಪ್ಪ ಮೂಲಗೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್.ಚಿನ್ನ, ಜೀಶಾನ್ ಆಖಿಲ್ ಸಿದ್ದಖಿ, ಶಿವಣ್ಣ, ಚನ್ನಬಸವ, ಕೆ.ಪ್ರತಿಮಾ, ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಜಯಲಕ್ಷ್ಮಿ ನಾಯಕ್, ಡಾ.ವೈ.ಆರ್ತೋಬ ನಾಯ್ಕ, ಬಿ.ಪೀರ್‌ಬಾಷಾ, ಶಿವಕುಮಾರ್.ಕೆ, ಡಾ.ಅಮರೇಶ ನಿಗಡೋಣಿ ಹಾಗೂ ಚ.ಹ.ರಘುನಾಥ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ.
ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಡಾ.ಜ್ಯೋತಿಲಕ್ಷ್ಮಿ .ಡಿ.ಪಿ, ರಾಮಪ್ಪ ಮಾನಪ್ಪ ಲಂಬಾಣಿ, ಸಹನ ಪಿಂಜಾರ, ಮೋಹನ್‌ಕುಮಾರ್.ಎನ್, ಗೋರೆವಾಲೆ ಚಂದ್ರಶೇಖರ್, ಡಾ.ಮೊಗುಳಿ ಗಣೇಶ್, ಸಂಸ್ಕೃತಿ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಡಾ.ಬಂಗಾರಮ.ಕೆ, ಡಾ.ಶಿವಲಿಂಗಯ್ಯ, ಡಾ.ಮುನೀರ್ ಅಹಮದ್, ಬಸಪ್ಪ ಡೊಂಕಬಳ್ಳಿ, ಹನುಮಂತನಾಥ ಹಾಗೂ ನಾರಾಯಣ ಯಾಜಿ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.