Friday, November 22, 2024
Homeರಾಜಕೀಯ | Politicsಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ : ಯತ್ನಾಳ್‌

ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ : ಯತ್ನಾಳ್‌

As of now we have no confusion, no differences: Yatnal

ಬೆಂಗಳೂರು,ಸೆ.13-ಪಕ್ಷದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಸಂಘ ಪರಿವಾರದ ನಾಯಕರು ಪರಿಹರಿಸಿದ್ದಾರೆ. ಸದ್ಯಕ್ಕೆ ನಮಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಪಷ್ಟಪಡಿಸಿದ್ದಾರೆ.

ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಭೆ ಬಳಿಕ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ಪರಿವಾರದ ನಾಯಕರಿಗೆ ನಮ ತೀರ್ಮಾನವನ್ನು ತಿಳಿಸಿದ್ದೇವೆ. ನಮಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ಇಲ್ಲವೇ ಇಲ್ಲ. ನಾಯಕತ್ವ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ರಾಜ್ಯಪಾಲರಿಗೆ ದೂರು ನೀಡುವ ವೇಳೆ ಪಕ್ಷದ ಪ್ರಮುಖರು ನಿಮ ಬಳಿ ಇಲ್ಲವಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ನಿಮ ಪ್ರಕಾರ ಪ್ರಭಾರಿಗಳು, ಪ್ರಭಾವಿಗಳು ಎಂದರೆ ಯಾರು? ಸಾಮಾನ್ಯ ಕಾರ್ಯಕರ್ತನಾದರೂ ಕೂಡ ಪ್ರಭಾವಿಯೇ ಎಂದು ಹೇಳಿದರು.

ಪಾದಯಾತ್ರೆಗೆ ತೀರ್ಮಾನವನ್ನು ಹೈಕಮಾಂಡ್‌ ಮಾಡುತ್ತದೆ. ಇದೇ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತದೆ. ನಮ ಜೊತೆಗೆ ಎಲ್ಲರೂ ಬರ್ತಾರೆ ಎಂದರು. ಎಸ್‌‍ಪಿಟಿಎಸ್‌‍ಪಿಯ 14 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಗಳಿಗೆ ಬಳಸಿದ್ದಾರೆ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಹಂಚಿದ್ದಾರೆ ಇದೊಂದು ಕ್ರಿಮಿನಲ್‌ ಹಾಗೂ ಅಕ್ಷಮ್ಯ ಅಪರಾಧ. ಅದಕ್ಕೆ ನಾವೆಲ್ಲರೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

RELATED ARTICLES

Latest News