Friday, November 22, 2024
Homeರಾಜ್ಯದೇವೇಗೌಡರ ಕನಸು ಈಡೇರಿಸಲು ಕಾರ್ಯಕರ್ತರು ಕೆಲಸ ಮಾಡಬೇಕು : ನಿಖಿಲ್‌ ಕುಮಾರಸ್ವಾಮಿ

ದೇವೇಗೌಡರ ಕನಸು ಈಡೇರಿಸಲು ಕಾರ್ಯಕರ್ತರು ಕೆಲಸ ಮಾಡಬೇಕು : ನಿಖಿಲ್‌ ಕುಮಾರಸ್ವಾಮಿ

ತುಮಕೂರು,ಆ.30- ಸದಸ್ಯತ್ವ ನೋಂದಣಿ ಇವತ್ತು ನೆನ್ನೆಯದು ಅಲ್ಲ ಮಾಜಿ ಪ್ರಧಾನಿ ದೇವೇಗೌಡರ ಹಲವು ವರ್ಷಗಳ ಕನಸು ಈ ಕನಸು ಈಡೇರಬೇಕು ಆ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕರೆ ನೀಡಿದರು.

ನಗರದ ಕೊಲ್ಲಾಪುರದಮ ಸಭಾಂಗಣದಲ್ಲಿ ಹಮಿಕೊಂಡಿದ್ದ ಬೂತ್‌ ಸಮಿತಿ ಅಭಿಯಾನ ಹಾಗೂ ಸದಸ್ಯತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಮೂವತ್ತೊಂದು ಜೆಲ್ಲೆಯಲ್ಲೂ ಸದಸ್ಯತ್ವ ನೋಂದಣಿ ಕಾರ್ಯ ನಡೆಯಲ್ಲಿದ್ದು ಇಂದು ತುಮಕೂರಿನಿಂದ ಪ್ರಾರಂಭ ಮಾಡಿದೇವೆ. ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಬೇಕಾಗಿದೆ ಅಲ್ಲದೆ ಗ್ರಾಮೀಣ ಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡುವ ಉದ್ದೇಶ ದಿಂದ ಸದಸ್ಯತ್ವ ನೋಂದಣಿ ಮಾಡಿಸಲಾಗುತ್ತಿದೆ. ಈ ಹಿಂದೆ ತುಮಕೂರು ಜಿಲ್ಲೆಯ ಹನ್ನೊಂದು ಕ್ಷೇತ್ರಗಳ ಪೈಕಿ ಒಂಬತ್ತು ಸ್ಥಾನಗಳನ್ನು ಪಕ್ಷ ಗೆದ್ದಿತ್ತು.ಅದೇ ರೀತಿ ಮುಂದಿನ ದಿನದಲ್ಲೂ ಪಕ್ಷ ಜಿಲ್ಲೆಯಲ್ಲಿ ಸದೃಡವಾಗಬೇಕು ಎಂದರು.

ಕಾಂಗ್ರೆಸ್‌‍ನವರು ಕುಮಾರಸ್ವಾಮಿಯವರನ್ನು ಐದು ವರ್ಷ ಮುಖ್ಯಮಂತ್ರಿ ಎಂದು ಕರೆದುಕೊಂಡು ಹೋದರು. ಮತ್ತೆ ಮಾಜಿ ಪ್ರಧಾನಿ ದೇವೇಗೌಡರನ್ನು ಲೋಕಸಭೆಗೆ ಕರೆದುಕೊಂಡು ಬಂದು ವಿಶ್ವಾಸ ದ್ರೋಹ ವೆಸಗುವ ಕೆಲಸ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಮುಂದಿನ ದಿನಗಳಲ್ಲಿ ಜಿಪಂ, ತಾಪಂ, ಪಾಲಿಕೆ,ಪುರಸಭೆಯ ಚುನಾವಣೆಗಳು ನಡೆಯುತ್ತವೆ ಆಗ ನಮ ಶಕ್ತಿ ಪ್ರದರ್ಶನ ವಾಗಬೇಕಾಗಿದೆ ಗ್ರಾಮೀಣ ಮಟ್ಟದಲ್ಲಿ ಪಕ್ಷ ಸದೃಡವಾಗಿ ಬೆಳೆದರೆ ಎಲ್ಲಾ ಕಾರ್ಯಕರ್ತರಿಗೂ ಪ್ರಾತಿನಿಧ್ಯ ಕಲ್ಪಿಸಲು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ತಿಳಿಸಿದರು.

