Saturday, September 14, 2024
Homeರಾಷ್ಟ್ರೀಯ | Nationalಜನಸಂಖ್ಯೆ ಬೆಳವಣಿಗೆ ದರವನ್ನು ಮೀರಿಸಿದ ವಿದ್ಯಾರ್ಥಿಗಳ ಆತಹತ್ಯೆ ಪ್ರಕರಣಗಳು

ಜನಸಂಖ್ಯೆ ಬೆಳವಣಿಗೆ ದರವನ್ನು ಮೀರಿಸಿದ ವಿದ್ಯಾರ್ಥಿಗಳ ಆತಹತ್ಯೆ ಪ್ರಕರಣಗಳು

India's Student Suicide Rate Surpasses Population Growth Rate

ನವದೆಹಲಿ,ಆ.29- ದೇಶದಲ್ಲಿ ವಿದ್ಯಾರ್ಥಿಗಳ ಆತಹತ್ಯೆ ಪ್ರಕರಣಗಳು ಜನಸಂಖ್ಯೆ ಬೆಳವಣಿಗೆ ದರವನ್ನು ಮೀರಿಸುತ್ತಿದೆ ಎಂದು ಹೊಸ ವರದಿಯೊಂದು ಬಹಿರಂಗಗೊಳಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ವರದಿಯಲ್ಲಿ ಒಟ್ಟಾರೆ ಆತಹತ್ಯೆ ಸಂಖ್ಯೆಗಳು ವಾರ್ಷಿಕವಾಗಿ ಶೇ 2 ರಷ್ಟು ಹೆಚ್ಚಾಗಿದ್ದರೆ, ವಿದ್ಯಾರ್ಥಿಗಳ ಆತಹತ್ಯೆ ಪ್ರಕರಣಗಳು ಶೇ.4ರಷ್ಟು ಹೆಚ್ಚಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

2022ಕ್ಕೆ ಹೋಲಿಸಿದರೆ ಒಟ್ಟು ವಿದ್ಯಾರ್ಥಿಗಳ ಆತಹತ್ಯೆಯಲ್ಲಿ 53 ಪ್ರತಿಶತ ಪುರುಷ ವಿದ್ಯಾರ್ಥಿಗಳಿದ್ದರು, 2021 ಮತ್ತು 2022 ರ ನಡುವೆ ವಿದ್ಯಾರ್ಥಿಗಳ ಆತಹತ್ಯೆಯಲ್ಲಿ ಶೇ. 6 ರಷ್ಟು ಇಳಿಕೆ ಕಂಡುಬಂದಿದೆ, ಆದರೆ ವಿದ್ಯಾರ್ಥಿನಿಯರ ಆತಹತ್ಯೆಗಳು ಶೇ.7 ರಷ್ಟು ಹೆಚ್ಚಾಗಿದೆ.

ಕಳೆದ ದಶಕದಲ್ಲಿ 0-24 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯು 582 ಮಿಲಿಯನ್ನಿಂದ 581 ಮಿಲಿಯನ್ಗೆ ಕುಸಿದಿದ್ದರೆ, ವಿದ್ಯಾರ್ಥಿಗಳ ಆತಹತ್ಯೆಗಳ ಸಂಖ್ಯೆ 6,654 ರಿಂದ 13,044 ಕ್ಕೆ ಏರಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಅತಿ ಹೆಚ್ಚು ವಿದ್ಯಾರ್ಥಿಗಳು ಆತಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು 10 ನೇ ಸ್ಥಾನದಲ್ಲಿದೆ.

ಭಾರತದಲ್ಲಿ 15 ಮತ್ತು 24 ವರ್ಷದೊಳಗಿನ ಏಳು ಯುವಕರಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳು ಮತ್ತು ನಿರಾಸಕ್ತಿ ಸೇರಿದಂತೆ ಮಾನಸಿಕ ಅಸಮತೋಲನ ಅನುಭವಿಸುತ್ತಿದ್ದಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶವು ಈಗ ಅತ್ಯಧಿಕ ವಿದ್ಯಾರ್ಥಿಗಳ ಆತಹತ್ಯೆ ದರಗಳನ್ನು ಹೊಂದಿರುವ ಐದು ರಾಜ್ಯಗಳಲ್ಲಿ ಒಂದಾಗಿದೆ. ತಮಿಳುನಾಡು ಮತ್ತು ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಆತಹತ್ಯೆ ಪ್ರಮಾಣ ಹೆಚ್ಚಾಗಿದೆ.

RELATED ARTICLES

Latest News