ಚೆನ್ನೈ, ಸೆ.19- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಡಕ್‌ಔಟ್ ಆದ ಶುಭಮನ್‌ಗಿಲ್ ಅನಗತ್ಯ ದಾಖಲೆ ನಿರ್ಮಿಸುವ ಮೂಲಕ ವಿರಾಟ್‌ಕೊಹ್ಲಿ ಇರುವ ಎಲೈಟ್ ಲಿಸ್ಟ್‌ಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ 2 ಬಾರಿ ಡಕೌಟ್ ಆಗಿದ್ದ ಗಿಲ್, ಈಗ ಬಾಂಗ್ಲಾ ಸರಣಿಯ ಪ್ರಥಮ ಇನಿಂಗ್ಸ್ ನಲ್ಲಿ ಶೂನ್ಯ ಸುತ್ತುವ ಮೂಲಕ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 3 ಬಾರಿ ಡಕೌಟ್ ಆದ ಭಾರತದ 6ನೇ ಆಟಗಾರ ಎಂಬ ಅನಗತ್ಯ ದಾಖಲೆ ಬರೆದರು.ಪಂದ್ಯದಲ್ಲಿ 8 ಎಸೆತ ಎದುರಿಸಿದ ಗಿಲ್, ಬಾಂಗ್ಲಾ ವೇಗಿ ಹಸನ್‌ಮಹಮೂದ್‌ಗೆ ವಿಕೆಟ್ ಒಪ್ಪಿಸಿದರು.
ಭಾರತ ತಂಡದ ಪರ ಒಂದೇ ವರ್ಷದಲ್ಲಿ ಅತಿ ಹೆಚ್ಚು ಡಕೌಟ್:
- ಮೊಹಿಂದರ್ ಅಮರ್‌ನಾಥ್- 1983
- ಮನ್ಸೂರ್ ಅಲಿ ಪಟೌಡಿ- 1969
- ದಿಲೀಪ್ ವೆಂಗಾಸ್ಕರ್- 1979
- ವಿನೋದ್ ಕಾಂಬ್ಳಿ-1994
- ವಿರಾಟ್‌ಕೊಹ್ಲಿ- 2021
- ಶುಭಮನ್‌ಗಿಲ್- 2024