Friday, November 22, 2024
Homeರಾಷ್ಟ್ರೀಯ | Nationalಜಮ್ಮು -ಕಾಶ್ಮೀರ: ಫಲಿತಾಂಶಕ್ಕೂ ಮೊದಲೇ ಶಾಸಕರನ್ನು ನೇಮಿಸಿದ ಲೆಫ್ಟಿನೆಂಟ್‌ ಗವರ್ನರ್‌

ಜಮ್ಮು -ಕಾಶ್ಮೀರ: ಫಲಿತಾಂಶಕ್ಕೂ ಮೊದಲೇ ಶಾಸಕರನ್ನು ನೇಮಿಸಿದ ಲೆಫ್ಟಿನೆಂಟ್‌ ಗವರ್ನರ್‌

ಶ್ರೀನಗರ,ಅ.7- ಜಮ್ಮು -ಕಾಶ್ಮೀರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಐವರನ್ನು ನಾಮನಿರ್ದೇಶದ ಶಾಸಕರಾಗಿ ನೇಮಿಸಿ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಆದೇಶ ಹೊರಡಿಸಿದ್ದಾರೆ. ಜಮ್ಮು -ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಗೆ ತಿದ್ದುಪಡಿಗಳ ಭಾಗವಾಗಿ ಇಬ್ಬರು ಮಹಿಳೆಯರು, ಇಬ್ಬರು ಕಾಶ್ಮೀರ ಪಂಡಿತರು ಮತ್ತು ಪಾಕ್‌ ಆಕ್ರಮಿತ ಕಾಶೀರದಿಂದ ಆಗಮಿಸಿದ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

ಈಗಾಗಲೆ 90 ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದು ಮತ ಎಣಿಕೆಯಾಗಿ ಫಲಿತಂಶ ಪ್ರಕಟಗೊಳ್ಳಲಿದೆ ಈ ನಡುವೆ ಐವರು ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇರುವ ಕಾರಣ ಜಮ್ಮು -ಕಾಶ್ಮೀರ ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 95ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುಮತಕ್ಕೆ 48 ಸದಸ್ಯರ ಬೆಂಬಲ ಬೇಕು. ಈ ಐವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಸಮೀಕ್ಷೆಗಳು ಈ ಭಾರಿ ಅತಂತ್ರ ವಿಧಾನ ಸಭೆ ಎಂದು ಹೇಳುತ್ತದೆ ಹಾಗಾಗಿ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ.ಕಾಂಗ್ರೇಸ್‌‍ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ,

RELATED ARTICLES

Latest News