Friday, September 20, 2024
Homeರಾಷ್ಟ್ರೀಯ | Nationalಸಿಕ್ಕಿಂನಲ್ಲಿ ಚೀನಾ ಗಡಿವರೆಗೆ ರಸ್ತೆ ಸಂಪರ್ಕ ಮರುಸ್ಥಾಪನೆ

ಸಿಕ್ಕಿಂನಲ್ಲಿ ಚೀನಾ ಗಡಿವರೆಗೆ ರಸ್ತೆ ಸಂಪರ್ಕ ಮರುಸ್ಥಾಪನೆ

BRO Restores Vehicular Connectivity To China Border In Sikkim

ಗ್ಯಾಂಗ್ಟಾಕ್‌, ಸೆ 18 (ಪಿಟಿಐ) : ಲಾಚೆನ್‌ ಕಣಿವೆಯ ಉದ್ದಕ್ಕೂ ಚೀನಾ ಗಡಿಗೆ ರಸ್ತೆ ಸಂಪರ್ಕವನ್ನು ಮರುಸ್ಥಾಪಿಸಲು ಸಿಕ್ಕಿಂನ ಮಂಗನ್‌ ಜಿಲ್ಲೆಯ ಝೀಮಾದಲ್ಲಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಹೊಸ ಬೈಲಿ ಸೇತುವೆಯನ್ನು ನಿರ್ಮಿಸಿದೆ ಎಂದು ಅಧಿಕತ ಪ್ರಕಟಣೆ ತಿಳಿಸಿದೆ.

ಈ ವರ್ಷ ಮೇ 29 ರಂದು ಉತ್ತರ ಸಿಕ್ಕಿಂನ ಝೀಮಾದಲ್ಲಿನ ನಿರ್ಣಾಯಕ ಬೈಲಿ ಸೇತುವೆಯು ಲಾಚೆನ್‌ ಚು ನದಿಯಲ್ಲಿ ಹಠಾತ್‌ ಪ್ರವಾಹದಲ್ಲಿ ಹಾನಿಗೊಳಗಾಗಿತ್ತು.

ಸ್ವಸ್ತಿಕ್‌ ಯೋಜನೆಯಡಿಯಲ್ಲಿ ಬಿಆರ್‌ಒ ಕಾರ್ಯಕರ್ತರು ಆ. 24 ರಂದು ಹೊಸ ಬೈಲಿ ಸೇತುವೆಯ ನಿರ್ಮಾಣವನ್ನು ಪ್ರಾರಂಭಿಸಿದರು ಮತ್ತು ಸೆಪ್ಟೆಂಬರ್‌ 16 ರಂದು ಒಂದು ತಿಂಗಳೊಳಗೆ ಪೂರ್ಣಗೊಂಡಿತು ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖವಾದ ಬೈಲಿ ಸೇತುವೆಯ ನಿರ್ಮಾಣವು ಸ್ಥಳೀಯರಿಗೆ ಮಾತ್ರವಲ್ಲದೆ ಚೀನಾ ಗಡಿಯ ಕಡೆಗೆ ಈ ಪ್ರದೇಶದಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಲಾಜಿಸ್ಟಿಕ್‌ ಪೋಷಣೆಯನ್ನು ಸಕ್ರಿಯಗೊಳಿಸುತ್ತದೆ.

ಇದು ಕಳೆದ ವರ್ಷ ಅಕ್ಟೋಬರ್‌ನಿಂದ ಕಡಿತಗೊಂಡಿರುವ ಪ್ರಮುಖ ಪ್ರವಾಸಿ ತಾಣವಾದ ಗುರುದೋಂಗ್‌ಮಾರ್ಗ್‌ ಸರೋವರಕ್ಕೆ ವಾಹನ ಸಂಪರ್ಕವನ್ನು ಒದಗಿಸುವ ಮೂಲಕ ಉತ್ತರ ಸಿಕ್ಕಿಂನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

Latest News