Friday, November 22, 2024
Homeರಾಜಕೀಯ | Politicsಬಿಜೆಪಿ ವಿರುದ್ಧ ಹೋರಾಟ ತೀವ್ರಗೊಳಿಸಲು ಸಿಎಂ ಸಿದ್ದರಾಮಯ್ಯ ಕರೆ

ಬಿಜೆಪಿ ವಿರುದ್ಧ ಹೋರಾಟ ತೀವ್ರಗೊಳಿಸಲು ಸಿಎಂ ಸಿದ್ದರಾಮಯ್ಯ ಕರೆ

CM Siddaramaiah calls to intensify fight against BJP

ಬೆಂಗಳೂರು,ಸೆ.1- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ಸಮರ್ಥವಾಗಿ ಜನರ ಮುಂದಿಡುವ ಮೂಲಕ ಕಾನೂನಾತಕ ಹಾಗೂ ರಾಜಕೀಯ ಹೋರಾಟಗಳನ್ನು ಮುಂದುವರೆಸಲು ಆಯಾ ಜಿಲ್ಲೆಗಳಲ್ಲಿ ಜನಜಾಗೃತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ನಿನ್ನೆ ತಮ ನಿವಾಸದಲ್ಲಿ ಸಂಪುಟದ ಸಚಿವರೊಂದಿಗೆ ಔತಣಕೂಟ ನಡೆಸಿದ ಸಿದ್ದರಾಮಯ್ಯ, ಮುಡಾ ಪ್ರಕರಣದಲ್ಲಿನ ವಾಸ್ತವಾಂಶಗಳನ್ನು ಮತ್ತೊಮೆ ಸಂಪುಟದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಲ್ಲಿ ತಮದು ಯಾವುದೇ ಪಾತ್ರವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಮುಡಾದಿಂದ 14 ನಿವೇಶನಗಳನ್ನು ಪಡೆಯಲು ತಾವು ಯಾವುದೇ ಪ್ರಭಾವ ಬಳಕೆ ಮಾಡಿಲ್ಲ. ಜಮೀನಿಗೆ ಪರ್ಯಾಯವಾಗಿ ಭೂಮಿ ನೀಡಲಾಗಿದೆ. ಬಿಜೆಪಿಯವರು ಇದನ್ನು ದುರುದ್ದೇಶಪೂರಿತವಾಗಿ ಹಗರಣ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿನ ಲೆಕ್ಕಾಚಾರಗಳನ್ನು ಬಯಲಿಗೆಳೆಯಲು ಹೈಕಮಾಂಡ್ ಸೂಚನೆ ನೀಡಿದೆ. ಅದೇ ಸಂದರ್ಭದಲ್ಲಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಹುನ್ನಾರಗಳ ವಿರುದ್ಧವೂ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಆಪರೇಷನ್ ಕಮಲದ ವಿಚಾರವಾಗಿ ಎಚ್ಚರಿಕೆ ವಹಿಸಬೇಕು.

ಸಚಿವರುಗಳು ತಮ ಜಿಲ್ಲಾ ಸಚಿವರ ಜೊತೆಗೆ ಸೌಹಾರ್ದಯುತ ಸಂಪರ್ಕವನ್ನು ರೂಢಿಸಿಕೊಳ್ಳ ಬೇಕು. ಬಿಜೆಪಿ ಕೋಟ್ಯಂತರ ರೂಪಾಯಿ ಹಣದ ಆಮಿಷ ತೋರಿಸಿ ಶಾಸಕರನ್ನು ಸೆಳೆಯುವ ಯತ್ನ ನಡೆಸುತ್ತಿದೆ.ಇದಕ್ಕೆ ಅವಕಾಶ ನೀಡದಂತೆ ಪದೇಪದೇ ಪಕ್ಷದ ಶಾಸಕರ ಜೊತೆ ಸಭೆ ನಡೆಸುವುದು, ಸಮಾಲೋಚನೆಗಳನ್ನು ಮುಂದುವರೆಸುವಂತೆ ತಾಕೀತು ಮಾಡಿದ್ದಾರೆ.

ಮಹಾತ ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ಮಹಾ ಅಧಿವೇಶನ ನಡೆಸಿ 100 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಣೆಗೆ ತಯಾರಿ ನಡೆದಿದ್ದು, ಈ ಕಾರ್ಯಕ್ರಮದ ಉಸ್ತುವಾರಿಯನ್ನು 15 ಸಚಿವರು ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಈ ಮೂಲಕ ಪಕ್ಷದ ಸಂಘಟನೆಗೂ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ , ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತಯಾರಿ ನಡೆಸುವಂತೆಯೂ ಹೈಕಮಾಂಡ್ ಸೂಚನೆ ನೀಡಿದೆ.ಸಭೆಯಲ್ಲಿ ಆಯ್ದ ಸಚಿವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News