Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-09-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-09-2024)

Horoscope

ನಿತ್ಯ ನೀತಿ : ಬಡತನ ಶಾಶ್ವತವಲ್ಲ, ಸಿರಿತನ ಶಾಶ್ವತವಲ್ಲ. ನಿನ್ನಲ್ಲಿರುವ ಮಾನವೀಯ ಗುಣಗಳೇ ಶಾಶ್ವತ.

ಪಂಚಾಂಗ : ಮಂಗಳವಾರ , 03-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಸಿದ್ಧ /ಕರಣ: ಕಿಂಸ್ತುಘ್ನ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.29
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.
ವೃಷಭ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.
ಮಿಥುನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.

ಕಟಕ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ಸಿಂಹ: ಆಸ್ತಿ ವಿಚಾರದಲ್ಲಿ ಕಲಹ. ಸಹೋದರತ್ವ ದಲ್ಲಿ ದ್ವೇಷ ಉಂಟಾಗಲಿದೆ.
ಕನ್ಯಾ: ಮಾತಿನಲ್ಲಿ ಹಿಡಿತ ವಿರಲಿ. ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಉದ್ಯೋಗದಲ್ಲಿ ಅಧಿಕ ಒತ್ತಡ.

ತುಲಾ: ಅನವಶ್ಯಕ ವಾದ-ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸುವಿರಿ.
ವೃಶ್ಚಿಕ: ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.
ಧನುಸ್ಸು: ಬಟ್ಟೆ ವ್ಯಾಪಾರದಲ್ಲಿ ನಷ್ಟ. ಮಾತಿನಲ್ಲಿ ಹಿಡಿತವಿರಲಿ. ಸ್ವಜನರಿಂದ ತೊಂದರೆ.

ಮಕರ: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ.
ಕುಂಭ: ಸ್ನೇಹಿತರಿಗೆ ಸಹಕಾರ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗಸ್ಥರಿಗೆ ಶುಭ.
ಮೀನ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.

RELATED ARTICLES

Latest News