ಸಂಕಷ್ಟದಲ್ಲಿರುವ ಶ್ರೀಲಂಕಾ ನೆರವಿಗೆ ಭಾರತ ಬದ್ಧ ; ಜೈಶಂಕರ್

ನವದೆಹಲಿ,ಮಾ.18-ಸಂಕಷ್ಟದಲ್ಲಿರುವ ನೆರೆಹೊರೆ ದೇಶಗಳ ನೆರವಿಗೆ ಭಾರತ ಸದಾ ಮುಂದಿರುತ್ತದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯಲ್ಲಿ ನಡೆದ ದಿ ಎಕ್ಸಿಬಿಷನ್ ಆಫ್ ಶ್ರೀಲಂಕಾದ ಆರ್ಕಿಟೆಕ್ಟ್ ‘ಜೆಫ್ರಿ ಬಾವಾ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ತವು ನೀರಿಗಿಂತ ದಪ್ಪಗಿರುತ್ತದೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಜೈಶಂಕರ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತವು ತನ್ನ ನೈಬರ್‍ಹುಡ್ ಫಸ್ಟ್ ನೀತಿಯಡಿಯಲ್ಲಿ, ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾಕ್ಕೆ ಸಹಾಯ ಮಾಡಲು […]

ಶ್ರೀಲಂಕಾಕ್ಕೆ 2 ವಿಕೆಟ್‍ಗಳ ಸೋಲು : ಟೆಸ್ಟ್ ಫೈನಲ್‍ಗೇರಿದ ಭಾರತ

ಕ್ರಿಸ್ಟ್‍ಚರ್ಚ್, ಮಾ. 13- ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‍ಗಳ ಸೋಲು ಕಾಣುವ ಮೂಲಕ ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ. ಶ್ರೀಲಂಕಾದ ಈ ಸೋಲಿನಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಫಲಿತಾಂಶಕ್ಕೆ ಕಾಯದೆಯೇ ಫೈನಲ್‍ಪಂದ್ಯದ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2 ಟೆಸ್ಟ್‍ಗಳಲ್ಲೂ ಶ್ರೀಲಂಕಾ ಕ್ಲೀನ್ ಸ್ವೀಪ್ ಮಾಡಿದ್ದರೆ ಆಗ ಫೈನಲ್‍ನಲ್ಲಿ ಆಡುವ ಅವಕಾಶ ಪಡೆಯಬಹುದಿತ್ತು. ಟೆಸ್ಟ್ ಸ್ವರೂಪದ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾ […]

ಪಾಕ್ ಮತ್ತು ಶ್ರೀಲಂಕಾ ಮೇಲೆ ಹತೋಟಿ ಸಾಧಿಸಲು ಚೀನಾ ಪ್ಲಾನ್

ವಾಷಿಂಗ್ಟನ್,ಫೆ.25-ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಸಾಲ ನೀಡಿ ಬಲವಂತದಿಂದ ಆ ದೇಶಗಳ ಮೇಲೆ ಹತೋಟಿ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಸಾಲ ನೀಡಿ ಅ ಮೂಲಕ ಎರಡು ರಾಷ್ಟ್ರಗಳ ಮೇಲೆ ಬಲವಂತದ ಹತೋಟಿ ಪಡೆದುಕೊಳ್ಳಬಹುದು ಎಂಬ ಶಂಕೆಯಿದೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಸುದ್ದಿಗಾರರಿಗೆ ತಿಳಿಸಿದರು. ಕುಟುಂಬದ ಪ್ರತಿಯೊಬ್ಬರಿಗೂ 10ಕೆಜಿ ಉಚಿತ ಅಕ್ಕಿ : ಕಾಂಗ್ರೆಸ್ […]

ನಾಳೆಯಿಂದ ಭಾರತ-ಶ್ರೀಲಂಕಾ ಏಕದಿನ ಸರಣಿ

ಗುವಾಹಟಿ, ಜ. 9- ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ 20 ಸರಣಿಯನ್ನು 2-1 ರಿಂದ ಗೆದ್ದುಕೊಂಡು ಸಂಭ್ರಮದಲ್ಲಿರುವ ಭಾರತ ತಂಡವು ನಾಳೆಯಿಂದ ಇಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಕೈ ಬೆರಳ ನೋವಿನಿಂದ ಸಂಪೂರ್ಣ ಗುಣಮುಖರಾಗಿ ಫಿಟ್ನೆಸ್ ಹೊಂದಿರುವ ಕಾರಣ ರೋಹಿತ್ ಶರ್ಮಾ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಟಿ 20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಜಸ್ಪ್ರೀತ್ […]

