Thursday, December 12, 2024
Homeಅಂತಾರಾಷ್ಟ್ರೀಯ | International200 ಆನೆಗಳೂ ಸೇರಿದಂತೆ ಕಾಡು ಪ್ರಾಣಿಗಳನ್ನು ಕೊಲ್ಲಲ್ಲು ಅನುಮತಿ ನೀಡಿದ ಜಿಂಬಾಬ್ವೆ ಸರ್ಕಾರ

200 ಆನೆಗಳೂ ಸೇರಿದಂತೆ ಕಾಡು ಪ್ರಾಣಿಗಳನ್ನು ಕೊಲ್ಲಲ್ಲು ಅನುಮತಿ ನೀಡಿದ ಜಿಂಬಾಬ್ವೆ ಸರ್ಕಾರ

Zimbabwe to cull 200 Elephants to aid communities hit by Drought

ಹರಾರೆ,ಸೆ.18- ಭೀಕರ ಬರಗಾಲಕ್ಕೆ ತುತ್ತಾಗಿರುವ ಕೂಡ ಅಲ್ಲಿನ ಕಾಡು ಪ್ರಾಣಿಗಳನ್ನು ಕೊಲ್ಲಲ್ಲು ಸರ್ಕಾರ ಅನುಮತಿ ನೀಡಿದೆ. ನಮೀಬಿಯಾ ಸರ್ಕಾರದ ಬಳಿಕ ಆಫ್ರೀಕಾ ಖಂಡದ ಮತ್ತೊಂದು ದೇಶ ಇಂತಹ ನಿರ್ಧಾರಕ್ಕೆ ಬಂದಿದೆ.

ನಾವು ಸುಮಾರು 200 ಆನೆಗಳನ್ನು ಕೊಲ್ಲುತ್ತೇವೆ. ಅವುಗಳ ಮಾಂಸವನ್ನು ಅವಶ್ಯವಿರುವ ಸಮುದಾಯಗಳ ಜನರಿಗೆ ಹಂಚುತ್ತೇವೆ ಎಂದು ಜಿಂಬಾಬ್ವೆ ತಿಳಿಸಿದೆ. ಇದೇ ರೀತಿ ನಮೀಬಿಯಾ ದೇಶ ಕೂಡಾ ವಾರದ ಹಿಂದೆ ಇಂಥದ್ದೇ ಕ್ರಮಕ್ಕೆ ಮುಂದಾಗಿತ್ತು. 700ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿತ್ತು. ಈ ಪೈಕಿ 83 ಆನೆಗಳನ್ನು ಕೊಲ್ಲುವ ಕಾರ್ಯ ಅಲ್ಲಿ ನಡೆಯುತ್ತಿದೆ.

ಜಿಂಬಾಬ್ವೆ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ನಿರ್ವಹಣಾ ಪ್ರಾಧಿಕಾರದ ವಕ್ತಾರ ತಿನಶೆ ಫರವೊ ಪ್ರತಿಕ್ರಿಯಿಸಿ, ನಾವು ಅವಶ್ಯವಿರುವ ಸಮುದಾಯದ ಜನರಿಗೆ ಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ನೀಡುತ್ತೇವೆ. ಅದೇ ರೀತಿ ಹಂಚಿಕೆಯಾದ 200 ಪ್ರಾಣಿಗಳನ್ನು ನಮ ಪ್ರಾಧಿಕಾರ ಕೊಲ್ಲಲಿದೆ. ಅನುಮತಿ ಪತ್ರ ವಿತರಿಸಿದ ನಂತರ ಪ್ರಾಣಿಗಳನ್ನು ಹತ್ಯೆ ಮಾಡುವ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಹಾಗು ಮಾನವ ಮತ್ತು ವನ್ಯಜೀವಿಗಳ ನಡುವೆ ಆಹಾರ ಮತ್ತು ನೀರಿಗೆ ಸಂಘರ್ಷ ನಡೆಯುತ್ತಿರುವ ದೇಶದ ಪಶ್ಚಿಮ ಶುಷ್ಕ ಪ್ರದೇಶವಾದ ಹ್ವಾಂಗೆ ರಾಷ್ಟ್ರೀಯ ಉದ್ಯಾನವನ ಮುಂತಾದೆಡೆ ಆನೆಗಳ ಹತ್ಯೆ ಕೆಲಸ ನಡೆಯುತ್ತದೆ.

1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಜೊತೆಗೆ 55,000 ಆನೆಗಳಿಗೆ ಆಶ್ರಯ ಒದಗಿಸಬಲ್ಲ ನಮ ದೇಶದಲ್ಲಿ ಪಸ್ತುತ 84,000 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ಜಿಂಬಾಬ್ವೆ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎನ್ನುವ ಮೂಲಕ ಆನೆ ಹತ್ಯೆ ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪ್ರೋಟೀನ್‌ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಬ್ವೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ ಎಂದೂ ಸಹ ವರದಿಯಾಗಿತ್ತು.

