Friday, November 22, 2024
Homeರಾಜಕೀಯ | Politicsಭ್ರಷ್ಟಾಚಾರ ನಡೆಸಿಲ್ಲವೆಂದರೆ ತಂದೆ-ತಾಯಿ ಮೇಲೆ ಆಣೆ ಮಾಡಿ : ನಿರಾಣಿ ಚಾಲೆಂಜ್

ಭ್ರಷ್ಟಾಚಾರ ನಡೆಸಿಲ್ಲವೆಂದರೆ ತಂದೆ-ತಾಯಿ ಮೇಲೆ ಆಣೆ ಮಾಡಿ : ನಿರಾಣಿ ಚಾಲೆಂಜ್

Murugesh Nirani Challenge to MB Patil

ಬೆಂಗಳೂರು,ಸೆ.2– ನೀರಾವರಿ ಹಾಗೂ ಕೈಗಾರಿಕಾ ಸಚಿವರಾದ ಮೇಲೆ ನೀವು ಒಂದೇ ಒಂದೂ ಭ್ರಷ್ಟಾಚಾರವನ್ನು ಅಥವಾ ಯಾರದೋ ಆಸ್ತಿಯನ್ನು ಕಬಳಿಸಿಲ್ಲ ಎಂದು ನಿಮ ತಂದೆತಾಯಿ ಮೇಲೆ ಆಣೆ ಮಾಡುವ ತಾಕತ್ತು ನಿಮಗಿದೆಯೇ ಎಂದು ಸಚಿವ ಎಂ.ಬಿ.ಪಾಟೀಲ್‌ಗೆ ಮಾಜಿ ಸಚಿವ ಮುರುಗೇಶ್‌ ಆರ್‌.ನಿರಾಣಿ ಮತ್ತೆ ಬಹಿರಂಗ ಸವಾಲು ಎಸೆದಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಮತ್ತೆ ಬೆಂಕಿ ಉಗುಳಿದರು. ನೀವು ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಹಾಗೂ ಈಗ ಕೈಗಾರಿಕಾ ಸಚಿವರಾಗಿ ಎಷ್ಟೆಷ್ಟು ಆಸ್ತಿ ಕಬಳಿಸಿದ್ದೀರಿ ಎಂಬುದನ್ನು ದಾಖಲೆಯ ಸಮೇತ ಬಿಚ್ಚಿಡುತ್ತೇನೆ. ಕಡಿಮೆ ದರದಲ್ಲಿ ಕೆಐಎಡಿಬಿ ಮೂಲಕ ಜಮೀನು ಖರೀದಿಸಿ ಅದನ್ನು ತಮಿಳುನಾಡಿಗೆ ಮಾರಾಟ ಮಾಡಿದ್ದು ಗೊತ್ತಿದೆ. ಸುಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಬಂಡವಾಳ ಬಿಚ್ಚುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.

ನಾನು ಕೈಗಾರಿಕಾ ಸಚಿವನಾದ ಮೇಲೆ ಜಿಮ್‌ ನಡೆಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ಕೊಡಿಸಿದ್ದೇನೆ. ರಾಜ್ಯಕ್ಕೆ ಬಂಡವಾಳ ಹರಿದುಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಕೈಗಾರಿಕೆಗಳಿಗೆ ಎಷ್ಟು ಉತ್ತೇಜನ ನೀಡಲಾಗಿತ್ತು ಎಂಬುದಕ್ಕೆ ದಾಖಲೆಗಳಿವೆ.

ಸಚಿವರಾದ ಮೇಲೆ ನೀವು ಇಲಾಖೆಗೆ ಎಷ್ಟು ಬಂಡವಾಳ ತಂದಿದ್ದೀರಿ? ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದರು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿದರೆ ನಿಮಗೂ ಒಳ್ಳೆಯದು, ನಿಮ ಹಿರಿತನಕ್ಕೂ ಒಳ್ಳೆಯದು.ನಿಮತರ ನಾನು ಯಾರೋ ಕಟ್ಟಿದ ಕಾಲೇಜನ್ನು ಸ್ವಂತ ಲಾಭಕ್ಕಾಗಿ ಮಾಡಿಕೊಂಡಿಲ್ಲ. ಬಂಡವಾಳ ಬಿಚ್ಚಿದರೆ ನೀವು ತಲೆ ಎತ್ತಿ ತಿರಗಬಾರದು. ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ ಎಂಬುದನ್ನು ಎಂ.ಬಿ.ಪಾಟೀಲ್‌ ಮರೆಯಬಾರದು ಎಂದು ಎಚ್ಚರಿಸಿದರು.

2022ರಲ್ಲಿ ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮಿಕೊಳ್ಳಲಾಗಿತ್ತು. ಆಗ ಕೈಗಾರಿಕೆ ಇಲಾಖೆ ಅಧಿಕಾರಿಗಳು ಐದು ನಿಮಿಷದ ತ್ರಿಡಿ ಪೊಮೊ ವಿಡಿಯೋ ಮಾಡುವುದಕ್ಕೆ ಒಂದು ಕಂಪನಿಗೆ ಗುತ್ತಿಗೆ ನೀಡಿದ್ದರು. ಅದರ ಬಜೆಟ್‌ ನಾಲ್ಕುವರೆ ಕೋಟಿ ರೂ. ಆಗಿತ್ತು. ಇದು ನನ್ನ ಗಮನಕ್ಕೆ ಬಂದಿದ್ದೇ ತಡ ನಾನೆ ಅದನ್ನು ತಡೆದೆ.

