Sunday, November 24, 2024
Homeಅಂತಾರಾಷ್ಟ್ರೀಯ | Internationalಶ್ರೀಲಂಕಾದ ಅಧ್ಯಕ್ಷರಾಗಿ ಅನುರಾ ಕುಮಾರ ಡಿಸಾನಾಯಕೆ ಆಯ್ಕೆ ಖಚಿತ

ಶ್ರೀಲಂಕಾದ ಅಧ್ಯಕ್ಷರಾಗಿ ಅನುರಾ ಕುಮಾರ ಡಿಸಾನಾಯಕೆ ಆಯ್ಕೆ ಖಚಿತ

Marxist politician Anura Kumara Dissanayaka set to become Sri Lanka's next president

ಕೊಲಂಬೊ, ಸೆ 22-ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಕರಾಗಿ ಮಾರ್ಕ್‌ಸ್‌‍ವಾದಿ ನ್ಯಾಷನಲ್‌ ಪೀಪಲ್‌್ಸ ಪವರ್‌ (ಎನ್‌ಪಿಪಿ) ನಾಯಕ ಅನುರಾ ಕುಮಾರ ಡಿಸಾನಾಯಕೆ ಅವರು ಆಯ್ಕೆ ಬಹುತೇಕ ಖಚಿತಗೊಂಡಿದೆ.

ಕಳದ 2022 ರಲ್ಲಿ ಆರ್ಥಿಕ ದಿವಾಳಿ ನಂತರ ಚೇತರಿಸಿಕೊಂಡ ನಂತರ ಈಗ ನಡೆದ ಮೊದಲ ಚುನಾವಣೆಲ್ಲಿ ಹೊಸ ಅಧ್ಯಕ್ಷ ಆಯ್ಕೆಗೆ ಮತ ನಡೆದಿದ್ದು ಇಂದು ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.75ರಷ್ಟು ಮತದಾನವಾಗಿತ್ತು.ಇಂದು ಬೆಳಿಗ್ಗೆ 7 ಗಂಟೆಗೆ ಘೋಷಿಸಲಾದ ಮತ ಎಣಿಕೆ ಪಲಿತಾಂಶದಲ್ಲಿ 56 ವರ್ಷದ ಡಿಸಾನಾಯಕೆ ಅವರು 727,000 ಮತಗಳನ್ನುಗಳಿಸಿ ಭಾರಿ ಮುನ್ನಡೆ ಸಾಧಿಸಿದಾರೆ ಅವರ ಹತ್ತಿರದ ಪ್ರತಿಸ್ಪರ್ಧಿ 57 ವರ್ಷದ ಸಜಿತ್‌ ಪ್ರೇಮದಾಸ 333,000 ಮತಗಳನ್ನುಪಡೆದಿದ್ದರೆ

ಹಾಲಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರು 235,000 ರಷ್ಟು ಮತಗ ಪಡೆದಿದ್ದು ಸೋಲು ಖಚಿತವಾಗಿದೆ. ವಿವಿಧ ಜಿಲ್ಲೆಗಳ 168 ಭೌಗೋಳಿಕ ಸಂಸದೀಯ ಸ್ಥಾನಗಳಿಂದ ಇಲ್ಲಿಯವರೆಗೆ ಘೋಷಿಸಲಾದ ಫಲಿತಾಂಶದಲ್ಲಿ ಡಿಸಾನಾಯಕೆ ಜನರ ಒಲವು ಪಡೆದಿದ್ದಾರೆ. ವಿಕ್ರಮಸಿಂಘೆ ಅವರು ಇನ್ನೂ ಸೋಲನ್ನು ಒಪ್ಪಿಕೊಂಡಿಲ್ಲ ಆದರೆ ಅವರ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು ಡಿಸ್ಸಾನಾಯಕ್‌ ಅವರ ಗೆಲುವಿಗಾಗಿ ಅಭಿನಂದಿಸಿದರು.