ಪಕ್ಷದ ಕಾರ್ಯಕರ್ತರಿಗೆ ತರಬೇತಿ ಯನ್ನು ನಿರಂತರವಾಗಿ ಮಾಡುತ್ತೇವೆ ,ವಿಚಾರ ಸಂಕಿರಣ ಗಳನ್ನು ಹಮಿಕೊಂಡು ಪಕ್ಷದ ತತ್ವಸಿದ್ದಾಂತಗಳನ್ನು ತಿಳಿಸುವಕೆಲಸ ಮಾಡುತ್ತೇವೆ ಎಂದು ಹೇಳಿದರು. ಜೆಡಿಎಸ್‌‍ ಪಕ್ಷದ ಜೆ ಡಿ ಎಲ್‌ ಪಿ ನಾಯಕ ಹಾಗೂ ಶಾಸಕ ಸುರೇಶ್‌ ಬಾಬು ಮಾತನಾಡಿ, ಪಕ್ಷವನ್ನು ಕೇಡರ್‌ ಬೇಸಡ್‌ ಪಕ್ಷವನ್ನಾಗಿ ಕಟ್ಟಬೇಕಾಗಿದೆ. ಕಳೆದ ಲೋಕಸಭೆಯಲ್ಲಿ ವಿ.ಸೋಮಣ್ಣ ನವರನ್ನು ಗೆಲ್ಲಿಸಲ್ಲು ಪ್ರಾಮಣಿಕ ಪ್ರಯತ್ನ ಮಾಡಿದೇವೆ ಸೋಮಣ್ಣ ಪಕ್ಷದ ಕಾರ್ಯಕರ್ತರನ್ನು ನೆನಪು ಮಾಡಿಕೊಳ್ಳುತ್ತಾರೆ ಪಕ್ಷವನ್ನು ಸದೃಡವಾಗಿ , ಬಲಿಷ್ಠವಾಗಿ ಕಟ್ಟಬೇಕಾಗಿದೆ, ಹಾಸನ ಮತ್ತು ಮಂಡ್ಯ ಜಿಲ್ಲೆಗಿಂತ ಪಕ್ಷ ತುಮಕೂರಿನಲ್ಲಿ ಸದೃಢವಾಗಿದೆ. ಮಂಡ್ಯ ,ಹಾಸನ ಈ ಎರಡು ಜಿಲ್ಲೆಗಳಿಗಿಂತ ತುಮಕೂರು ಜಿಲ್ಲೆಯಲ್ಲಿ ಪಕ್ಷ ಹೆಚ್ಟು ಮತಗಳನ್ನುಗಳಿಸಿದೆ ಎಂದು ಹೇಳಿದರು.

