ನಿತ್ಯ ನೀತಿ : ಒಳ್ಳೆಯ ವಿಚಾರಗಳ ಬಗ್ಗೆ ಯೋಚಿಸಿ, ಒಳ್ಳೆಯ ಪುಸ್ತಕಗಳನ್ನು ಓದಿ,
ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ಜೀವನವನ್ನು ಹೆಚ್ಚು ಆಸಕ್ತಿಕರವಾಗಿಸುತ್ತದೆ.
ಪಂಚಾಂಗ : ಶುಕ್ರವಾರ , 20-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಅಶ್ವಿನಿ / ಯೋಗ: ಧ್ರುವ / ಕರಣ: ವಣಿಜ್
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.17
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳಾಗಲಿವೆ. ಎಚ್ಚರಿಕೆಯಿಂದಿರಿ.
ವೃಷಭ: ಮನೆದೇವರ ದರ್ಶನದಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗುವುದು.
ಮಿಥುನ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಲಹೆಗಳು ಮತ್ತು ಸಹಾಯ ಸಿಗಲಿದೆ.
ಕಟಕ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಸಿಂಹ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಕನ್ಯಾ: ಕುಟುಂಬದ ಹಿರಿ ಯರಿಗೆ ಪ್ರಾಮುಖ್ಯತೆ ನೀಡಿ. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ತುಲಾ: ನಂಬಿದ ಜನರಿಂದ ಮೋಸ ಹೋಗುವಿರಿ. ಕೆಲಸ-ಕಾರ್ಯಗಳಿಗೆ ವಿಘ್ನ ಎದುರಾಗಲಿದೆ.
ವೃಶ್ಚಿಕ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿ ಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.
ಧನುಸ್ಸು: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಾರ್ಯಕ್ಷಮತೆ ಬಹಳ ಉತ್ತಮವಾಗಿರುತ್ತದೆ.
ಮಕರ: ಉದ್ಯೋಗದಲ್ಲಿ ತೊಂದರೆಗಳು ಕಾಣಿಸಿ ಕೊಳ್ಳಲಿವೆ. ವ್ಯಾಪಾರಿಗಳಿಗೆ ಅಲ್ಪ ಲಾಭ.
ಕುಂಭ: ಸಂಗಾತಿಯೊಂದಿಗೆ ವಿನಾಕಾರಣ ಕಲಹ ಉಂಟಾಗಲಿದೆ. ತಾಳ್ಮೆಯಿಂದ ವರ್ತಿಸಿ.
ಮೀನ: ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಆಗಮನವಾಗಲಿದೆ.