Friday, November 22, 2024
Homeರಾಷ್ಟ್ರೀಯ | Nationalತಮಿಳುನಾಡಿನಲ್ಲಿ ರಾಮನ ಬದಲಿಗೆ ಭಗವಾನ್‌ ಮುರುಗನ್‌ ಉತ್ಸವ

ತಮಿಳುನಾಡಿನಲ್ಲಿ ರಾಮನ ಬದಲಿಗೆ ಭಗವಾನ್‌ ಮುರುಗನ್‌ ಉತ್ಸವ

Atheist DMK govt tries to woo Hindus

ಚೆನ್ನೈ, ಆ.31– ರಾಮನ ಉತ್ಸವ, ರ್ಯಾಲಿಗಳ ಬದಲಿಗೆ ತಮಿಳು ಸಂಸ್ಕೃತಿ, ಸಾಹಿತ್ಯ, ಆಧ್ಯಾತಿಕತೆಯನ್ನು ಎತ್ತಿ ಹಿಡಿಯಲು ತಮಿಳುನಾಡು ಸರ್ಕಾರ ಭಗವಾನ್‌ ಮುರುಗನ್‌ ಸಮೇಳನ ಹಮಿಕೊಂಡಿತ್ತು.

ಪಳನಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾರಂಭವನ್ನು ಚೆನ್ನೈನಲ್ಲಿ ಇದ್ದುಕೊಂಡೆ ವಿಡಿಯೋ ಕಾನ್ಫೆರೆನ್‌್ಸ ಮೂಲಕ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಉದ್ಘಾಟಿಸಿ, ಮುರುಗನ್‌ ದೇವಾಲಯಗಳಲ್ಲಿ 789 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗಳು ನಡೆಸಲಾಗುತ್ತದೆ ಎಂದು ಹೇಳಿದರು.

ಪಳನಿಯ ಮುರುಗನ್‌ ದೇವಾಲಯದಲ್ಲಿ ಆಯೋಜಿಸಿದ್ದ ಸಮೇಳನದಲ್ಲಿ ಆಧ್ಯಾತಿಕ ಗಣ್ಯರು, ವಿವಿಧ ದೇಶಗಳ ಧಾರ್ಮಿಕ ವಿದ್ವಾಂಸರು, ಸಚಿವ ಪಿ.ಕೆ ಸೇಕರಬಾಬು, ಗ್ರಾಮೀಣಾಭಿವೃದ್ಧಿ ಸಚಿವ ಐ.ಪೆರಿಯಸಾಮಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್‌.ಸ್ಟಾಲಿನ್‌ ಇದ್ದರು.

ಸಂಶೋಧಕರು ತಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಪುರಾವೆಗಳನ್ನು ಪ್ರಸ್ತುತಪಡಿಸಿದರು. 2 ದಿನಗಳ ಜಾಗತಿಕ ಮುತಮಿಜ್‌ ಮುರುಗನ್‌ ಸಮೇಳನದಲ್ಲಿ ಸಾಕಷ್ಟು ಜನ ಪಾಲ್ಗೊಂಡಿದ್ದರು. ಸಮೇಳನದಲ್ಲಿ ತಮಿಳು ಸಂಸ್ಕೃತಿ, ಆಧ್ಯಾತ ಹಾಗೂ ಸಾಹಿತ್ಯದ ಕುರಿತು 1,300 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

ಪಳನಿ ನಗರದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾದ ಸಮೇಳನದ ಜಾಗವು 8 ಭವ್ಯ ಕಮಾನುಗಳನ್ನು ಒಳಗೊಂಡಿತ್ತು. ಭದ್ರತಾ ಸುರಕ್ಷತೆಗಾಗಿ 2,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೇ ಎಲ್ಲರಿಗೂ ಉಚಿತ ಪ್ರವೇಶವಿತ್ತು.

ಮಧುರೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸರ್ಕಾರ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿತ್ತು ಎಂದು ಹೇಳಲಾಗಿದೆ.ಎರಡು ದಿನಗಳ ಈ ಅದ್ಧೂರಿ ಸಮಾರಂಭದಲ್ಲಿ ಸಾವಿರಾರು ಜನರು ಪಾಲ್ಗೊಂಡು ಯಶಸ್ವಿಗೊಳಿಸಿದರು.

RELATED ARTICLES

Latest News