ಸುದೀರ್ಘ ಮತ್ತು ಪ್ರಯಾಸಕರ ಪ್ರಚಾರದ ನಂತರ, ಚುನಾವಣಾ ಫಲಿತಾಂಶಗಳು ಈಗ ಸ್ಪಷ್ಟವಾಗಿವೆ. ನಾನು ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರ ಪರವಾಗಿ ಭಾರಿ ಪ್ರಚಾರ ಮಾಡಿದ್ದರೂ, ಶ್ರೀಲಂಕಾದ ಜನರು ತವ ಬದಲಾವಣೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ಅನುರ ಕುಮಾರ ಡಿಸಾನಾಯಕೆಗೆ ಅವರಿಗೆ ಜನಾದೇಶವನ್ನು ನೀಡಿರುವುದಕ್ಕೆ ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ , ಜನರ ಇಚ್ಛೆಯನ್ನು ಗೌರವಿಸುವುದು ಬಹುಮುಖ್ಯವಾಗಿದೆ ಮತ್ತು ನಾನು ಹಿಂಜರಿಕೆಯಿಲ್ಲದೆ ಹೇಳುತ್ತಿದೇನೆ ಎಂದು ಸಾಬ್ರಿ ಎಕ್‌್ಸನಲ್ಲಿ ಬರೆದಿದ್ದಾರೆ.

ಡಿಸಾನಾಯಕೆ ಅವರ ಗೆಲುವಿನ ಪೂರ್ವಭಾವಿ ನಿರೀಕ್ಷೆಗಳ ಹೊರತಾಗಿಯೂ ಬೆಭಲ ನಂಬಲಾಗದ ಪ್ರಮಾಣದಲ್ಲಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ. ದಿಸಾನಾಯಕೆಯವರ 2020 ಆಗಸ್ಟ್‌ನಲ್ಲಿ ನಡೆದಿದ್ದ ಸಂಸತ್ತಿನ ಚುನಾವಣೆಯಲ್ಲಿ ಶೇ.3 ರಷ್ಟು ಮತಗಳನ್ನು ಗಳಿಸಿದ್ದರು. ಶ್ರೀಲಂಕಾದ ಬಿಕ್ಕಟ್ಟು ಡಿಸ್ಸಾನಾಯಕೆಗೆ ಒಂದು ಅವಕಾಶವನ್ನು ಸಾಬೀತುಪಡಿಸಿದೆ, ಅವರು ದ್ವೀಪದ ಭ್ರಷ್ಟ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸುವ ಪ್ರತಿಜ್ಞೆಯಿಂದಾಗಿ ಬೆಂಬಲದ ಉಲ್ಬಣಗೊಂಡಂತೆ ಕಾಣುತ್ತಿದೆ.

22 ಚುನಾವಣಾ ಜಿಲ್ಲೆಗಳ 13,400 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 4 ರವರೆಗೆ ಮತದಾನ ನಡೆದಿದ್ದು, ಚುನಾವಣೆಯಲ್ಲಿ ಅತಿ ಹೆಚ್ಚು 38 ಅಭ್ಯರ್ಥಿಗಳಿದ್ದರು ಆದರೆ ಯಾವುದೇ ಮಹಿಳಾ ಆಕಾಂಕ್ಷಿಗಳಿರಲಿಲ್ಲ.
ಶ್ರೀಲಂಕಾದ ಮತದಾರರು ಆದ್ಯತೆಯ ಕ್ರಮದಲ್ಲಿ ಮೂರು ಅಭ್ಯರ್ಥಿಗಳಿಗೆ ಶ್ರೇಯಾಂಕ ನೀಡುವ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡುತ್ತಾರೆ.

ಅಭ್ಯರ್ಥಿಯು ಸಂಪೂರ್ಣ ಬಹುಮತವನ್ನು ಪಡೆದರೆ, ಅವರನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಇಲ್ಲದಿದ್ದರೆ, ಎರಡನೇ ಮತ್ತು ಮೂರನೇ ಆಯ್ಕೆಯ ಮತಗಳನ್ನು ಗಣನೆಗೆ ತೆಗೆದುಕೊಂಡು ಎರಡನೇ ಸುತ್ತಿನ ಎಣಿಕೆ ಪ್ರಾರಂಭವಾಗುತ್ತದೆ.

RELATED ARTICLES

Latest News