Monday, October 14, 2024
Homeಅಂತಾರಾಷ್ಟ್ರೀಯ | Internationalಶ್ರೀಲಂಕಾ ನೂತನ ಅಧ್ಯಕ್ಷರಾಗಿ ನೂರಾ ಕುಮಾರ್‌ ದಿಸಾನಾಯಕೆ ಪ್ರಮಾಣ

ಶ್ರೀಲಂಕಾ ನೂತನ ಅಧ್ಯಕ್ಷರಾಗಿ ನೂರಾ ಕುಮಾರ್‌ ದಿಸಾನಾಯಕೆ ಪ್ರಮಾಣ

Anura Kumara Dissanayake takes oath as Sri Lanka’s next president

ಕೊಲಂಬೊ, ಸೆ 23-ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಇಂದು ಪ್ರಮಾಣ ವಚನ ಸ್ವೀಕರಿಸಿದರು.ಇಲ್ಲಿನ ರಾಷ್ಟ್ರಪತಿಗಳ ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.ಅದ್ಬುತ ಗೆಲುವಿನ ಪಲಿತಾಂಶ ಘೋಷಣೆ ಮರುದಿನವೇ ದೇಶದ ಅಧೕಕಾರ ಚುಕ್ಕಾಣಿ ಹಿಡಿದಿದ್ದಾರೆ.

ದೇಶದ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕುತ್ತಾರೆ ಎಂಬ ಭರವಸೆಯನ್ನು ಈಡೇರಿಸುವ ಜವಾಬ್ದಾರಿ ಅವರ ಮೇಲಿದೆ. ಇದಕೂ ಮುನ್ನವೇ ಶ್ರೀಲಂಕಾದ ಪ್ರಧಾನಿ ದಿನೇಶ್‌ ಗುಣವರ್ಧನೆ ಇಂದು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಜುಲೈ 2022 ರಿಂದ ಅವರು ಪ್ರಧಾನಿಯಾಗಿದ್ದ ಅವರು ಪ್ರಸ್ತುತ ಡಿಸಾನಾಯಕೆ ಅವರಿಗೆ ಬರೆದಿರುವ ಪತ್ರದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಹೊಸ ಸಚಿವ ಸಂಪುಟವನ್ನು ನೇಮಿಸುವ ಪ್ರಕ್ರಿಯೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಪೀಪಲ್‌್ಸಪವರ್‌ (ಎನ್‌ಪಿಪಿ)ನ ನಾಯಕ 56 ವರ್ಷದ ಡಿಸ್ಸಾನಾಯಕೆ ಅವರು ತಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗ ಪಕ್ಷದ ಸಜಿತ್‌ ಪ್ರೇಮದಾಸ ಅವರನ್ನು ಸೋಲಿಸಿದರು.

RELATED ARTICLES

Latest News