ಭೂತ್‌ ಮಟ್ಟದ ಸಮಿತಿ ರಚನೆ ಮಾಡುವಾಗ ಎಲ್ಲಾ ಜಾತಿಯವರು ಮತ್ತು ಮಹಿಳೆಯರನ್ನು ಹಿರಿಯರನ್ನು ಒಳಗೊಂಡಂತೆ ಪ್ರಾತಿನಿಧ್ಯ ನೀಡಬೇಕು ಪ್ರತಿ ಭೂತ್‌ ಮಟ್ಟದ ಸದಸ್ಯರಿಂದಲ್ಲೂ ಸದಸ್ಯತ್ವ ಶುಲ್ಕ ಹತ್ತು ರೂಪಾಯಿ ಪಡೆಯಲೇ ಬೇಕು ಆಗ ಕಾರ್ಯಕರ್ತರಲ್ಲಿ ನಾನು ಶುಲ್ಕ ನೀಡಿ ಸದಸ್ಯ ಆಗಿದ್ದೇನೆ ಎಂಬ ಹೆಮೆಯಿಂದ ಇರುತ್ತಾರೆ ಎಂದು ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷ ದಲಿತರಿಗೆ ನೀಡುತ್ತಿದ್ದ ಸೌಲಭ್ಯ ಗಳಿಗೂ ಕತ್ತರಿ ಹಾಕುತ್ತಿದೆ ಇದು ದುರ್ದೈವದ ಸಂಗತಿ ಕುಮಾರಸ್ವಾಮಿ ಅವರು ನೀಡಿದ ಪಂಚರತ್ನ ಯೋಜನೆಗಳೇ ಕಾಂಗ್ರೆಸ್‌‍ ನ ಗ್ಯಾರೆಂಟಿಗಳಿಗಿಂತ ಚೆನ್ನಾಗಿದ್ದವು. ರೈತರಿಗೆನಾವು ಏನನ್ನಾದರೂ ಕೊಟ್ಟರೆ, ರೈತರು ಮರಳಿ ಮತ್ತೆ ನಮಗೆ ನೀಡುತ್ತಾರೆ ಎಂದು ತಿಳಿಸಿದರು. ಮಾಜಿ ವಿಧಾನ ಪರಿಷತ್‌ ಸದಸ್ಯ ಎಚ್‌.ಎಸ್‌‍.ಶಿವಶಂಕರ್‌ ಮಾತನಾಡಿ, ಪಕ್ಷದಲ್ಲಿ ಕಾರ್ಯಕರ್ತರಿಗಿಂತ ನಾಯಕರೇ ಹೆಚ್ಚು. ಅದ್ದರಿಂದ ಇಷ್ಟು ದಿನ ಸದಸ್ಯತ್ವ ನೋಂದಣಿ ಸಾಧ್ಯವಾಗುತ್ತಿರಲಿಲ್ಲ. ಈಗ ಕಡ್ಡಾಯವಾಗಿ ಈ ಬಾರಿ ಸದಸ್ಯತ್ವ ನೋಂದಣಿ ಮಾಡಿಸಲೇಬೇಕು ಎಂದರು.

ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜನಪ್ಪ ಮಾತನಾಡಿ, ಪಕ್ಷ ಮುಂದಿನ ದಿನದಲ್ಲಿ ರಾಜ್ಯದಲ್ಲಿ ನೂರು ಸೀಟು ಪಡೆದು ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು, ಆದ್ದರಿಂದ ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲಾಗುತ್ತಿದೆ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಹತ್ತುಸಾವಿರ ಸದಸ್ಯರು, 500 ಮಂಚೂಣಿ ಕಾರ್ಯಕರ್ತರನ್ನು ಗುರುತಿಸಿ ನೋಂದಾಯಿಸುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಡಿ.ನಾಗರಾಜಯ್ಯ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ತಿಮರಾಯಪ್ಪ, ಸುಧಾಕರ್‌ ಲಾಲ್‌, ವೀರಭದ್ರಪ್ಪ, ಎಚ್‌.ಲಿಂಗಪ್ಪ, ಮಾಜಿ ಜಿಪಂ ಸದಸ್ಯ ತಿಮಾರೆಡ್ಡಿ, ಗಂಗಣ್ಣ, ಪಾಲಿಕೆ ಮಾಜಿ ಉಪಮೇಯರ್‌ ನಾಗರಾಜ್‌, ಸದಸ್ಯರಾದ ಮಂಜುನಾಥ್‌, ಮನು, ಯೋಗೀಶ್‌, ರಾಮಚಂದ್ರಯ್ಯ, ಮಹಿಳಾ ಘಟಕದ ಲಕ್ಷ್ಮಮ, ರೇಖಾ, ಮುಖಂಡರಾದ ಉಗ್ರೇಶ್‌, ಭದ್ರಣ್ಣ, ಜಹಂಗೀರ್‌ ರವೀಶ್‌, ಕೊಂಡವಾಡಿ ಚಂದ್ರಶೇಖರ್‌ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES

Latest News