Sunday, October 6, 2024
Homeರಾಜಕೀಯ | Politicsಯತ್ನಾಳ್ ಗೆ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ

ಯತ್ನಾಳ್ ಗೆ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ

Hartalu Halappa Warn Yatnal

ಬೆಂಗಳೂರು,ಅ.3- ಬರುವ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಇದೇ ರೀತಿ ಮಾತನಾಡಿದರೆ ನಾವು ಇನ್ನು ಮುಂದೆ ಹಾದಿಬೀದಿಯಲ್ಲಿ ನಿಂತು ಮಾತನಾಡಬೇಕಾಗುತ್ತದೆ ಎಂದು ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮಾಜಿ ಸಚಿವ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಈವರೆಗೂ ಮಾತನಾಡಬಾರದೆಂದು ಸುಮನಿದ್ದೆವು. ಆದರೆ ಕೆಲವರು ಪಕ್ಷಕ್ಕಿಂತಲೂ ನಾವೇ ದೊಡ್ಡವರು ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದೇ ರೀತಿ ಅವರ ಪ್ರವೃತ್ತಿ ಮುಂದುವರೆದರೆ ನಾವು ಕೂಡ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಗುಡುಗಿದರು.

ನಾವು ಇಲ್ಲಿ ವಿಜಯೇಂದ್ರ ಪರವಾಗಿ ಇಲ್ಲವೇ ಅವರ ಧ್ವನಿಯಾಗಿ ಮಾತನಾಡುತ್ತಿಲ್ಲ. ಅಷ್ಟಕ್ಕೂ ನಾನು ವಿಜಯೇಂದ್ರ ಅವರನ್ನು ಭೇಟಿಯಾಗಿ ಒಂದು ತಿಂಗಳು ಕಳೆದಿದೆ. ಪಕ್ಷ ಎಂದ ಮೇಲೆ ಎಲ್ಲರಿಗೂ ಒಂದೇ. ತಾಳೆ ಇರುತ್ತದೆ ಮಿತಿ ಮೀರಿದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ವಿಜಯೇಂದ್ರ ಅವರನ್ನು ಹಾದಿಬೀದಿಯಲ್ಲಿ ಮಾತನಾಡುವವರು ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಅವರ ಸಾಮರ್ಥ್ಯವನ್ನು ಕಂಡು ಪಕ್ಷದ ವರಿಷ್ಠರು ಈ ಹುದ್ದೆಯನ್ನು ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದರು. ಈಗ ಮಾತನಾಡುವವರು ಪಾದಯಾತ್ರೆ ನಡೆಯುವಾಗ ಎಲ್ಲಿ ಹೋಗಿದ್ದರು ಎಂದು ಹಾಲಪ್ಪ ತರಾಟೆಗೆ ತೆಗೆದುಕೊಂಡರು.

ಪಕ್ಷ ಸಂಘಟನೆಗಾಗಿ ಅವರು ಹಗಲು-ರಾತ್ರಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಹೊಸ ಚೈತನ್ಯ ಕೊಡುತ್ತಿದ್ದಾರೆ. ನಾವು ಅವರಿಗೆ ಬೆಂಬಲ ಕೊಡಬೇಕೆ ಹೊರತು ಕಾಲೆಳೆಯುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಮೊದಲ ಬಾರಿ ಶಾಸಕರಾಗಿ ಸಚಿವರಾದವರು, ಮುಖ್ಯಮಂತ್ರಿಯಾದವರನ್ನೂ ನೋಡಿದ್ದೇವೆ. ರಾಜ್ಯದಲ್ಲಿ ಈಗೇನೂ ಚುನಾವಣೆ ಬರುತ್ತಿಲ್ಲ. ಸಂಘಟನೆಯನ್ನು ನಿರಂತರವಾಗಿ ಕಟ್ಟುವ ಪ್ರಯತ್ನ ಮಾಡುತ್ತಿರುವಾಗ ಯತ್ನಾಳ್ ಮತ್ತು ಅವರ ತಂಡ ಕೊಂಕು ನುಡಿಯುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.

ರಾಜಸ್ಥಾನದಲ್ಲಿ ಮೊದಲ ಬಾರಿಗೆ ಶಾಸಕರಾದವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಯತ್ನಾಳ್ ವಾಜಪೇಯಿ ಪ್ರಧಾನಿಯಾಗಿದ್ದಾಗ ಸಚಿವರಾಗಿದ್ದರು. ಅವರಿಗೆ ಸಾಕಷ್ಟು ಅನುಭವವಿದೆ. ಯಾರದೋ ಮಾತು ಕಟ್ಟಿಕೊಂಡು ಯಡಿಯೂರಪ್ಪ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಬಾರದು. ಇದೇ ರೀತಿ ಮಾತನಾಡಿದರೆ ಇನ್ನು ಮುಂದೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಬಸನಗೌಡ ಯತ್ನಾಳ್ ಹೇಳಿಕೆಯಿಂದ ಕಾರ್ಯಕರ್ತರಲ್ಲೂ ಮುಜುಗರ ಆಗುತ್ತಿದೆ. ನಮ ದೊಡ್ಡವರಿಗೆ ಅದು ಸಾಮಾನ್ಯ ಅನ್ನಿಸಬಾರದು. ಪಕ್ಷದಲ್ಲಿ ಹಿರಿಯರಾಗಿ, ಅವರ ಸಲಹೆ ಕೊಡಬೇಕು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋಗುತ್ತಾರೆ. ಅದನ್ನು ಮಾಡಬಾರದು ಎಂದರು.

RELATED ARTICLES

Latest News