Sunday, October 6, 2024
Homeರಾಷ್ಟ್ರೀಯ | Nationalನಾಲ್ವರು ಹೆಣ್ಣು ಮಕ್ಕಳೊಂದಿಗೆ ಆತಹತ್ಯೆಗೆ ಶರಣಾದ ಕಾರ್ಪೆಂಟರ್‌

ನಾಲ್ವರು ಹೆಣ್ಣು ಮಕ್ಕಳೊಂದಿಗೆ ಆತಹತ್ಯೆಗೆ ಶರಣಾದ ಕಾರ್ಪೆಂಟರ್‌

Delhi Horror: Father commits suicide after killing 4 daughters in Vasant Kunj

ನವದೆಹಲಿ,ಸೆ.28– ಓರ್ವ ವ್ಯಕ್ತಿ ಮತ್ತು ಆತನ ನಾಲ್ವರು ಪುತ್ರಿಯರು ದೆಹಲಿಯ ತಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ತಂದೆಯೇ ಮೊದಲು ಮಕ್ಕಳನ್ನು ಕೊಂದು ನಂತರ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಮನೆ ಮಾಲೀಕ ಮಾಹಿತಿ ನೀಡಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ. ಅವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಮತ್ತು ರಂಗಪುರಿಯಲ್ಲಿರುವ ಅವರ ಮನೆಯಲ್ಲಿ ಮೂರು ಪ್ಯಾಕೆಟ್‌ ವಿಷ, ಐದು ಗ್ಲಾಸ್‌‍ ಮತ್ತು ಅನುಮಾನಾಸ್ಪದ ದ್ರವವನ್ನು ಹೊಂದಿರುವ ಚಮಚ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಣ್ಣು ಮಕ್ಕಳ ಹೊಟ್ಟೆ ಮತ್ತು ಕುತ್ತಿಗೆಗೆ ಕೆಂಪು ದಾರವನ್ನು ಕಟ್ಟಲಾಗಿತ್ತು ಎಂದು ತಿಳಿದುಬಂದಿದೆ.

ಮೃತಪಟ್ಟವರನ್ನು ಕಾರ್ಪೆಂಟರ್‌ ಆಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್‌ ಶರ್ಮಾ (46) ಮತ್ತು ಅವರ ಪುತ್ರಿಯರಾದ ನೀತು, ನಿಕ್ಕಿ, ನೀರು, ಮತ್ತು ನಿಧಿ ಎಂದು ಗುರುತಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳು ವಿಕಲಚೇತನರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು ಮತ್ತು ಅಗ್ನಿಶಾಮಕ ದಳದ ತಂಡದ ಸಹಾಯದಿಂದ ಪೊಲೀಸರು ತೆರೆಯಲು ಸಾಧ್ಯವಾಯಿತು. ಫ್ಲಾಟ್‌ನಲ್ಲಿ ಎರಡು ಕೊಠಡಿಗಳಿವೆ. ಮೊದಲ ಕೊಠಡಿಯಲ್ಲಿಯೇ ಒಬ್ಬ ಪುರುಷ ಶವವಾಗಿ ಬಿದ್ದಿರುವುದು ಕಂಡುಬಂದರೆ ನಾಲ್ಕು ಹೆಣ್ಣುಗಳು ಶವವಾಗಿ ಪತ್ತೆಯಾಗಿವೆ.

ನೆರೆಹೊರೆಯವರು ಮತ್ತು ಹತ್ತಿರದ ಸಂಬಂಧಿಕರೊಂದಿಗೆ ವಿಚಾರಣೆ ನಡೆಸಿದಾಗ ಸಂತ್ರಸ್ತೆಯ ಪತ್ನಿ ಸುಮಾರು ಒಂದು ವರ್ಷದ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News