Friday, October 11, 2024
Homeಮನರಂಜನೆಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ?

ಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ.. ?

Avantika Dasani

ಬೆಂಗಳೂರು, ಸೆ.15- ಬಾಲಿವುಡ್ನ ಸಲಾನ್ಖಾನ್ ನಟಿಸಿದ್ದ ಮಹೋನ್ನತ ಚಿತ್ರ ಮೈನೇ ಪ್ಯಾರ್ ಕೀಯಾ ಚಿತ್ರದ ಮೂಲಕ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ಭಾಗ್ಯಶ್ರೀ ಅವರು ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ನಟಿಸಿ ತಮ ಅದೃಷ್ಟ ಪರೀಕ್ಷೆ ನಡೆಸಿಕೊಂಡಿದ್ದರು. ಈಗ ಈಕೆಯ ಪುತ್ರಿ ಅವಂತಿಕಾ ದಸ್ಸಾನಿ ಯಶಸ್ಸು ಹರಿಸಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು `ಕ್ಯೂ’ನಲ್ಲಿ ನಿಂತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ಅಮಾವ್ರ ಗಂಡ'ಗಂಡುಗಲಿ ಕುಮಾರರಾಮ’ ಹಾಗೂ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾರಾಮ್ ನಟಿಸಿದ್ದ ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಭಾಗ್ಯಶ್ರೀ ನಟಿಸಿ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಈಗ ಭಾಗ್ಯಶ್ರೀ ಪುತ್ರಿ ಅವಂತಿಕಾ ದಸ್ಸಾನಿ ನಟಿಸಲಿರುವಕ್ಯೂ’ ಚಿತ್ರಕ್ಕೆ ನಟ, ನಿರ್ದೇಶಕ ನಾಗಶೇಖರ್ ಅವರು ಆ್ಯಕ್ಷನ್- ಕಟ್ ಹೇಳಲಿದ್ದು, ರಿಯಲ್ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಅವರು ನಾಯಕನಾಗಲಿದ್ದಾರೆ ಎಂಬ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ.

ಸಂಜು ವೈಡ್‌್ಸ ಗೀತಾ2ರಲ್ಲಿ ನಾಗಶೇಖರ್ ಬ್ಯುಸಿ:
ನಾಗಶೇಖರ್ ಅವರು ಸದ್ಯ ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ನಟಿಸುತ್ತಿರುವ ಸಂಜು ವೈಡ್‌್ಸ ಗೀತಾ 2' ಚಿತ್ರದ ಚಿತ್ರೀಕರಣದಲ್ಲಿ ತುಂಬಾ ಬ್ಯುಜಿಯಾಗಿದ್ದು, ಈ ಚಿತ್ರವನ್ನು ಬೆಳ್ಳಿತೆರೆಗೆ ತರಲು ಅಂತಿಮ ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿಂದೆ ಶ್ರೀನಗರ ಕಿಟ್ಟಿ ಹಾಗೂ ಮೋಹಕತಾರೆ ರಮ್ಯಾ ನಟಿಸಿದ್ದಸಂಜು ವೈಡ್‌್ಸ ಗೀತಾ’ ಚಿತ್ರಕ್ಕೂ ನಾಗಶೇಖರ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದು, ಈ ಸಿನಿಮಾವು ಸೂಪರ್ಡೂಪರ್ ಹಿಟ್ ಆಗಿತ್ತು.

ಕ್ಯೂಗೆ ಬರ್ತಾರೆ ಭಾಗ್ಯಶ್ರೀ ಪುತ್ರಿ:
ನಾಗಶೇಖರ್ ಅವರು ನಿರ್ದೇಶಿಸಿ, ನಿರ್ಮಿಸುತ್ತಿರುವ `ಕ್ಯೂ’ ಚಿತ್ರದಲ್ಲಿ ನಟಿಸುವಂತೆ ಅವಂತಿಕಾ ದಸ್ಸಾನಿ ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಿಸಿದ್ದು, ಈ ಸಿನಿಮಾದ ಮೂಲಕ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಗ್ ಬಜೆಟ್ನ ಈ ಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯನ್ನೂ ನಾಗಶೇಖರ್ ಅವರೇ ವಹಿಸಿಕೊಂಡಿದ್ದು, ರಾಮ್ ಚಿರು ಲೈನ್ ಪ್ರೊಡಕ್ಷನ್ ಅಡಿ ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ.

ಅವಂತಿಕಾ ದಸ್ಸಾನಿ ಅವರು ಈಗಾಗಲೇ ಯು ಶೇಪ್ ಕಿ ಗಲ್ಲಿ' ಎಂಬ ಬಾಲಿವುಡ್ ಸಿನಿಮಾ ಹಾಗೂಮಿತ್ಯ’ ವೆಬ್ಸೀರೀಸ್ನಲ್ಲಿ ನಟಿಸಿದ್ದರೂ ಯಶಸ್ಸು ಸಿಕ್ಕಿಲ್ಲ, ಈಗ `ಕ್ಯೂ’ ಸಿನಿಮಾದ ನಂತರ ತಮ ಅದೃಷ್ಟ ಪರೀಕ್ಷೆ ನಡೆಸಲು ಸಜ್ಜಾಗಿದ್ದಾರೆ.

RELATED ARTICLES

Latest News