ನಾಳೆಯಿಂದ ಭಾರತ-ಲಂಕಾ ಚುಟುಕು ಸರಣಿ

ಮುಂಬೈ, ಜ. 2- ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯಲಿರುವ 3 ಪಂದ್ಯಗಳ ಚುಟುಕು ಸರಣಿಯು ನಾಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯ ಮೂಲಕ ಟೀಮ್ ಇಂಡಿಯಾವು 2023ರಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದ್ದು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯ ಅವರು ಮುನ್ನಡೆಸಲಿದ್ದು, ಟ್ವೆಂಟಿ-20 ಸ್ಪೆಷಾಲಿಸ್ಟ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕಳೆದ ವರ್ಷ […]

ಶ್ರೀಲಂಕಾ ಸಂಸತ್‍ಗೆ ಪರಮಾಧಿಕಾರ ಕಾಯ್ದೆ ತಿದ್ದುಪಡಿಗೆ ವಿರೋಧ

ಕೊಲೊಂಬೋ, ಅ.4- ಆರ್ಥಿಕವಾಗಿ ಜರ್ಝರಿತವಾಗಿರುವ ಶ್ರೀಲಂಕದಲ್ಲಿ ಸಿಟ್ಟಿಗೆದ್ದ ಪ್ರತಿಭಟನಾಕಾರರ ಬೇಡಿಕೆಯಂತೆ ಸಂವಿಧಾನದ ಕಲಂ 22ಕ್ಕೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಆಡಳಿತ ಪಕ್ಷ ಶ್ರೀಲಂಕಾ ಪೊಡುಜನ ಪೆರಮುನ (ಎಸ್‍ಎಲ್‍ಪಿಪಿ) ಸಂಸದರ ವಿರೋಧದಿಂದಾಗಿ ಮಹತ್ವದ ಮಸೂದೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆ ಇದೆ. ಕಲಂ 22 ದೇಶದ ಅಧ್ಯಕ್ಷರ ಬದಲಿಗೆ ದೇಶದ ಸಂಸತ್‍ಗೆ ಸಂಪೂರ್ಣ ಪರಮಾಧಿಕಾರ ನೀಡುವುದಾಗಿದೆ. ಅಕ್ಟೋಬರ್ 6 ಮತ್ತು 7ರಂದು ಈ ವಿಧೇಯಕದ ಮೇಲಿನ ಚರ್ಚೆಗೆ ಸಮಯ ನಿಗದಿಯಾಗಿತ್ತು. ಆದರೆ ಸಂಸತ್‍ನಲ್ಲಿ […]

ನಮ್ಮ ಹಡಗಿನಿಂದ ಯಾರಿಗೂ ಹಾನಿ ಆಗಲ್ಲ : ಚೀನಾ

ಬೀಜಿಂಗ್, ಆ.17- ಭಾರತದ ನೆರೆಯ ಶ್ರೀಲಂಕಾದ ಸಮುದ್ರ ದಂಡೆಯಲ್ಲಿ ಲಂಗರು ಹಾಕಿರುವ ಚೀನಾದ ಅತ್ಯಾಧುನಿಕ ಹಡಗಿನಿಂದ ಯಾವುದೇ ದೇಶಕ್ಕೆ ಹಾನಿಯಾಗುವುದಿಲ್ಲ ಮತ್ತು ಮೂರನೇ ವ್ಯಕ್ತಿ ಹಡಗು ನಿಲುಗಡೆಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‍ಬಿನ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕಾದ ಆತಂಕಗಳಿಗೆ ಚೀನಾ ಸ್ಪಷ್ಟನೆ ನೀಡಿದೆ. ಯುನ್ ವಾಂಗ್ 5 ಹೆಸರಿನ ತನ್ನ ಹಡಗನ್ನು ಚೀನಾ ಶ್ರೀಲಂಕಾದ ದಕ್ಷಿಣ ವಲಯದಲ್ಲಿನ ಹಂಬಂಟೋಟಾದ ಬಂದರಿನಲ್ಲಿ ಭಾರತದ ಸಮುದ್ರ ಪ್ರಾಂತ್ಯ ಸಮೀಪದಲ್ಲಿ ನಿಲ್ಲಿಸಿದೆ. ಇದು […]

