Friday, October 4, 2024
Homeಕ್ರೀಡಾ ಸುದ್ದಿ | Sportsನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಶ್ರೀಲಂಕಾ

ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಶ್ರೀಲಂಕಾ

Sri Lanka Clean Sweep New Zealand in Test series

ಗಾಲೆ, ಸೆ. 29– ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಇನಿಂಗ್‌್ಸ ಹಾಗೂ 154 ರನ್ಗಳ ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಯಿಂದ ಕ್ಲೀನ್ ಸ್ವೀಪ್ ಸಾಧಿಸಿದೆ.

ಶ್ರೀಲಂಕಾ ತಂಡದ ಪರ ಉತ್ತಮ ಬೌಲಿಂಗ್ ಸಂಘಟನೆ ತೋರಿದ ಅನುಭವಿ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಹಾಗೂ ಪಾದಾರ್ಪಣೆ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ನಿಶಾನ ಪೆರಿಸ್ ಅವರು ತಂಡದ ಗೆಲುವಿನಲ್ಲಿ ಮಹತ್ತರ ಕಾಣಿಕೆ ನೀಡಿದರೆ, ಬ್ಯಾಟಿಂಗ್ನಲ್ಲಿ ದಿನೇಶ್ ಚಂಡಿಮಾಲ್, ಕಮಿಂದು ಮೆಂಡಿಸ್ ಹಾಗೂ ಕುಶಾಲ ಮೆಂಡಿಸ್ ಅವರು ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದರು.

1998ರ ನಂತರ ಶ್ರೀಲಂಕಾ ತಂಡವು ಇದೇ ಮೊದಲ ಬಾರಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್‌್ಸ ಗೆಲುವು ಸಾಧಿಸಿದ್ದು, ಈ ಗೆಲುವಿನ ಮೂಲಕ ಐಸಿಸಿ ಆಯೋಜನೆಯ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಂತಕ್ಕೆ ತಲುಪವ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.

ಮೊದಲ ಟೆಸ್ಟ್ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಇನಿಂಗ್‌್ಸ ಹಾಗೂ 63 ರನ್ಗಳ ಸೋಲು ಕಂಡಿರುವ ನ್ಯೂಜಿಲೆಂಡ್ , ಭಾರತಕ್ಕೆ ತೆರಳಲಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ನ್ಯೂಜಿಲೆಂಡ್ 360 ಕ್ಕೆ ಅಲೌಟ್:
ದ್ವಿತೀಯ ಇನಿಂಗ್ಸ್ ನಲ್ಲಿ 514 ರನ್ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಆರಂಭಿಕ ಆಟಗಾರ ಡೆವೋನ್ ಕಾನ್ವೆ (62 ರನ್), ಟಾಮ್ ಬಲ್ಡನ್ (60 ರನ್), ಗ್ಲೆನ್ ಫಿಲಿಪ್‌್ಸ (78ರನ್) ಹಾಗೂ ಮಿಚೆಲ್ ಸ್ನಾಂಟರ್ (67 ರನ್) ಅವರ ಅರ್ಧಶತಕಗಳ ನೆರವಿನಿಂದ 81.4 ಓವರ್ಗಳಲ್ಲಿ 360 ರನ್ಗಳಿಗೆ ಸರ್ವಪತನವಾಗುವ ಮೂಲಕ ಇನ್ನಿಂಗ್‌್ಸ ಹಾಗೂ 154 ರನ್ಗಳ ಸೋಲು ಕಂಡರು. ಮೊದಲ ಇನಿಂಗ್‌್ಸನಲ್ಲಿ 182′ ರನ್ ಗಳಿಸಿದ ಕಮಿಂದು ಮೆಂಡಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಕೊಹ್ಲಿ ದಾಖಲೆ ಮುರಿದ ವಿಲಿಯಮ್ಸನ್
ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ದ್ವಿತೀಯ ಟೆಸ್ಟ್ನ ಎರಡನೇ ಇನಿಂಗ್‌್ಸನಲ್ಲಿ 4 ಬೌಂಡರಿ ಸಹಿತ 46 ರನ್ ಸಿಡಿಸಿದ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು ವಿರಾಟ್ಕೊಹ್ಲಿ ಅವರ ಟೆಸ್ಟ್ ದಾಖಲೆ ಮುರಿದಿದ್ದಾರೆ.

ಕೇನ್ 180 ಇನಿಂಗ್ಸ್ ನಿಂದ 8881 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 193 ಇನಿಂಗ್‌್ಸನಿಂದ 8871 ರನ್ ಬಾರಿಸಿದ್ದಾರೆ. ಜೋ ರೂಟ್ (12,402 ರನ್, 267 ಇನಿಂಗ್‌್ಸ), ಸ್ಟೀವ್ ಸಿತ್ (9685 ರನ್, 195 ಇನ್ಸಿಂಗ್) ಫ್ಯಾಬ್ 4ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

RELATED ARTICLES

Latest News