Sunday, September 29, 2024
Homeರಾಜ್ಯಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯನಾ.?: ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯನಾ.?: ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ವಿಜಯಪುರ ; ಸನ್ಮಾನ್ಯ ಸಿದ್ದರಾಮಣ್ಣ ನವರೇ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ತನಿಖೆಗೆ ಹೋಗಬೇಕು, ರಾಜೀನಾಮೆ ಕೊಡಬೇಕೆಂದು ಆಗ್ರಹ ಮಾಡಿದ್ರಿ, ಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯನಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು :ಮೂಡಾ ಹಗರಣದಲ್ಲಿ ಸ್ವತಃ ಈ ರಾಜ್ಯದ ಸಿಎಂ ಭಾಗಿ ಆಗಿದ್ದಾರೆ. ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಇವತ್ತು ಏನು ಮಾಡಿದ್ದಾರೆ ಗೊತ್ತಿದೆ. ಸಿದ್ದರಾಮಣ್ಣನವರು ಹಿರಿಯರಿದ್ದಾರೆ. ಅನುಭವಿಗಳಿದ್ದಾರೆವಕೀಲರಿದ್ದಾರೆ. ಯಡ್ಡಿಯೂರಪ್ಪ ಸಾಹೇಬ್ರ ಮೇಲೆ ಆರೋಪ ಬಂದಾಗ ನೀವು ಆರೋಪ ಮುಕ್ತವಾಗಿ ಬರುವವರೆಗೂ ರಾಜಿನಾಮೆ ಕೊಡಿ ಅಂತಾ ಹೇಳಿದ್ರು..

ರಾಜಿನಾಮೆ ಕೊಟ್ಟು ತನಿಖೆಗೆ ಸಹಕರಿಸಿ : ಆದರೆ ಇವತ್ತು ಅವರಿಗೆ ಒಂದು ನ್ಯಾಯ. ಇವರಿಗೊಂದು ನ್ಯಾಯ ಅಂತಾ ಹೇಳುತ್ತಿರುವುದು ಸರಿಯಲ್ಲ ಸಾರ್ವಜನಿಕ ಬದುಕಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಅವರು ಬಂದಿದ್ದಾರೆ… ತನಿಖೆ ಪಾರದರ್ಶಕವಾಗಿ ನಡೆಯಬೇಕು ಅಂದ್ರೆ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಅವರು ಆಗ್ರಹಿಸಿದರು.

ನಾವು ಪಾದಯಾತ್ರೆ ಮಾಡಿದ್ದು ಯಾವುದೋ ಒಂದು ವ್ಯಕ್ತಿಯ ಮೇಲಿನ ದ್ವೇಷದಿಂದ ಅಲ್ಲ.. ರಾಜ್ಯದ ಸಂಪತ್ತು ಲೂಟಿ ಆದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಲಾಗಿತ್ತು… ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಈ ವಿಚಾರವಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ರಾಜ್ಯದ ಜನತೆ ಪ್ರಶ್ನೆಗೆ ಉತ್ತರ ಕೊಡಿ : ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು. ಕುಮಾರಸ್ವಾಮಿ ಮೊದಲು ರಾಜಿನಾಮೆ ಕೊಡಲಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು ; ಇದೆಲ್ಲ ಹಳೆ ಕಥೆ ಬಿಟ್ಟು ಇದೇನು ಹೊಸದೇನಲ್ಲ… ಮೈನಿಂಗ್ ದು ಹಳೆ ಕಥೆ.. ಇದನ್ನ ತಿರುಚೋದು ಬೇಡ… ರಾಜ್ಯದ ಜನತೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರಿಸಲಿ ಅಷ್ಟೇ. ಹೀಗಾಗಿ ರಾಜ್ಯದ ಜನತೆ ಕೇಳುವ ಪ್ರಶ್ನೆಗೆ ಮೊದಲು ಅವರು ಉತ್ತರಿಸಲಿ ಎಂದ ಕಿಡಿಕಾರಿದರು.

ನಮ್ಮ ಮೇಲೆ ಸುಳ್ಳು ದಾಖಲೆ ಹುಡುಕುವುದರಲ್ಲಿ ಕಾಂಗ್ರೆಸ್ ಸಮಯ ಕಳೆಯುತ್ತಿದ್ದಾರೆ.ಜನ 136 ಶಾಸಕರನ್ನ ಗೆಲ್ಲಿಸಿ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಾರೆ. ಪಾದಯಾತ್ರೆ ಯಶಸ್ಸು ಇವರಿಗೆ ಸಹಿಸಲಾಗುತ್ತಿಲ್ಲ.ಆಡಳಿತ ಪಕ್ಷ ವಿರೋಧ ಪಕ್ಷಕ್ಕೆ ಪ್ರಶ್ನೆ ಕೇಳುವಂತ ಸನ್ನಿವೇಶ ಈ ರಾಜ್ಯ ದ ಇತಿಹಾಸದಲ್ಲಿ ಮೊದಲು ಎಂದು ಕಿಡಿಕಾರಿದರು.

ದೇವೇಗೌಡರ ಕೊಡುಗೆ ಅಪಾರ ; ದೇವೇಗೌಡರು ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯಕ್ಕೆ ಸಾವಿರ ಕೋಟಿ ಅನುದಾನ ಕೊಟ್ಟಿರುವುದು ಇವತ್ತಿಗೂ ಮರೆಯುವುದಕ್ಕೆ ಆಗಲ್ಲ, ಈ ಭಾಗದ ಜನತೆಯ ಹೃದಯದಲ್ಲಿ ದಟ್ಟವಾಗಿ ನಿಂತಿದೆ ಎಂದರು.ಇವೆಲ್ಲವನ್ನು ನೋಡಿದಾಗ ಇಲ್ಲಿರುವ 8 ವಿಧಾನಸಭಾ ಕ್ಷೇತ್ರ ಗಳಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾದಳ ಪಕ್ಷ ಅತ್ಯಂತ ಪ್ರಭಾವ ಶಾಲಿಯಾಗಿ ಮುಂಬರುವ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಕ್ಷೇತ್ರಗಳನ್ನು ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾನೂನುನಿಗಿಂತ ದೊಡ್ಡವರು ಇಲ್ಲ : ಜಮೀರ್ ಅಹಮದ್ ಬಳ್ಳಾರಿ ಉಸ್ತುವಾರಿ ಎನ್ನುವ ಕಾರಣಕ್ಕೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರಕ್ಕೆ ಮಾತನಾಡಿದ ಅವರು ; ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಎಷ್ಟೇ ಬಲಿಷ್ಠ, ಪ್ರಭಾವಿಗಳಿದ್ದರು ಈ ನೆಲದ ಕಾನೂನಿಗೆ ತಲೆಬಾಗಬೇಕು. ಅಂತಿಮವಾಗಿ ಕಾನೂನು ಇದೆ.ಕೋರ್ಟ್ ಇದೆ ಸೂಕ್ತ ಕ್ರಮ ಕೈಗೊಳ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

RELATED ARTICLES

Latest News