ಶ್ರೀಲಂಕಾದ ಹಂಬಂಟೋಟಾ ಬಂದರಿಗೆ ಬಂದ ಚೀನಾದ ಸಂಶೋಧನಾ ಹಡಗು

ಕೊಲಂಬೊ, ಆ.16 – ಭಾರತದ ಕಳವಳದ ನಡುವೆ ಚೀನಾದ ಗುಪ್ತಚರ ಹಡಗು ಇಂದು ಶ್ರೀಲಂಕಾದ ದಕ್ಷಿಣದ ಹಂಬಂಟೋಟಾ ಬಂದರಿಗೆ ಬಂದಿದೆ. ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಸ್ಥಳೀಯ ಕಾಲಮಾನ ಬೆಳಗ್ಗೆ 8.20ಕ್ಕೆ ಹಂಬಂಟೋಟದ ದಕ್ಷಿಣ ಬಂದರಿಗೆ ಆಗಮಿಸಿತು. ಮುಂದಿನ ಆ. 22 ರವರೆಗೆ ಅಲ್ಲಿರಲಿದ್ದು, ಭಾರತ, ಇಂಡೋನೇಷಿಯಾ, ಬಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳ ರಹಸ್ಯ ಮಾಹಿತಿ ಹ್ಯಾಕ್ ಮಾಡುವ ಸಾಧ್ಯತೆ ಇದೆ. ಆ 11 ರಂದು ಆಗಮಿಸಬೇಕಿತ್ತು ಆದರೆ […]

ಚೀನಾ ಪತ್ತೆದಾರಿ ನೌಕೆ ಭೇಟಿ ಮುಂದೂಡಲು ಲಂಕಾ ಮನವಿ

ಕೊಲಂಬೊ, ಆ.6- ಚೀನಾದ ಬಾಹ್ಯಾಕಾಶ ಉಪಗ್ರಹ ಪತ್ತೆದಾರಿ ಹಡಗು ಯುವಾನ್ ವಾಂಗ್ 5 ಬರುವುದನ್ನು ಸುಮಾರು 5 ದಿನ ಮುಂದೂಡಬೇಕು ಎಂದು ಶ್ರೀಲಂಕಾ, ಚೀನಾ ಸರ್ಕಾರವನ್ನು ಮನವಿ ಮಾಡಿದೆ. ಈಗಾಗಲೇ ಜುಲೈ 13ರಂದು ಚೀನಾದ ಜಿಯಾಂಗ್‍ನಿಂದ ಹಡಗು ಹೊರಟಿದ್ದು ಪ್ರಸ್ತುತ ತೈವಾನ್‍ನ ಸಮೀಪ ಸಂಚರಿಸುತ್ತಿದೆ. ಬರುವ ಆಗಸ್ಟ್ 11ರಂದು ಅದು ಶ್ರೀಲಂಕಾದ ಬಂದು ತಲುಪಿ ನಂತರ 17ರಂದು ಹೊರಡುವ ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು. ಇದರ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿ ಶ್ರೀಲಂಕಾ ಸರ್ಕಾರಕ್ಕೆ ತಮ್ಮ ನಿಲುವು ಪರಿಶೀಲಿಸುವಂತೆ […]

ಶ್ರೀಲಂಕಾ ಅಧ್ಯಕ್ಷರ ಕಚೇರಿ ಕಾರ್ಯಾರಂಭ

ಕೊಲಂಬೊ,ಜು.25- ತೀವ್ರ ಪ್ರತಿಭಟನೆಗಳಿಂದ ಮುಚ್ಚಲ್ಪಟ್ಟಿದ್ದ ಶ್ರೀಲಂಕಾದ ಅಧ್ಯಕ್ಷರ ಕಚೇರಿ ಸೋಮುವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ. ತೀವ್ರ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೀಡಾಗಿದ್ದ ಸಾರ್ವಜನಿಕರು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದರು. ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸೆ ಮತ್ತು ಪ್ರಧಾನಿಯಾಗಿದ್ದ ರಣೀಲ ವಿಕ್ರಮ ಸಿಂಘೆ ಅವರ ರಾಜೀನಾಮೆಗೆ ಒತ್ತಾಯಿಸಿ ಅಧ್ಯಕ್ಷರ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ಅಲ್ಲಿರುವ ಈಜುಕೊಳ ಮತ್ತು ಜಿಮ್ಗಳನ್ನು ಬಳಸಿದ್ದರು. ಜನರಿಂದ ಆಕ್ರಮಿಸಲ್ಪಟ್ಟ ಅಧ್ಯಕ್ಷರ ಕಚೇರಿಯಲ್ಲಿ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಭದ್ರತಾ ಸಿಬ್ಬಂದು ಅಸಹಾಯಕರಾಗಿದ್ದರು. ಗೋಟಬಯ ರಾಜಪಕ್ಸೆ ದೇಶ ಬಿಟ್ಟು ಪರಾರಿಯಾದರು. ನಂತರದ […]