Friday, November 22, 2024
Homeರಾಷ್ಟ್ರೀಯ | Nationalಮುಂಬೈ ದಾಳಿ ರೂವಾರಿ ರಾಣಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮುಂಬೈ ದಾಳಿ ರೂವಾರಿ ರಾಣಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಮುಂಬೈ,ಸೆ.26- ಕಳೆದ ನವೆಂಬರ್ 2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ವಿರುದ್ಧ ಮುಂಬೈ ಪೊಲೀಸರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಬಂಧನದಲ್ಲಿರುವ ರಾಣಾ ಅವರು ಮುಂಬೈ ದಾಳಿಯಲ್ಲಿನ ಪಾತ್ರಕ್ಕಾಗಿ ಬಹು ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು 26/11 ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ.

400 ಪುಟಗಳ ಚಾರ್ಜ್‍ಶೀಟ್ ಇದುವರೆಗಿನ ಪ್ರಕರಣದಲ್ಲಿ ನಾಲ್ಕನೆಯದು, ಮುಂಬೈ ಪೊಲೀಸರ ಅಪರಾಧ ವಿಭಾಗವು ಸೋಮವಾರ ನ್ಯಾಯಾಲಯದ ನೋಂದಣಿಗೆ ಸಲ್ಲಿಸಿದೆ. ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಬರುವ ಸಾಧ್ಯತೆ ಇದೆ ಎಂದು ಸರಕಾರಿ ವಕೀಲರು ತಿಳಿಸಿಪೊರೆ.

ರಾಣಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಸೆಕ್ಷನ್ 39 ಎ (ಭಯೋತ್ಪಾದಕ ಸಂಘಟನೆಗೆ ನೀಡಿದ ಬೆಂಬಲಕ್ಕೆ ಸಂಬಂ„ಸಿದ ಅಪರಾಧ) ಅನ್ನು ಈ ಪ್ರಕರಣದಲ್ಲಿ ಸೇರಿಸಿದ್ದಾರೆ.

ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆ

ನಾವು ರಾಣಾ ವಿರುದ್ಧ ಹೇಳಿಕೆಗಳು ಮತ್ತು ದಾಖಲೆಗಳ ರೂಪದಲ್ಲಿ ಕೆಲವು ಹೊಸ ಪುರಾವೆಗಳನ್ನು ಪಡೆದುಕೊಂಡಿದ್ದೇವೆ ಎಂದು ಅಧಿಕಾರಿ ಹೇಳಿದರು, ಇದು ಪ್ರಕರಣದ ನಾಲ್ಕನೇ ಆರೋಪಪಟ್ಟಿಯಾಗಿದೆ.ಈ ವರ್ಷದ ಮೇ ತಿಂಗಳಲ್ಲಿ 62 ವರ್ಷದ ರಾಣಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ದೇಶದ ಅಧಿಕಾರಿಗಳಿಗೆ ಪ್ರಮುಖ ವಿಜಯವನ್ನು ನೀಡಿತು.

ಆದಾಗ್ಯೂ, 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂ„ಸಿದಂತೆ ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ಉದ್ಯಮಿಯ ಹಸ್ತಾಂತರಕ್ಕೆ ಆಗಸ್ಟ್‍ನಲ್ಲಿ ತಡೆಯಾಜ್ಞೆ ನೀಡಲಾಯಿತು.

RELATED ARTICLES

Latest News