Saturday, July 20, 2024
Homeಕ್ರೀಡಾ ಸುದ್ದಿಗೆಲುವಿನೊಂದಿಗೆ ಟಿ-20 ವಿಶ್ವಕಪ್‌ನಿಂದ ಶ್ರೀಲಂಕಾ ನಿರ್ಗಮನ

ಗೆಲುವಿನೊಂದಿಗೆ ಟಿ-20 ವಿಶ್ವಕಪ್‌ನಿಂದ ಶ್ರೀಲಂಕಾ ನಿರ್ಗಮನ

ಗ್ರೋಸ್‌‍ ಐಲೆಟ್‌ (ಸೇಂಟ್‌ ಲೂಸಿಯಾ), ಜೂನ್‌ 17 –ಇಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿ ಪಂದ್ಯಾವಳಿಯಿಂದ ಸಂತೋಷದಿಂದ ನಿರ್ಗಮಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 6 ವಿಕೆಟ್‌ಗೆ 201 ರನ್‌ ಗಳಿಸಿತ್ತು,ಆರಂಭದಲ್ಲಿ ಎಡವಿದರೂ ಕುಸಾಲ್‌ ಮೆಂಡಿಸ್‌‍ ಮತ್ತು ಚರಿತ್‌ ಅಸಲಂಕಾ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿ ಸವಾಲಿನ ಮೊತ್ತ ಕಲೆ ಹಾಕಲು ನೆರವಾದರು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ಆರಂಭ ಚನ್ನಾಗಿತ್ತು ಆದರೆ ಪವರ್‌ ಪ್ಲೇ ನಂತರ ಹಳಿ ತಪ್ಪಿದರು ಲಂಕಾದ ಸ್ಪಿನ್‌ ಹಾಗು ವೇಗದ ತತ್ತರಿಸಿ ಒಬ್ಬರ ನಂತರ ಒಬ್ಬರು ಪೆವೀಲಿನ್‌ ಹಾದಿ ಹಿಡಿದರು.16.4 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್‌ ಆದರು.

ಅಂತಮವಾಗಿ ಶ್ರೀಲಂಕಾ 83 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸಂಭ್ರಮಿಸಿದರು ಡಿ ಗುಂಪಿನಲ್ಲಿ 3 ನೇ ಸ್ಥಾನಕ್ಕೆ ಏರಿದರೂ ಸೂಪರ್‌ 8 ತಲುಪಲು ವಿಫಲರಾದರು.

ಸಂಕ್ಷಿಪ್ತ ಅಂಕಗಳು:
ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201 (ಕುಸಲ್‌ ಮೆಂಡಿಸ್‌‍ 46, ಚರಿತ್‌ ಅಸಲಂಕಾ 46; ಲೋಗನ್‌ ವ್ಯಾನ್‌ ಬೀಕ್‌ 2/45)
ನೆದರ್ಲೆಂಡ್ಸ್‌‍ 16.4 ಓವರ್‌ಗಳಲ್ಲಿ 118 ಆಲೌಟ್‌ (ಮೈಕಲ್‌ ಲೆವಿಟ್‌ 31, ಸ್ಕಾಟ್‌ ಎಡ್ವರ್ಡ್‌್ಸ 31; ನುವಾನ್‌ ತುಷಾರ 3/24

RELATED ARTICLES

Latest News