ಅಟ್ಲಾಂಟಾ, ಆ.27- ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣದ ಬಳಿಯ ಡೆಲ್ಟಾ ಏರ್ಲೈನ್ಸ್ ನಿರ್ವಹಣಾ ಸೌಲಭ್ಯತಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಪೋಟದ ಬಗ್ಗೆ ತನಿಖೆ ಮಾಡಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಡೆಲ್ಟಾ ಕಂಪನಿ ಹೇಳಿದೆ.ವಿಮಾನದಲ್ಲಿ ಟೈರ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ . ಅಟ್ಲಾಂಟಾದ ಅಗ್ನಿಶಾಮಕ ಘಟಕಗಳು ಮತ್ತು ಪೊಲೀಸರು ಸ್ಥಳಕ್ಕೆ ದಾವಿಸಿದ್ದಾರೆ.
ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ನಿರ್ವಹಣಾ ಹ್ಯಾಂಗರ್ಗೆ ಬೆಳಿಗ್ಗೆ 5 ಗಂಟೆಯ ಸುಮಾರಿನಲ್ಲಿ ಕರೆ ಬಂದಿದೆ ಎಂದು ಟ್ಲಾಂಟಾ ಜರ್ನಲ್-ಕಾನ್ಸ್ಟಿಟ್ಯೂಷನ್ ವರದಿ ಮಾಡಿದೆ. ಘಟನೆಯಿಂದ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೊರಗೆ ಹೋಗುವ ವಿಮಾನಗಳ ಮೇಲೆ ಪರಿಣಾಮ ಬೀರಲಿಲ್ಲ.
ಅಟ್ಲಾಂಟಾ ತಾಂತ್ರಿಕ ಕಾರ್ಯಾಚರಣೆಗಳ ನಿರ್ವಹಣೆ ಸೌಲಭ್ಯದಲ್ಲಿ ಇಂದು ಬೆಳಿಗ್ಗೆ ನಡೆದ ಘಟನೆಯಲ್ಲಿ ಇಬ್ಬರು ತಂಡದ ಸದಸ್ಯರನ್ನು ಕಳೆದುಕೊಂಡು ಮತ್ತೊಬ್ಬರು ಗಾಯಗೊಂಡಿದ್ದರಿಂದ ಡೆಲ್ಟಾ ಕುಟುಂಬವು ಎದೆಗುಂದಿದೆ ಎಂದು ಡೆಲ್ಟಾ ಹೇಳಿಕೆಯಲ್ಲಿ ತಿಳಿಸಿದೆ. ನಾವು ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ.
ಸ್ಫೋಟ ಸಂಭವಿಸಿದ ಸ್ಥಳ ಡೆಲ್ಟಾ ಟೆಕ್ಆಪ್ಸ್ ನ ಭಾಗವಾಗಿದೆ, ಇದು ಡೆಲ್ಟಾ ಮತ್ತು ಪ್ರಪಂಚದಾದ್ಯಂತ 150 ಕ್ಕೂ ಹೆಚ್ಚು ವಾಯುಯಾನ ಮತ್ತು ವಿಮಾನಯಾನ ಗ್ರಾಹಕರಿಗೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಯನ್ನು ನಿರ್ವಹಿಸುತ್ತದೆ.