Friday, November 22, 2024
Homeಅಂತಾರಾಷ್ಟ್ರೀಯ | Internationalಮುಸ್ಲಿಂ ರಾಷ್ಟ್ರ ಪಾಕ್‍ನಲ್ಲಿ ಶೇ.82 ರಷ್ಟು ಮಹಿಳೆಯರ ಮೇಲೆ ಮನೆಯವರಿದಲೇ ಅತ್ಯಾಚಾರ..!

ಮುಸ್ಲಿಂ ರಾಷ್ಟ್ರ ಪಾಕ್‍ನಲ್ಲಿ ಶೇ.82 ರಷ್ಟು ಮಹಿಳೆಯರ ಮೇಲೆ ಮನೆಯವರಿದಲೇ ಅತ್ಯಾಚಾರ..!

More than 82% of rapists are fathers or brothers of victims in Pakistan: Lawmaker

ಇಸ್ಲಮಾಬಾದ್‌,ಸೆ.28-ಪಾಕಿಸ್ತಾನದಲ್ಲಿ ಶೇ.82 ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಪಾಕ್‌ ಸಂಸದೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂಸದೆ ಷಂಡನಾ ಗುಲ್ಜಾರ್‌ ಖಾನ್‌ ಅವರು, ಪಾಕ್‌ ಗಂಡಸರು ಒಂದು ಹೆಣ್ಣನ್ನು ಅದರಲ್ಲೂ ತಮ್ಮ ಸಹೋದರಿಗೆ, ತಾಯಿಯನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬ ಸತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪಾಕಿಸ್ತಾನದಲ್ಲಿ 82% ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲ್ಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅತ್ಯಾಚಾರ ಆಗಿರುವ ಮಹಿಳೆಯರೇ ಹೇಳಿದ್ದಾರೆ. ಅವರ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪ ಇವರಿಂದಲೇ ನಾವು ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ಹೇಳಿದ್ದಾರೆ. ವಾರ್‌ ಆನ್‌ ರೇಪ್‌ ಸಂಸ್ಥೆಯ ವರದಿಯನ್ನು ಸಂಸದೆ ಜನರ ಮುಂದೆ ಇಟ್ಟಿದ್ದಾರೆ.

ಹೆಚ್ಚಿನ ಹುಡುಗಿಯರ ಮೇಲೆ ಅವರ ಮನೆಯ ಸದಸ್ಯರೇ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಈ ದಾಖಲೆಯನ್ನು ನೀಡಿರುವ ಗುಲ್ಜಾರ್‌ ಒಬ್ಬ ರಾಜಕಾರಣಿಯಾಗಿದ್ದು, ಸಂಸದೆ ಕೂಡ ಹೌದು, ಆಗಸ್ಟ್‌ 2018 ರಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಒಬ್ಬ ಸಂಸದೆಯೇ ದಾಖಲೆ ಸಹಿತ ಸಾಕ್ಷಿಯನ್ನು ನೀಡಿರುವ ಕಾರಣ ಪಾಕ್‌‍ನಲ್ಲಿ ಈ ಬಗ್ಗೆ ತಲ್ಲಣ ಸಷ್ಟಿಯಾಗಿದೆ.

ಇನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಗರ್ಭಿಣಿಯಾಗುತ್ತಾರೆ. ಅವರು ಯಾವ ಕಾರಣಕ್ಕೂ ಪೊಲೀಸರಿಗೆ ಈ ಬಗ್ಗೆ ದೂರು ನೀಡುವುದಿಲ್ಲ. ಬದಲಿಗೆ ಗರ್ಭಪಾತ ಮಾಡಿಕೊಳ್ಳಲು ಸ್ತ್ರೀರೋಗತಜ್ಞರ ಬಳಿ ಹೋಗುತ್ತಾರೆ. ಮಗಳ ಮೇಲೆ ತನ್ನ ಗಂಡ ಅತ್ಯಾಚಾರ ಮಾಡಿದ್ರು ಆಕೆ ತನ್ನ ಗಂಡನನ್ನು ಬಿಡುವುದಿಲ್ಲ.

ಈ ಕಾರಣಕ್ಕೆ ತಾಯಿ ತನ್ನ ಮಗಳ ಮೇಲೆ ಅತ್ಯಾಚಾರ ಅದರೂ ಅದನ್ನು ಪ್ರತಿಭಟಿಸುವುದಿಲ್ಲ, ಪೊಲೀಸರಿಗೆ ದೂರು ನೀಡುವುದಿಲ್ಲ. ಈ ಬಗ್ಗೆ ಪಾಕಿಸ್ತಾನದಲ್ಲಿ ಯಾರೊಬ್ಬರು ಮಾತನಾಡುವುದಿಲ್ಲ, ಅದಕ್ಕಾಗಿ ಪ್ರತಿಭಟಿಸಲು ಯಾರು ಮುಂದೆ ಬರುವುದಿಲ್ಲ. ಯಾಕೆಂದರೆ ಜೀವ ಭಯ ಎಂದು ಸಂಸದೆ ಹೇಳಿದ್ದಾರೆ.

RELATED ARTICLES

Latest News