Friday, October 4, 2024
Homeಮನರಂಜನೆಶಾರೂಖ್ ಖಾನ್‌ಗೆ ಐಫಾ ಪ್ರಶಸ್ತಿ

ಶಾರೂಖ್ ಖಾನ್‌ಗೆ ಐಫಾ ಪ್ರಶಸ್ತಿ

Shah Rukh Khan wins best actor award at IIFA 2024

ದುಬೈ, ಸೆ. 29– ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಬಾದ್ಶಾ ಶಾರೂಖ್ಖಾನ್ ಉತ್ತಮ ನಟ ಹಾಗೂ ರಾಣಿಮುಖರ್ಜಿ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೇಶ ಪ್ರೇಮ ಬಿಂಬಿಸುವ ಜವಾನ್ ಚಿತ್ರದಲ್ಲಿ ತಂದೆ ಹಾಗೂ ಮಗನ ಪಾತ್ರದಲ್ಲಿ ಗಮನ ಸೆಳೆದಿದ್ದ ಕಿಂಗ್ಖಾನ್ಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಮಿಸ್ಟರ್ಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾದ ಅದ್ಭುತ ನಟನೆಗಾಗಿ ರಾಣಿಮುಖರ್ಜಿಗೆ ಪ್ರಶಸ್ತಿ ಒಲಿದು ಬಂದಿದೆ.

ಅನಿಮಲ್ ಚಿತ್ರದಲ್ಲಿನ ನಕಾರಾತಕ ನಟನೆಗಾಗಿ ನಟ ಬಾಬಿಡಿಯೋಲ್ಗೆ ಉತ್ತಮ ಖಳನಟ ಪ್ರಶಸ್ತಿ, ಇದೇ ಚಿತ್ರಕ್ಕಾಗಿ ಅನಿಲ್ಕಪೂರ್ಗೆ ಉತ್ತಮ ಪೋಷಕ ನಟ ಪ್ರಶಸ್ತಿ ಒಲಿದುಬಂದಿದೆ.ರಾಖಿ ರಾಣಿ ಚಿತ್ರದ ಅಭಿನಯಕ್ಕಾಗಿ ಶಬಾನಾ ಅಜಿಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿ ವಿವರ:

  • ಶಿಲ್ಪಾ ರಾವ್- ಹಿನ್ನೆಲೆ ಗಾಯಕಿ- ಚಲಿಯಾ,
  • ಭುಪೇಂದ್ರ ಬಬಲ್- ಹಿನ್ನೆಲೆ ಗಾಯಕ- ಅನಿಮಲ್
    *ಉತ್ತಮ ಸಂಗೀತ- ಅನಿಮಲ್
    *ಉತ್ತಮ ಸಾಹಿತ್ಯ- ಸಿದ್ಧಾರ್ಥ್, ಗರಿಮಾ, ಸತ್ರಂಗ- ಅನಿಮಲ್
  • ಕರಣ್ ಜೋಹರ್- ಜೀವಮಾನ ಶ್ರೇಷ್ಠ ಪ್ರಶಸ್ತಿ
  • ಅಲ್ಜಿಯಾ ಅಗ್ನಿಹೋತ್ರಿ- ಉದಯೋನುಖ ನಟಿ- ಫೆರ್ರಿ
  • ಉತ್ತಮ ಕಥೆ- 12ಥೆತ್ ಫೇಲ್
  • ಉತ್ತಮ ನಿರ್ದೇಶಕ- ವಿದು ವಿನೋದ್ ಚೋಪ್ರಾ- 12 ಥೆತ್ ಫೇಲ್
  • ಉತ್ತಮ ಕಥೆ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
RELATED ARTICLES

Latest News