Friday, September 20, 2024
Homeರಾಷ್ಟ್ರೀಯ | Nationalಮಳೆಯಿಂದಾಗಿ ನೀರಿನಲ್ಲಿ ಮುಳುಗಿದ ತಾಜ್‌ಮಹಲ್‌ ಉದ್ಯಾನ

ಮಳೆಯಿಂದಾಗಿ ನೀರಿನಲ್ಲಿ ಮುಳುಗಿದ ತಾಜ್‌ಮಹಲ್‌ ಉದ್ಯಾನ

Water Leakage In Taj Mahal's Main Dome After Heavy Rain

ಆಗ್ರಾ,ಸೆ.14- ಉತ್ತರಪ್ರದೇಶದ ಕಳೆದ ಎರಡುಮೂರು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಐತಿಹಾಸ ಸ್ಮಾರಕ ಆಗ್ರಾದ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿನೀರಿನ ಸೋರಿಕೆಯಾಗಿ ತಾಜ್‌ಮಹಲ್‌ ಆವರಣದಲ್ಲಿರುವ ಉದ್ಯಾನ ಮುಳುಗಿಹೋಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರಕದ ಉದ್ಯಾನವೊಂದು ಮಳೆನೀರಿನಲ್ಲಿ ಮುಳುಗಿರುವ ದೃಶ್ಯವನ್ನು ಪ್ರವಾಸಿಗರು ಚಿತ್ರೀಕರಿಸಿದ್ದಾರೆ.

ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಸಂಪೂರ್ಣ ನೀರಿನಿಂದ ಆವೃತ್ತವಾಗಿದ್ದು, ಬೆಳೆಗಳು ಹಾನಿಯಾಗಿವೆ. ಸಾರ್ವಜನಿಕರ ದೈನಂದಿನ ಜೀವನಕ್ಕೆ ಅಡ್ಡಿ ಉಂಟು ಮಾಡಿದೆ.
ವಿಶ್ವ ಪರಂಪರೆಯ ತಾಣವಾದ ಆಗ್ರಾದ ತಾಜ್‌ ಮಹಲ್‌ ಅನ್ನು 1632 ಮತ್ತು 1653ರ ನಡುವೆ ಮೊಘಲ್‌ ಚಕ್ರವರ್ತಿ ಷಹಜಹಾನ್‌ ಪ್ರೀತಿಯ ಮಡದಿ ಮುಮ್ತಾಜ್‌ ಮಹಲ್‌ ಅವರ ಸಮಾಧಿಯಾಗಿ ನಿರ್ಮಿಸಿದ್ದರು.

ಈ ಬಿಳಿ ಅಮೃತಶಿಲೆಯ ರಚನೆಯು ಅದರ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ, ಪರ್ಷಿಯನ್‌, ಇಸ್ಲಾಮಿಕ್‌ ಮತ್ತು ಭಾರತೀಯ ಶೈಲಿಗಳನ್ನು ಸಂಯೋಜಿಸುತ್ತದೆ. ಸಂಕೀರ್ಣವು ಭವ್ಯವಾದ ಗುಮಟ, ಮಿನಾರ್‌ಗಳು, ಉದ್ಯಾನಗಳು ಮತ್ತು ಪ್ರತಿಬಿಂಬಿಸುವ ಕೊಳವನ್ನು ಒಳಗೊಂಡಿದೆ.

ಶಾಶ್ವತ ಪ್ರೀತಿಯನ್ನು ಸಂಕೇತಿಸುವ ತಾಜ್‌ ಮಹಲ್‌ ಅನ್ನು ವಿಶ್ವದ ಅತ್ಯಂತ ಸುಂದರವಾದ ಕಟ್ಟಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಮೊಘಲ್ ವಾಸ್ತುಶಿಲ್ಪದ ಮೇರುಕೃತಿಯಾಗಿ ಉಳಿದಿದೆ, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

RELATED ARTICLES

Latest News