ದಿಬ್ರುಗಢ,ಆ.29- ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಂಗಾಳ ಸುಟ್ಟುಹೋದರೆ, ಅಸ್ಸಾಂ ಆಶಾಂತಗೊಳ್ಳಲಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದು, ದೀದಿ, ಅಸ್ಸಾಂಗೆ ಬೆದರಿಕೆ ಹಾಕಲು ನಿಮಗೆ ಎಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.
ಎಕ್‌್ಸನಲ್ಲಿನ ಪೋಸ್ಟ್ನಲ್ಲಿ, ಅಸ್ಸಾಂ ಮುಖ್ಯಮಂತ್ರಿ, ದೀದಿ, ನೀವು ಅಸ್ಸಾಂಗೆ ಬೆದರಿಕೆ ಹಾಕಲು ಎಷ್ಟು ಧೈರ್ಯ? ನಮಗೆ ಕೆಂಪು ಕಣ್ಣುಗಳನ್ನು ತೋರಿಸಬೇಡಿ. ನಿಮ ವೈಫಲ್ಯದ ರಾಜಕೀಯದಿಂದ ಭಾರತವನ್ನು ಸುಡಲು ಸಹ ಪ್ರಯತ್ನಿಸಬೇಡಿ. ನೀವು ಮಾತನಾಡಲು ಇದು ಸರಿಹೊಂದುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಕೋಲ್ಕತ್ತಾದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ ಪಕ್ಷವನ್ನು ಬಳಸಿಕೊಂಡು ಬಂಗಾಳದಲ್ಲಿ ಬೆಂಕಿಯನ್ನು ಉಂಟುಮಾಡುತ್ತಿದ್ದಾರೆ.
ಕೆಲವರು ಇದು ಬಾಂಗ್ಲಾದೇಶ ಎಂದು ಭಾವಿಸುತ್ತಾರೆ. ನಾನು ಬಾಂಗ್ಲಾದೇಶವನ್ನು ಪ್ರೀತಿಸುತ್ತೇನೆ; ಅವರು ನಮಂತೆ ಮಾತನಾಡುತ್ತಾರೆ ಮತ್ತು ನಮ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ನೆನಪಿಡಿ, ಬಾಂಗ್ಲಾದೇಶ ಪ್ರತ್ಯೇಕ ದೇಶ, ಮತ್ತು ಭಾರತ ಪ್ರತ್ಯೇಕ ದೇಶ. ಮೋದಿ ಬಾಬು ತಮ ಪಕ್ಷವನ್ನು ಇಲ್ಲಿ ಬೆಂಕಿ ಹಚ್ಚಲು ಬಳಸುತ್ತಿದ್ದಾರೆ.
ಬಂಗಾಳ, ಅಸ್ಸಾಂ, ಈಶಾನ್ಯ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ದೆಹಲಿಯನ್ನು ಸುಟ್ಟುಹಾಕುತ್ತೇವೆ, ನಾವು ನಿಮ ಕುರ್ಚಿಯನ್ನು ಉರುಳಿಸುತ್ತೇವೆ, ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ ಮತ್ತು ಅಂದಿನಿಂದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಹಲವಾರು ಪ್ರತಿಭಟನೆಗಳನ್ನು ನಡೆಸಲಾಯಿತು. ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದುರಂತವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಗೆ ನ್ಯಾಯಕ್ಕಾಗಿ ಆಗ್ರಹಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡಿರುವುದರಿಂದ ದೀದಿ ಮೋದಿ ವಿರುದ್ಧ ಮಾತನಾಡಿರುವುದಕ್ಕೆ ಹಾಗೂ ಅಸ್ಸಾಂ ಬಗ್ಗೆ ನೀಡಿರುವ ಹೇಳಿಕೆಯನ್ನು ಶರ್ಮಾ ಖಂಡಿಸಿದ್ದಾರೆ ಮಾತ್ರವಲ್ಲ ಭವಿಷ್ಯದಲ್ಲಿ ಇಂತಹ ಹೇಳಿಕೆ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.