ಶಿಲ್ಲಾಂಗ್,ಅ.6- ಕಳೆದ 24 ಗಂಟೆಗಳಲ್ಲಿ ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಒಂದೇ ಕುಟುಂಬದ ಏಳು ಮಂದಿ ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ದಾಲುವಿನ ಮೂವರು ಮತ್ತು ಹತಿಯಾಸಿಯಾ ಸಾಂಗಾದಿಂದ ಏಳು ಜನರು ಸಾವನ್ನಪ್ಪಿದ್ದಾರೆ. ಸತತ ಮಳೆಯಿಂದಾಗಿ ಜಿಲ್ಲೆಯ ಗಸುವಾಪಾರ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತ ಸಂಭವಿಸಿದಾಗ ಏಳು ಜನರ ಕುಟುಂಬವು ದೂರದ ಹಳ್ಳಿಯಾದ ಹಟಿಯಾಸಿಯಾ ಸಾಂಗಾದಲ್ಲಿ ತಮ ಮನೆಯೊಳಗೆ ಇದ್ದರು. ಮೃತರಲ್ಲಿ ಮೂವರು ಅಪ್ರಾಪ್ತರು ಸೇರಿದ್ದಾರೆ. ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗಾ ಅವರು ಗಾರೋ ಹಿಲ್‌್ಸನ ಐದು ಜಿಲ್ಲೆಗಳ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಿದ್ದಾರೆ.ಸಂಗಾ ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿ ತಕ್ಷಣವೇ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರೆಫ್) ಮತ್ತು ಎಸ್ಡಿಆರೆಫ್ನ ಸಿಬ್ಬಂದಿಯನ್ನು ಅತ್ಯಂತ ಕೆಟ್ಟ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿಯೋಜಿಸಲಾಗಿದೆ.ಮರುನಿರ್ಮಾಣ ಪ್ರಯತ್ನಗಳಿಗೆ ಬೈಲಿ ಸೇತುವೆ ತಂತ್ರಜ್ಞಾನವನ್ನು ಬಳಸಲು ಸಂಗಾ ಸಲಹೆ ನೀಡಿದರು, ಇದು ತ್ವರಿತ ಜೋಡಣೆ ಮತ್ತು ಸಾರಿಗೆಗೆ ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ತಡವಾಗಿ ಆರಂಭವಾದ ನಿರಂತರ ಮಳೆಯು ಗಾರೋ ಹಿಲ್ಸ್ ಪ್ರದೇಶದಾದ್ಯಂತ ವ್ಯಾಪಕ ಭೂಕುಸಿತ ಮತ್ತು ಹಠಾತ್ ಪ್ರವಾಹಗಳನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ಒಟ್ಟು 10 ಸಾವುಗಳು ಸಂಭವಿಸಿವೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ಇದೇ ರೀತಿಯ ಭೂಕುಸಿತ ಘಟನೆಗಳಿಂದಾಗಿ ಪಶ್ಚಿಮ ಗಾರೋ ಹಿಲ್‌್ಸನ ದಾಲುದಲ್ಲಿ ಮೂವರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಕಾನ್ರಾಡ್ ಸಂಗಾ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಪರಿಶೀಲನಾ ಸಭೆಯನ್ನು ಕರೆದಿದ್ದಾರೆ. ಈ ಭೂಕುಸಿತ ಎಲ್ಲಾ 5 ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಮತ್ತು ಪಶ್ಚಿಮ ಗಾರೋ ಬೆಟ್ಟಗಳ ಮೇಲೆ ತೀವ್ರ ಪರಿಣಾಮ ಬೀರಿದೆ.