Sunday, October 6, 2024
Homeರಾಜಕೀಯ | Politics"ಸಾರ್ವಕರ್‌ ಮಾಂಸ ತಿನ್ನುತ್ತಿದ್ದರು" : ವಿವಾದ ಸೃಷ್ಟಿಸಿದ ಸಚಿವ ಗುಂಡೂರಾವ್‌ ಹೇಳಿಕೆ

“ಸಾರ್ವಕರ್‌ ಮಾಂಸ ತಿನ್ನುತ್ತಿದ್ದರು” : ವಿವಾದ ಸೃಷ್ಟಿಸಿದ ಸಚಿವ ಗುಂಡೂರಾವ್‌ ಹೇಳಿಕೆ

'Savarkar Was A Brahmin Non-Veg Eater, Wasn't Against Cow Slaughter': Karnataka Health Minister Dinesh Gundu

ಬೆಂಗಳೂರು,ಅ.3-ಆರ್‌ಎಸ್‌‍ಎಸ್‌‍ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಹಾಗೂ ಪ್ರಬಲ ಹಿಂದೂ ಧರ್ಮ ಪ್ರತಿಪಾದಕರಾಗಿದ್ದ ವೀರ್‌ ಸಾರ್ವಕರ್‌ ಕೂಡ ಮಾಂಸ ಸೇವನೆ ಮಾಡುತ್ತಿದ್ದರೆಂಬ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ತಕ್ಷಣವೇ ದಿನೇಶ್‌ ಗುಂಡೂರಾವ್‌ ತಮ ಹೇಳಿಕೆಗೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಬಲಪಂಥೀಯ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆಗಿರುವ ದಿನೇಶ್‌ ಗುಂಡೂರಾವ್‌, ವೀರ್‌ ಸಾರ್ವಕರ್‌ ಬ್ರಾಹಣ ಸಮುದಾಯದವರು ಅವರು ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಈ ಮೂಲಕ ಅವರೊಬ್ಬ ಮಾರ್ಡನಿಸ್ಟ್‌ ಆಗಿದ್ದರು ಎಂಬ ವಿವಾದಾತಕ ಹೇಳಿಕೆ ಕೊಟ್ಟಿದ್ದರು.ವೀರ್‌ ಸಾರ್ವಕರ್‌ ಮೂಲಭೂತವಾದಿ ಆಗಿದ್ದರು. ವಿಶೇಷವೆಂದರೆ ಮೂಲಭೂತವಾದ ನಮ ದೇಶದ ಸಂಸ್ಕೃತಿಯಲ್ಲ. ವೀರ್‌ ಸಾರ್ವಕರ್‌ ಯುರೋಪ್‌ನಿಂದ ಪ್ರಭಾವಿತರಾಗಿದ್ದರೆಂದು ಹೇಳಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸಸ್ಯಹಾರಿ ಆಗಿದ್ದರು. ನಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು. ದೇಶದಲ್ಲಿಂದು ದೊಡ್ಡ ಸಂಪ್ರದಾಯವಾದಿಗಳಿದ್ದಾರೆ. ಆದರೆ ಸಂಪ್ರದಾಯವಾದಿಗಳಲ್ಲ, ಮೂಲಭೂತವಾದಿಗಳೂ ಅಲ್ಲ. ಇದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ವೀರ್‌ ಸಾರ್ವಕರ್‌ ಹಾಗೂ ಗಾಂಧಿ ಬಗ್ಗೆ ತುಲನೆ ಮಾಡಿದ್ದರು.

ಸಚಿವ ಈ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿದೆ. ಹಿಂದೂ ಧರ್ಮದ ಐಕಾನ್‌ನಂತಿರುವ ವೀರ್‌ ಸಾರ್ವಕರ್‌ ಬಗ್ಗೆ ಲಘುವಾಗಿ ಮಾತನಾಡಿರುವ ದಿನೇಶ್‌ ಗುಂಡೂರಾವ್‌ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಗುಂಡೂರಾವ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

RELATED ARTICLES

Latest News