Sunday, November 24, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-09-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-09-2024)

Horoscope

ನಿತ್ಯ ನೀತಿ : ಎಲ್ಲರೂ ಜಗತ್ತು ಬದಲಾಗಿದೆ ಎನ್ನುತ್ತಾರೆ.ಆದರೆ, ಮೆಣಸಿನ ಖಾರ ಬದಲಾಗಿಲ್ಲ, ಮಾವಿನ ಹಣ್ಣಿನ ಸಿಹಿ ಬದಲಾಗಿಲ್ಲ. ಎಲೆಗಳ ಬಣ್ಣ ಬದಲಾಗಿಲ್ಲ,ಬದಲಾಗಿದ್ದು ಮನುಷ್ಯನ ಮಾನವೀಯತೆ…

ಪಂಚಾಂಗ : ಬುಧವಾರ, 25-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆರಿದ್ರಾ / ಯೋಗ: ವರೀಯಾನ್ / ಕರಣ: ತೈತಿಲ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.14
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಮನೆಯಲ್ಲಿ ಮಂಗಳಕರ ಕಾರ್ಯ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.
ವೃಷಭ: ಮಿತ್ರರಿಂದ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಕೇಳಬೇಕಾಗಬಹುದು.
ಮಿಥುನ: ಮನೆಗೆ ಹೊಸ ಅತಿಥಿಯೊಬ್ಬರ ಸೇರ್ಪಡೆಯಾಗುವುದರಿಂದ ಸಂತೋಷವಾಗುತ್ತದೆ.

ಕಟಕ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ಸಿಂಹ: ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿ ಯಿಂದ ಸಹಾಯ ಸಿಗಲಿದೆ.
ಕನ್ಯಾ: ಹಳೆ ಮಿತ್ರರನ್ನು ಭೇಟಿ ಮಾಡುವಿರಿ. ಅತಿಯಾದ ಆತ್ಮವಿಶ್ವಾಸ ಬೇಡ.

ತುಲಾ: ನಿಮ್ಮ ನಡವಳಿಕೆ ಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ವೃಶ್ಚಿಕ: ದುರಭ್ಯಾಸದಿಂದ ದೂರ ಉಳಿಯುವ ನಿಮ್ಮ ನಿರ್ಧಾರ ಪ್ರಯೋಜನಕಾರಿಯಾಗಲಿದೆ.
ಧನುಸ್ಸು: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಸ್ನೇಹಿತರ ಬೆಂಬಲ ಸಿಗಲಿದೆ.

ಮಕರ: ಹಿತಶತ್ರುಗಳ ಒಳಸಂಚು ನಿಮ್ಮ ಗಮನಕ್ಕೆ ಬರಲಿದ್ದು, ಧೈರ್ಯದಿಂದ ಎದುರಿಸಿ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿವೆ.
ಮೀನ: ಸಂದರ್ಭಕ್ಕನುಸಾರವಾಗಿ ವರ್ತಿಸುವುದರಿಂದ ಒಳಿತಾಗಲಿದೆ.

RELATED ARTICLES

Latest News