ಬೆಂಗಳೂರು, ಸೆ. 15– ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭವು ಕಳೆದ ರಾತ್ರಿ ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಿಗೆ ಪ್ರತ್ಯೇಕ ಪ್ರಶಸ್ತಿ ಘೋಷಿಸಿದೆ. ಸ್ಯಾಂಡಲ್ವುಡ್ ಪ್ರಶಸ್ತಿ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರಾ ಚಿತ್ರಗಳಿಗೆ ಪ್ರಶಸ್ತಿಗಳ ಸುರಿಮಳೆಯೇ ಹರಿದುಬಂದಿದೆ.
ಸಪ್ತಸಾಗರದಾಚೆ ಎಲ್ಲೋ ಚಿತ್ರದ ತಮ್ಮ ಮನಮಿಡಿಯುವ ನಟನೆಗಾಗಿ ರಕ್ಷಿತ್ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರೆ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ನಟಿಸಿದ್ದ ಚೈತ್ರಾ ಆಚಾರ್ ತಮ್ಮ ಸುರಭಿ ಪಾತ್ರಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಚಿತ್ರದ ಸೂತ್ರಧಾರ ಹೇಮಂತ್ರಾವ್, ರಮೇಶ್ ಇಂದಿರಾ ಹಾಗೂ ಅತ್ಯುತ್ತಮ ನಿರ್ದೇಶಕ,ಖಳನಟ ಪ್ರಶಸ್ತಿ ಬಾಚಿಕೊಂಡರೆ, ಶೀರ್ಷಿಕೆ ಗೀತೆಗಳಿಗಾಗಿ ಕಪಿಲ್ ಅತ್ಯುತ್ತಮ ಗಾಯಕರಾಗಿ ದ್ದಾರೆ.
ಕಾಟೇರಾ ಕಮಾಲ್:
ತಮ್ಮ ಮೊದಲ ಚಿತ್ರದ ಕಾಟೇರಾ ಅಭಿನಯಕ್ಕಾಗಿ ಆರಾಧಾನಾ ರಾಮ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಸಂಭ್ರಮಿಸಿದರೆ, ಈ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ಪಸಂದಾಗ್ ಅವ್ನೇ ಗೀತೆ ಆಡಿದ ಮಾಂಗ್ಲಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ವಿ.ಹರಿಕೃಷ್ಣ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಾಲಿಗೆ ಡಬ್ಬಲ್ ಧಮಾಕಾ:
ಅಂತಾರ್ಜಾತಿ ವಿವಾಹವನ್ನು ಕೇಂದ್ರಬಿಂದುವಾಗಿಸಿಕೊಂಡು ನಿರ್ಮಾಣಗೊಂಡಿದ್ದ ಗುರುದೇವ್ ಹೊಯ್ಸಳ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್ಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದ್ದರೆ, ತಾವೇ ನಿರ್ಮಿಸಿದ್ದ ಟಗರುಪಾಳ್ಯ ಚಿತ್ರದ ಗೀತೆಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಅಲಂಕರಿಸಿದ್ದಾರೆ.
ಪ್ರಶಸ್ತಿಗಳ ವಿವರ:
- ಡಾ.ಶಿವರಾಜ್ಕುಮಾರ್- ವಿಶೇಷ ಪ್ರಶಸ್ತಿ
- ವೃಷಾ ಪಾಟೀಲ್- ಅತ್ಯುತ್ತಮ ಭರವಸೆಯ ನಟಿ- ಲವ್
- ಶ್ವೇತಪ್ರಿಯ- ಛಾಯಾಗ್ರಹಣ- ಕೈವ
- ಅನಿರುದ್್ಧ ಆಚಾರ್- ಅತ್ಯುತ್ತಮ ಹಾಸ್ಯನಟ- ಆಚಾರ್ ಆ್ಯಂಡ್ ಕೋ.