Monday, November 25, 2024
Homeಅಂತಾರಾಷ್ಟ್ರೀಯ | Internationalಹಿಜ್ಬಲ್ಲಾ ನಿರ್ನಾಮಕ್ಕೆ ಇಸ್ರೇಲ್‌ ಪಣ, ನಿರಂತರ ವೈಮಾನಿಕ ದಾಳಿ

ಹಿಜ್ಬಲ್ಲಾ ನಿರ್ನಾಮಕ್ಕೆ ಇಸ್ರೇಲ್‌ ಪಣ, ನಿರಂತರ ವೈಮಾನಿಕ ದಾಳಿ

Israel launches massive Airstrike on Beirut in apparent bid to kill Hezbollah leader

ಬೈರುತ್‌, ಸೆ.28– ಹಿಜ್ಬುಲ್ಲಾಗಳನ್ನು ಸರ್ವನಾಶ ಮಾಡುವವರೆಗೆ ವಿಶ್ರಮಿಸುವುದಿಲ್ಲ ಎಂದು ಇಸ್ರೇಲ್‌ ಪ್ರತಿಜ್ಞೆ ಮಾಡಿದೆ.ದಿನನಿತ್ಯ ಹಿಜ್ಬುಲ್ಲಾಗೆ ಭದ್ರಕೋಟೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಲೆ ಇರುವ ಇಸ್ರೇಲಿ ಪಡೆಗಳು ಲೆಬನಾನ್‌ ರಾಜಧಾನಿಯ ಹದಯಭಾಗವಾದ ಬೈರುತ್‌ ಮೇಲೆ ನೆನ್ನೆ ರಾತ್ರಿಯಿಂದ ಮತ್ತೆ ದಾಳಿ ಶುರು ಮಾಡಿದೆ.

ಈ ದಾಳಿಯಿಂದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಭಯ ವಾತವರಣ ಸಷ್ಟಿಯಾಗಿದೆ. ಇದೀಗ ಇಸ್ರೇಲ್‌ ಪಡೆಗಳು ಗಾಜಾದಿಂದ ಲೆಬನಾನ್‌‍ನತ್ತ ಮುಖ ಮಾಡಿದೆ ಎಂದು ಹೇಳಲಾಗಿದೆ. ಬೈರುತ್‌ ಮೇಲಿನ ಈ ದಾಳಿಯಿಂದ ಇಡಿ ನಗರ ಹೋಗೆಯಿಂದ ತುಂಬಿಹೋಗಿದೆ.

ಇಸ್ರೇಲ್‌ ತೀವ್ರವಾದ ದಾಳಿಯನ್ನು ನಡೆಸಿದೆ. ಈ ದಾಳಿಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್‌ ಹಿಜ್ಬುಲ್ಲಾ ಉಗ್ರರ ಭದ್ರಕೋಟೆಯಾಗಿದೆ ಅದನ್ನು ನಾಶ ಮಾಡುವವರೆಗೆ ನಮ ಈ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್‌ ಹೇಳಿದೆ.

ಇನ್ನು ಇಸ್ರೇಲ್‌ ಪ್ರಮುಖ ಗುರಿ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾಹ್‌ ಎಂದು ಹೇಳಲಾಗಿದೆ. ಆದರೆ ಈ ದಾಳಿಯಿಂದ ತಪ್ಪಿಸಿಕೊಳ್ಳಲು ಹಸನ್‌ ನಸ್ರಲ್ಲಾಹ್‌ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು ದಕ್ಷಿಣ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್‌ ಮುಹಮದ್‌ ಅಲಿ ಇಸಾಯಿಲ್‌ ಇರಾನ್‌ ಬೆಂಬಲಿತ ಸೇನಾಪಡೆಯ ಇತರ ಹಿರಿಯ ಅಧಿಕಾರಿಗಳ ಮೇಲೆ ದಾಳಿ ಮಾಡಿ ಅವರ ಹತ್ಯೆಗೆ ಕಾರಣವಾಗಿದೆ.

ಇಸ್ರೇಲ್‌ ಇಂದು ದಕ್ಷಿಣ ಬೈರುತ್‌ನಲ್ಲಿನ ಕಟ್ಟಡಗಳಲ್ಲಿ ಸಂಗ್ರಹವಾಗಿರುವ ಶಸಾ್ತ್ರಸ್ತ್ರ ಡಿಪೋಗಳ ಮೇಲೆ ದಾಳಿಯನ್ನು ಮಾಡಿ ನೆಲಸಮಗೊಳಿಸಿದೆ. ಇದರಿಂದ ಆರು ಕಟ್ಟಡಗಳನ್ನು ನೆಲಸಮವಾಗಿದೆ. ಹಾಗೂ 91 ಜನರು ಗಾಯಗೊಂಡಿದ್ದಾರೆ ಮತ್ತು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಿಜ್ಬಲ್ಲಾ ಉಗ್ರರರು ಕೂಡ ಪ್ರತಿದಾಳಿಯನ್ನು ನಡೆಸಿದ್ದಾರೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉತ್ತರದ ಗಡಿಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ಇಸ್ರೇಲ್‌ ಹಿಜ್ಬಲ್ಲಾ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಇಸ್ರೇಲ್‌ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಉಗ್ರಿಗೆ ಯಾವುದೇ ವಿರಾಮ ನೀಡುವುದಿಲ್ಲ. ಈ ಮೂಲಕ ದಾಳಿಯ ಬಗ್ಗೆ ಸೂಚನೆಯನ್ನು ನೀಡಿದ್ದರು.

RELATED ARTICLES

Latest News