Thursday, September 19, 2024
Homeಅಂತಾರಾಷ್ಟ್ರೀಯ | Internationalರಷ್ಯಾ ಮೇಲೆ ರಾತ್ರೋರಾತ್ರಿ ಡ್ರೋನ್‌ ದಾಳಿ ನಡೆಸಿದ ಉಕ್ರೇನ್

ರಷ್ಯಾ ಮೇಲೆ ರಾತ್ರೋರಾತ್ರಿ ಡ್ರೋನ್‌ ದಾಳಿ ನಡೆಸಿದ ಉಕ್ರೇನ್

Kyiv launches drone strikes on Moscow and surrounding regions,

ಕೀವ್‌,ಸೆ.1- ಮಾಸ್ಕೋ ಮತ್ತು ರಷ್ಯಾದ ಹಲವಾರು ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್‌ ರಾತ್ರೋರಾತ್ರಿ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಕೋದ ಕಡೆಗೆ ಹಾರುತ್ತಿದ್ದ ಡ್ರೋನ್‌ ರಷ್ಯಾದ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಶವಾಯಿತು ಎಂದು ಮಾಸ್ಕೋದ ಮೇಯರ್‌ ಸೆರ್ಗೆಯ್‌ ಸೊಬಯಾನಿನ್‌ ಟೆಲಿಗ್ರಾಮ್‌ ಮೆಸೇಜಿಂಗ್‌ ಅಪ್ಲಿಕೇಶನ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಷ್ಯಾದ ನೈಋತ್ಯದಲ್ಲಿರುವ ಬ್ರಿಯಾನ್ಸ್ಕ್ ನ ಗಡಿ ಪ್ರದೇಶದ ಮೇಲೆ ಕನಿಷ್ಠ 12 ಉಕ್ರೇನ್‌ ಉಡಾವಣೆ ಮಾಡಿದ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಪ್ರದೇಶದ ಗವರ್ನರ್‌ ಅಲೆಕ್ಸಾಂಡರ್‌ ಬೊಗೊಮಾಜ್‌ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಕುರ್ಸ್ಕ್‌ ಪ್ರದೇಶದ ಮೇಲೆ ಎರಡು ಮಾನವರಹಿತ ದಾಳಿ ವಾಹನಗಳನ್ನು ಸಹ ನಾಶಪಡಿಸಲಾಗಿದೆ, ಉಕ್ರೇನ್ನ ಆಕ್ರಮಣದಿಂದ ಭಾಗಶಃ ಸ್ವಾಧೀನಪಡಿಸಿಕೊಂಡಿರುವ ಪ್ರದೇಶದ ಹಾಲಿ ಗವರ್ನರ್‌ ಅಲೆಕ್ಸಿ ಸಿರ್ನೋವ್‌ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾ ದಾಳಿಯ ಪರಿಣಾಮವಾಗಿ ಯಾವುದೇ ಗಾಯಗಳು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News