ಬೆಂಗಳೂರು,ಸೆ.10- ನೀವು ಇನ್ನು ನಿಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳದಿದ್ದರೆ ದಂಡ ಕಟ್ಟಲು ರೆಡಿಯಾಗಿ.ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸೆ.15 ಕೊನೆ ದಿನವಾಗಿದ್ದು ಆ ನಂತರ ನಂಬರ್ ಪ್ಲೇಟ್ ಹಾಕಿಸಿಕೊಳ್ಳದವರಿಗೆ 500 ದಂಡ ವಿಧಿಸಲು ಆರ್ಟಿಒ ಹಾಗೂ ಟ್ರಾಫಿಕ್ ಪೊಲೀಸರು ತೀರ್ಮಾನಿಸಿದ್ದಾರೆ.
ಮುಂದಿನ ಸೋಮವಾರದಿಂದ ಆರ್ ಟಿಓ ಜೊತೆಗೆ ಟ್ರಾಫಿಕ್ ಪೊಲೀಸರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಪತ್ತೆಗೆ ವಿಶೇಷ ಕಾರ್ಯಚರಣೆ ಹಮಿಕೊಳ್ಳಲಿದ್ದಾರೆ.ಹೀಗಾಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಇನ್ನು ಒಂದು ವಾರ ಸಮಯವಿದ್ದು ಅಷ್ಟರೊಳಗೆ ನಂಬರ್ ಪ್ಲೇಟ್ ಅಳವಡಿಸಿಕೊಂಡು ದಂಡ ಕಟ್ಟುವುದರಿಂದ ಪಾರಾಗಬಹುದಾಗಿದೆ.
ಈ ಹಿಂದೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಗಡುವನ್ನು ಸರ್ಕಾರ ಮೂರು ಬಾರಿ ವಿಸ್ತರಣೆ ಮಾಡಿತ್ತು. ಇದರ ಜೊತೆಗೆ ನ್ಯಾಯಾಲಯ ಕೂಡ ಸೆ.15ರವರೆಗೆ ಸಮಯ ನೀಡಿತ್ತು.ಇದೀಗ ಅ ಗಡುವ ಮುಗಿಯಲು ಇನ್ನು ಒಂದು ವಾರ ಇರುವುದರಿಂದ ನಂಬರ್ ಪ್ಲೇಟ್ ಹಾಕಿಸಿಕೊಳ್ಳದಿರುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಅರ್ ಟಿ ಓ ಮಾಹಿತಿ ಪ್ರಕಾರ ನಗರದಲ್ಲಿ ಸದ್ಯ 51 ಲಕ್ಷ ವಾಹನ ವಾಹನ ಸವಾರರು ತಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದಾರೆ. ಉಳಿದ 1.49 ಕೋಟಿ ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ವಂತೆ.
ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಮೊದಲ ಬಾರಿ 500 ರೂ ದಂಡ ನಂತರೂ ಎಚ್ಚೆತ್ತುಕೊಳ್ಳದಿದ್ದರೆ ಒಂದು ಸಾವಿರ ರೂ.ಗಳ ದಂಡ ವಿಧಿಸಲಾಗುವುದು ಎಂದು ಸಾರಿಗೆ ಆಯುಕ್ತ ಮಲ್ಲಿಕಾರ್ಜುನ ಎಚ್ಚರಿಸಿದ್ದಾರೆ.