Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಚನ್ನರಾಯಪಟ್ಟಣದಲ್ಲಿ ಚಡ್ಡಿ ಗ್ಯಾಂಗ್‌ ಹಾವಳಿ, ಸ್ಥಳೀಯರಲ್ಲಿ ಆತಂಕ

ಚನ್ನರಾಯಪಟ್ಟಣದಲ್ಲಿ ಚಡ್ಡಿ ಗ್ಯಾಂಗ್‌ ಹಾವಳಿ, ಸ್ಥಳೀಯರಲ್ಲಿ ಆತಂಕ

Chaddi Gang in Channarayapatna

ಚನ್ನರಾಯಪಟ್ಟಣ,ಅ.6– ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.ಗಾಯತ್ರಿ ಬಡಾವಣೆ, ಅಮರಾವತಿ ಬಡಾವಣೆ, ಅಕ್ಷರ ಶಾಲೆಯ ಸುತ್ತಮುತ್ತ ಕಳೆದ ರಾತ್ರಿ ಮುಸುಕುಧಾರಿ ಚಡ್ಡಿ ಗ್ಯಾಂಗ್‌ ಕಳ್ಳರು ಓಡಾಡುತ್ತಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಕಳೆದ ಒಂದು ದಿನದ ಹಿಂದೆಯೇ ಇಲ್ಲಿ ನಾಲ್ಕೈದು ಮನೆಗಳ ಬೀಗ ಒಡೆದು ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.ಅರಸೀಕೆರೆ ಮತ್ತು ಇತರ ತಾಲೂಕುಗಳಲ್ಲಿ ಚಡ್ಡಿ ಗ್ಯಾಂಗ್‌ ಹಾವಳಿ ಹೆಚ್ಚಿದ್ದು, ಇದೀಗ ಚನ್ನರಾಯಪಟ್ಟಣಕ್ಕೂ ಬಂದಿದ್ದು, ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯಗಳು ಸೆರೆಯಾಗಿವೆ.

ರಾತ್ರಿ ವೇಳೆ ಪೊಲೀಸ್‌‍ ಗಸ್ತು ಇಲ್ಲದಿರುವುದು ಹಾಗೂ ಬೀದಿ ದೀಪಗಳು ಇಲ್ಲದಿರುವುದರಿಂದ ಕಳ್ಳರಿಗೆ ಇದೊಂದು ವರದಾನವಾಗಿದ್ದು, ರಾತ್ರಿ ವೇಳೆ ವಿವಿಧ ಬಡಾವಣೆಗಳಲ್ಲಿ ಮುಸುಕು ಧರಿಸಿ ಓಡಾಡುತ್ತಾ ಮನೆಗಳ ಕಳ್ಳತನ ಮಾಡಲು ಯತ್ನಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಆತಂಕಗೀಡಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ.

RELATED ARTICLES

Latest News