ಐದು ನಿಮಿಷದ ವಿಡಿಯೋ ಮಾಡಿದ್ದಕ್ಕಾಗಿ ನಾಲ್ಕುವರೆ ಕೋಟಿ ರೂ. ಇದು ಬಹಳ ಹೆಚ್ಚಾಯಿತು. ಕೂಡಲೇ ರದ್ದು ಮಾಡಿ ಎಂದು ಕೈಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದೆ ಎಂದು ತಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಕಾಂಗ್ರೆಸ್‌‍ನವರು ತಮ ಮೇಲಿನ ಪ್ರಕರಣವನ್ನು ವಿಷಯಾಂತರ ಮಾಡುವುದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಡಿ ಅಂತಿದ್ದಾರೆ ಹೊರತು, ಇವರು ಯಾವ ಆರೋಪ ಮಾಡಿರುವ ತಪ್ಪು ಏನು ಅಂತಾನೆ ಹೇಳುತ್ತಿಲ್ಲ. ಇವರ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

ಅಂದು ನಾನು ಟೆಂಡರ್‌ ರದ್ದು ಮಾಡಿದ್ದಕ್ಕೆ ಜಾಹೀರಾತು ಕಂಪನಿಯವರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ಏಕ ಸದಸ್ಯ ಪೀಠ ಅವರು ಈಗಾಗಲೇ ನಿಮ ಆದೇಶದ ಪ್ರಕಾರ ವಿಡಿಯೋ ತಯಾರಿಸಿದ್ದಾರೆ. ಅದಕ್ಕಾಗಿ ಹಣ ಪಾವಿತಿಸಿ ಅಂತ ಹೇಳಿತ್ತು.

ನಾವು ಮತ್ತೆ ಕೋರ್ಟ್‌ ದ್ವಿಸದಸ್ಯ ಪೀಠಕ್ಕೆ ಮೇಲನವಿ ಸಲ್ಲಿಸಿದೆವು. ಆಗ ದ್ವಿಸದಸ್ಯ ಪೀಠ ಸಚಿವರು ಹೇಳಿದ್ದು ಸರಿ ಇದೆ. ಐದು ನಿಮಿಷದ ವಿಡಿಯೋ ಚಿತ್ರೀಕರಣಕ್ಕೆ ನಾಲ್ಕುವರೆ ಕೋಟಿ ರೂ. ತೀರಾ ಹೆಚ್ಚಾಯಿತು ಎಂದು ನನ್ನ ಪತ್ರ ಉಲ್ಲೇಖ ಮಾಡಿ ಆದೇಶ ನೀಡಿದೆ ಎಂದು ತಿಳಿಸಿದರು.

ಹೀಗಿರುವಾಗ ಸಿಎಂ, ಡಿಸಿಎಂ, ಸಚಿವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ನನಗೆ ಇದುವರೆಗೂ ರಾಜಭವನದಿಂದ ಆಗಲಿ, ಯಾವುದೇ ತನಿಖಾ ಸಂಸ್ಥೆಗಳಿಂದಾಗಲಿ ಒಂದೇ ಒಂದು ನೊಟೀಸ್‌‍ ಬಂದಿಲ್ಲ. ಯಾರು ವಿಚಾರಣೆಗೆ ಕರೆದಿಲ್ಲ.

ನಾನು ಎಲ್ಲ ತನಿಖೆಗೂ ಸಿದ್ದನಿದ್ದೇನೆ. ಸಿಬಿಐ ತನಿಖೆಗೂ ಬೇಕಿದ್ದರೆ ಕೊಡಲಿ. ಯಾಕೆಂದರೆ ನಾನು ನಿರಪರಾಧಿ. ಸಿಎಂ, ಡಿಸಿಎಂ ಕೂಡ ಧೈರ್ಯದಿಂದ ತನಿಖೆ ಎದುರಿಸಲಿ ಎಂದು ಟಾಂಗ್‌ ನೀಡಿದರು.

ಅನೇಕರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಆಚೆ ಇದ್ದಾರೆ. ನಾನು ಈಗಲೂ ಯಾವುದೇ ನ್ಯಾಯಾಲಯದಿಂದ ಜಾಮೀನು ತಂದಿಲ್ಲ. ಏಕೆಂದರೆ ನಾನು ತಪ್ಪು ಮಾಡಿಲ್ಲ ಎಂಬ ಅಚಲವಾದ ನಂಬಿಕೆ ಇದೆ. ಹೀಗಾಗಿ ದೇಶದ ಕಾನೂನಿನಲ್ಲಿ ನಂಬಿಕೆ ಇಟ್ಟಿರುವುದರಿಂದ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

RELATED ARTICLES

Latest News