ಬೆಂಗಳೂರು,ಜ.12- ನಗರದಲ್ಲಿ ಸಾಫ್ಟ್ ವೇರ್ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಸಂಭವಿಸಿದಂತೆ ಆಕೆಯ ಮೊಬೈಲ್ ನೀಡಿದ ಸುಳಿವಿನಿಂದ ಕೊಲೆ ಎಂಬುವುದು ದೃಡಪಟ್ಟಿದೆ.ಪ್ರತಿಷ್ಠಿತ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕರ್ಣಲ್ ಕುರೈ (18) ಎಂಬಾತನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ಆರೋಪಿಯು ಶರ್ಮಿಳಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಹಾಸಿಗೆ ಮೇಲೆ ಆಕೆಯ ಬಟ್ಟೆಗಳನ್ನಲ್ಲಾ ಹಾಕಿ ಬೆಂಕಿ ಹಚ್ಚಿ ಆಕೆಯ ಮೊಬೈಲ್ ತೆಗೆದುಕೊಂಡು ಕಿಟಕಿ ಮೂಲಕ ಟೆರೆಸ್‌ನಿಂದ ತನ್ನ ಮನೆಗೆ ವಾಪಸ್ ಆಗಿದ್ದಾನೆ.
ತದ ನಂತರದಲ್ಲಿ ಮೊಬೈಲ್‌ನಿಂದ ಸಿಮ್ ತೆಗೆದು ಬಿಸಾಕಿ ತನ್ನ ಸಿಮ್ ಹಾಕಿಕೊಂಡಿದ್ದು, ಮೂರು ದಿನಗಳ ಬಳಿಕ ಮೊಬೈಲ್ ಆನ್ ಮಾಡುತ್ತಿದ್ದಂತೆ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಘಟನೆ ವಿವರ:
ಸುಬ್ರಮಣ್ಯ ಲೇಔಟ್‌ನ ಫ್ಲಾಟ್‌ನಲ್ಲಿ ಮೂಲತಃ ಮಂಗಳೂರಿನವರಾದ ಶರ್ಮಿಳಾ ವಾಸವಾಗಿದ್ದುಕೊಂಡು ಅಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ನಿಗೂಢವಾಗಿ ಅವರ ಮನೆಗೆ ಬೆಂಕಿ ಹೊತ್ತಿಕೊಂಡು ಶರ್ಮಿಳಾ ಸಾವನ್ನಪ್ಪಿದ್ದಾಳೆ. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಠಾಣೆ ಇನ್‌್ಸಪೆಕ್ಟರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಾಂತ್ರಿಕ ಆಧಾರದ ಮೇಲೆ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಫ್ಲಾಟ್‌ನ ಮುಂಭಾಗದ ಗೇಟ್ ಬೀಗ ಹಾಕಿರು ವುದು ಕಂಡುಬಂದಿದೆ. ಸಿಸಿ ಕ್ಯಾಮೆರಾ ಪರಿಶೀಲಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ.
ಈ ಬಗ್ಗೆ ತನಿಖೆ ಕೈಗೊಂಡಾಗ ಯಾವುದೇ ಅನುಮಾನ ಬಂದಿಲ್ಲ. ಆದರೆ ಶರ್ಮಿಳಾ ಅವರ ಮೊಬೈಲ್ ಮೂರು ದಿನಗಳ ಬಳಿಕ ಆನ್ ಆಗಿದೆ. ತಕ್ಷಣ ಪೊಲೀಸರು ಆ ಮೊಬೈಲ್‌ನ ಟವರ್ ಲೊಕೇಷನ್ ಪರಿಶೀಲಿಸಿದಾಗ ಫ್ಲಾಟ್‌ನ ಪಕ್ಕದ ಮನೆ ತೋರಿಸಿದೆ.ಈ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು ಪಕ್ಕದ ಮನೆಯಲ್ಲಿ ವಾಸವಿದ್ದ ಆರೋಪಿ ಕರ್ನಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಬಯಲಾಗಿದೆ.
ಜ. 3ರಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ತನ್ನ ಮನೆಯ ಟೆರೆಸ್‌ನಿಂದ ಶರ್ಮಿಳಾರ ಫ್ಲಾಟ್‌ಗೆ ಬಂದು ಮನೆಯೊಳಗೆ ಆರೋಪಿ ಕರ್ಣಲ್ ನುಗ್ಗಿ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, ಆತನನ್ನು ತಳ್ಳಿ ದೂರ ಸರಿಯಲು ಯತ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿ, ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಯಾರಿಗೂ ಅನುಮಾನ ಬಾರದಂತೆ, ಕೊಲೆ ಮರೆಮಾಚುವ ಉದ್ದೇಶದಿಂದ ಶರ್ಮಿಳಾ ಮಲಗಿದ್ದ ಬೆಡ್‌ರೂಂಗೆ ಬೆಂಕಿ ಹಚ್ಚಿ ಬಂದಿದ್ದ ರೀತಿಯಲ್ಲೇ ವಾಪಸ್ ಟೆರೆಸ್‌ನಿಂದ ತನ್ನ ಮನೆಗೆ ಹೋಗಿ ಮಲಗಿದ್ದಾನೆ.
