ಬೆಂಗಳೂರು, ಸೆ.18– ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳಿರುವ ಬ್ಯಾರಕ್‌ಗಳಲ್ಲಿ ಮತ್ತೆ 9 ಮೊಬೈಲ್‌ಗಳು ಪತ್ತೆಯಾಗಿವೆ.ಈ ಬಗ್ಗೆ ಕಾರಾಗೃಹದ ಮುಖ್ಯ ಅಧೀಕ್ಷಕ ಸುರೇಶ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು ಹೇಗೆ ಬಂದವು, ಯಾರ್ಯಾರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆಹಚ್ಚುವಂತೆ ಅವರು ದೂರು ನೀಡಿದ್ದಾರೆ. ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ 1 ಕೀ ಪ್ಯಾಡ್, 8 ಹ್ಯಾಂಡ್ರೆಡ್ ಫೋನ್‌ಗಳು ಸಿಕ್ಕಿವೆ. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಶನಿವಾರ ಸಂಜೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರ ನೇತೃತ್ವದಲ್ಲಿ ಒಬ್ಬರು ಎಸಿಪಿ, ನಾಲ್ವರು ಇನ್ಸ್ ಪೆಕ್ಟರ್‌ಗಳು ಸೇರಿದಂತೆ 30 ಸಿಬ್ಬಂದಿ ತಂಡ ಜೈಲಿನ ಮೇಲೆ ದಾಳಿಮಾಡಿದ ಸಂದರ್ಭದಲ್ಲಿ 15 ಮೊಬೈಲ್‌ಗಳು, ಚಾರ್ಜರ್‌ಗಳು, ಪೆನ್‌ಡ್ರೈವ್, ಇಯರ್ ಫೋನ್‌ಗಳು ಸಿಕ್ಕಿದ್ದವು.
ರೌಡಿ ವಿಲ್ಸನ್‌ಗಾರ್ಡನ್ ನಾಗ ಮತ್ತು ಆತನ ಸಹಚರರು ಹಾಗೂ ಇತರರ ಬ್ಯಾರಕ್‌ಗಳಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆಯೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.