ಪ್ರತಿ 5 ವರ್ಷಗಳಿಗೊಮೆ ಆನೆ ಗಣತಿಯನ್ನು ನಡೆಸಲಾಗುತ್ತದೆ. 2021ರ ಆನೆ ಗಣತಿ ವರದಿ ಪ್ರಕಾರ ಜಿಂಬಾಬ್ವೆ 1 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವಕ್ಕೆ 2ನೇ ಸ್ಥಾನದಲ್ಲಿತ್ತು. ಆದರೀಗ 84 ಸಾವಿರ ಆನೆಗಳನ್ನಷ್ಟೇ ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.
2021ರ ಆನೆ ಗಣತಿ ವರದಿ ಅನ್ವಯ ಬೋಟ್ಸ್ವಾನ 1.30 ಲಕ್ಷ ಆನೆಗಳನ್ನು ಹೊಂದಿದ್ದು, ವಿಶ್ವದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ದೇಶವಾಗಿದೆ.

ಇನ್ನೂ ಜಿಂಬಾಬ್ವೆ 1 ಲಕ್ಷ, ತಾಂಜಾನಿಯಾ 60 ಸಾವಿರ ಆನೆಗಳನ್ನು ಹೊಂದಿದೆ. 2022ರ ಗಣತಿ ಪ್ರಕಾರ 35 ಸಾವಿರ ಆನೆಗಳನ್ನು ಹೊಂದಿರುವ ಕೀನ್ಯಾ 4ನೇ ಸ್ಥಾನದಲ್ಲಿದ್ದು, 24 ಸಾವಿರ ಆನೆಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ 5ನೇ ಸ್ಥಾನದಲ್ಲಿದೆ.

ಹ್ವಾಂಗೆ ಪ್ರದೇಶ 45,000ಕ್ಕೂ ಹೆಚ್ಚು ಆನೆಗಳನ್ನು ಹೊಂದಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಕೇವಲ 15,000 ಆನೆಗಳನ್ನು ಹೊಂದುವ ಸಾಮರ್ಥ್ಯವಷ್ಟೇ ಇದೆ. ದೇಶದಲ್ಲಿ ಒಟ್ಟು 100,000 ಆನೆಗಳಿದ್ದು, ಇದು ದೇಶದ ರಾಷ್ಟ್ರೀಯ ಉದ್ಯಾನವನ ಸಾಮರ್ಥ್ಯದ ಎರಡು ಪಟ್ಟು ಹೆಚ್ಚು ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯಾನವನದ ಅಧಿಕಾರಿಗಳು ಕಳೆದ ಡಿಸೆಂಬರ್‌ನಲ್ಲಿ ಹೇಳಿರುವಂತೆ, ಬರಗಾಲದಿಂದಾಗಿ 100ಕ್ಕೂ ಹೆಚ್ಚು ಆನೆಗಳನ್ನು ಸಾವನ್ನಪ್ಪಿವೆ. ದೇಶವು ಮುಂಬರುವ ದಿನಗಳಲ್ಲಿ ಅತ್ಯಂತ ಹೆಚ್ಚು ತಾಪಮಾನ ಎದುರಿಸಲಿದ್ದು, ನೀರು, ಆಹಾರ ಸಿಗದೆ ಇನ್ನೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಫರವೊ ತಿಳಿಸಿದರು.

ಜಿಂಬಾಬ್ವೆಯ ಪರಿಸರ ಖಾತೆ ಸಚಿವೆ ಸಿಥೆಂಬಿಸೊ ನ್ಯಾನಿ, ಕಳೆದ ವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ದೇಶದಲ್ಲಿ ನಮ ಅವಶ್ಯಕತೆಗಿಂತ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ನಮ ಅರಣ್ಯ ಪ್ರದೇಶಗಳು ತಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪೊಟ್ಟಣದಲ್ಲಿ ಪ್ಯಾಕ್‌ ಮಾಡಿ ಅವಶ್ಯವಿರುವ ಸಮುದಾಯದ ಜನರಿಗೆ ವಿತರಿಸುತ್ತೇವೆ. ಈ ಮೂಲಕ ಹಸಿವಿನಿಂದ ನರಳುತ್ತಿರುವ ಜನರಿಗೆ ಕೆಲವು ಪ್ರಮಾಣದ ಪ್ರೋಟೀನ್‌ ದೊರೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು.

ನಮೀಬಿಯಾದಲ್ಲೂ ಬರ:
ಕೆಲ ದಿನಗಳ ಹಿಂದೆಯಷ್ಟೇ ನಮೀಬಿಯಾ ಸರ್ಕಾರವೂ ಪ್ರಾಣಿಗಳನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದೆ. ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಇತ್ತೀಚೆಗೆ ಹೇಳಿತ್ತು.

RELATED ARTICLES

Latest News