Monday, October 14, 2024
Homeಇದೀಗ ಬಂದ ಸುದ್ದಿಬಂಗಲೆ ಮಾರಿದ ಕಂಗನಾ ರಣಾವತ್

ಬಂಗಲೆ ಮಾರಿದ ಕಂಗನಾ ರಣಾವತ್

ಮುಂಬೈ,ಸೆ.10- ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮುಂಬೈನ ಪಾಲಿ ಹಿಲ್ ನೆರೆಹೊರೆ ಬಾಂದ್ರಾದಲ್ಲಿರುವ ತಮ ಬಂಗಲೆ ಮನೆಯನ್ನು32 ಕೋಟಿ ರೂಗೆ ಮಾರಾಟ ಮಾಡಿದ್ದಾರೆ, ಆಸ್ತಿ ನೋಂದಣಿ ದಾಖಲೆಯ ಪ್ರಕಾರ,ಕಳೆದ ಸೆಪ್ಟೆಂಬರ್ 2017 ರಲ್ಲಿ ಕಂಗನಾ ರಣಾವತ್ ಅವರು ಈ ಮನೆಯನ್ನು 20 ಕೋಟಿ ರೂ ಖರೀದಿಸಿದ್ದರು. ಬಂಗಲೆಯು 3,075 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು 565 ಚದರ ಅಡಿ ಪಾರ್ಕಿಂಗ್ ಪ್ರದೇಶವನ್ನೂ ಕೂಡ ಹೊಂದಿದೆ.

ಮಾರಾಟ ವಹಿವಾಟ ಕಳೆದ ಸೆ.5 ರಂದು ನಡೆದಿದೆ ಮತ್ತು 1.92 ಕೋಟಿ ಸ್ಟ್ಯಾಂಪ್ ಡ್ಯೂಟಿ ಮತ್ತು ರೂ 30,000 ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ.ಈ ಬಂಗಲೆಯನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಕಮಲಿನಿ ಹೋಲ್ಡಿಂಗ್‌್ಸನ ಪಾಲುದಾರರಾಗಿರುವ ಶ್ವೇತಾ ಬತಿಜಾ ಖರೀದಿಸಿದ್ದಾರೆ .

ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಅವರು 2024 ರ ಮೇ ತಿಂಗಳಲ್ಲಿ ಅವರು 91 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಪ್ರಕಟಿಸಿದ್ದರು , ಅದರಲ್ಲಿ 28.7 ಕೋಟಿ ರೂಪಾಯಿಗಳು ಚರ ಮತ್ತು 62.9 ಕೋಟಿ ರೂಪಾಯಿಗಳು ಸ್ಥಿರವಾಗಿವೆ.

ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ಸೆಪ್ಟೆಂಬರ್ 2020 ರಲ್ಲಿ ಒತ್ತುವರಿ ಮಾಡಿದ್ದಾರೆಂದು ಬಂಗಲೆಯ ಕೆಲ ಭಾಗ ಕೆಡವಲಾಯಿತು.ಇತ್ತೀಚೆಗೆ ಮುಂಬೈನ ಅಂಧೇರಿ ಬಳಿ ಕಚೇರಿಗಾಗಿ ಕಟ್ಟಡವೊಂದನ್ನು 1.56 ಕೋಟಿ ರೂಪಾಯಿ ಪಾವತಿಸಲು ಖರೀದಿಸಿ ಸುದ್ದಿಯಲ್ಲಿದ್ದರು.

RELATED ARTICLES

Latest News