ಶ್ರೀನಗರ, ಸೆ 18- ಜಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ ಪ್ರಾರಂಭವಾಯಿತು, 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ, ಕೇಂದ್ರಾಡಳಿತ ಪ್ರದೇಶದ ಏಳು ಜಿಲ್ಲೆಗಳಲ್ಲಿ ಹರಡಿರುವ 24 ಕ್ಷೇತ್ರಗಳು ಬಿಗಿಯಾದ ಭದ್ರತಾ ವ್ಯವಸ್ಥೆಗಳ ನಡುವೆ ಮತದಾನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಾಗಿದೆ.24 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಮೂರು ಹಂತದ ಚುನಾವಣೆಯ ಮೊದಲ ಹಂತದಲ್ಲಿ ಇಂದು ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳು ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. 90 ಪಕ್ಷೇತರರು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, 11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ತೃತೀಯಲಿಂಗಿ ಮತದಾರರನ್ನು ಒಳಗೊಂಡಂತೆ ಒಟ್ಟು 23,27,580 ಮತದಾರರು ಹಂತ 1 ರಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು.ಸರಿ ಸುಮಾರು ಶೇ.60 ರಷ್ಟು ಮತದಾನ ನಿರೀಕ್ಷಿಸಲಾಗಿದೆ.
18 ರಿಂದ 19 ವರ್ಷ ವಯಸ್ಸಿನ 1.23 ಲಕ್ಷ ಯುವಕರು, 28,309 ವಿಕಲಾಂಗ ವ್ಯಯಕ್ತಿಗಳು (ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 15,774 ಹಿರಿಯ ಮತದಾರರು ಸಹ ಮೊದಲ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲು ಮುಂದಾಗಿದ್ದಾರೆ.
ಒಟ್ಟಾರೆ 3,276 ಮತಗಟ್ಟೆಗಳಲ್ಲಿ ಒಟ್ಟು 14,000 ಮತಗಟ್ಟೆ ಸಿಬ್ಬಂದಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ 302 ನಗರ ಮತಗಟ್ಟೆಗಳು ಮತ್ತು 2,974 ಗ್ರಾಮೀಣ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಉಸ್ತುವಾರಿ ಸೇರಿದಂತೆ ನಾಲ್ವರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸುಮಾರು 14,000 ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನು ಚುನಾವಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಭದ್ರತಾ ವ್ಯವಸ್ಥೆಗಳಲ್ಲಿ ಬಿಎಸ್‌ಎಫ್,ಕೇಂದ್ರೀಯ ಸಶಸ್ತ್ರ ಅರೆಸೇನಾ ಪಡೆ (ಸಿಎಪಿಎಫ್), ಜಮು ಮತ್ತು ಕಾಶೀರ ಸಶಸ್ತ್ರಪೊಲೀಸ್‌ಪಡೆ ಮತ್ತು ಜೆ-ಕೆ ಪೊಲೀಸರ ಬಹು ಹಂತದ ಪಡೆಗಳು ಸೇರಿವೆ.
ಕಾಶ್ಮೀರದ ಪ್ರಮುಖ ಅಭ್ಯರ್ಥಿಗಳ ಪೈಕಿ ಬುಧವಾರದಂದು ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹದ್, ನ್ಯಾಷನಲ್ ಕಾನ್ಫರೆನ್‌್ಸನ ಸಕೀನಾ ಇಟೂ ಮತ್ತು ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿಗೆ ಬಿಜೆಪಿ ಸವಾಲೊಡ್ಡಿದೆ.
ಜಮುವಿನಲ್ಲಿ, ತಮ ಅದೃಷ್ಟ ಪರೀಕ್ಷೆಗೆ ಮಾಜಿ ಸಚಿವರಾದ ಸಜ್ಜದ್ ಕಿಚ್ಲೂ (ಎನ್‌ಸಿ), ಖಾಲಿದ್ ನಜೀಬ್ ಸುಹರ್ವದಿರ್(ಎನ್‌ಸಿ) ವಿಕಾರ್ ರಸೂಲ್ ವಾನಿ (ಕಾಂಗ್ರೆಸ್), ಅಬ್ದುಲ್ ಮಜಿದ್ ವಾನಿ (ಡಿಪಿಎಪಿ), ಸುನಿಲ್ ಶರ್ಮಾ (ಬಿಜೆಪಿ), ಶಕ್ತಿ ರಾಜ್ ಪರಿಹಾರ್ (ದೋಡಾ ಪಶ್ಚಿಮ), ಮತ್ತು ಎರಡು ವರ್ಷಗಳ ಹಿಂದೆ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ ತೊರೆದ ನಂತರ ಡಿಪಿಎಪಿಯಿಂದ ಟಿಕೆಟ್ ನಿರಾಕರಿಸಿದ ನಂತರ ಮೂರು ಬಾರಿ ಶಾಸಕರಾಗಿರುವ ಗುಲಾಂ ಮೊಹಮ್ಮದ್ ಸರೂರಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ (ಬಿಜೆಪಿ), ಮಾಜಿ ಎಂಎಲ್‌ಸಿ ಫಿರ್ದೌಸ್ ತಕ್ ಮತ್ತು ಇಮ್ತಿಯಾಜ್ ಶಾನ್ (ಪಿಡಿಪಿ), ಎನ್‌ಸಿಯ ಪೂಜಾ ಠಾಕೂರ್, ಜಿಲ್ಲಾ ಅಭಿವೃದ್ಧಿ ಮಂಡಳಿಯ ಹಾಲಿ ಅಧ್ಯಕ್ಷೆ ಕಿಶಾ್ತ್ವರ್, ಬಿಜೆಪಿಯ ಯುವ ಮುಖ ಶಗುನ್ ಪರಿಹಾರ್ ಅದೃಷ್ಠ ಪರೀಕ್ಷೆ ನಡೆಸುತ್ತಿದ್ದಾರೆ.
ಇಂದು ಪಂಪೋರ್‌ಟ್ರಾಲ್, ಪುಲ್ವಾಮಾ, ರಾಜ್‌ಪೋರಾ, ಜೈನಾಪೋರಾ, ಶೋಪಿಯಾನ್, ಡಿಎಚ್ ಪೋರಾ, ಕುಲ್ಗಾಮ್, ದೇವ್‌ಸರ್ ದೂರು, ಕೋಕರ್‌ನಾಗ್(ಎಸ್‌ಟಿ), ಅನಂತನಾಗ್ ಪಶ್ಚಿಮ, ಅನಂತನಾಗ್, ಶ್ರೀಗುಫ್ವಾರಾ-ಬಿಜ್‌ಬೆಹರಾ, ಶಾಂಗಸ್-ಅನಂತ್‌ನಾಗ್ ಪೂರ್ವ, ಪಹಲ್ಗಾಮ್, ಇಂದರ್ವಾಲ್, ಕಿರ್ಶ್ತ್ವ ಪಡ್ಡರ್,ನಾಗ್ಸೇನಿ, ಭದವಾರ್, ದೋಡಾ, ದೋಡಾ , ರಾಂಬನ್ ಮತ್ತು ಬನಿಹಾಲ್ ಮತದಾನ ನಡೆಯುತ್ತಿದ್ದು ,ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಇನ್ನೆರಡು ಹಂತಗಳು ಚುನಾವಣೆ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದ್ದು, ಮತಗಳ ಎಣಿಕೆ ಅಕ್ಟೋಬರ್ 8 ರಂದು ನಡೆಯಲಿದೆ.