Thursday, December 12, 2024
Homeಅಂತಾರಾಷ್ಟ್ರೀಯ | Internationalಪಾಕ್‌ನ ಕರಾಚಿ ವಿಮಾನ ನಿಲ್ದಾಣದ ಬಳಿ ಸ್ಫೋಟ: ಇಬ್ಬರು ಚೀನಾ ಕಾರ್ಮಿಕರು ಸಾವು

ಪಾಕ್‌ನ ಕರಾಚಿ ವಿಮಾನ ನಿಲ್ದಾಣದ ಬಳಿ ಸ್ಫೋಟ: ಇಬ್ಬರು ಚೀನಾ ಕಾರ್ಮಿಕರು ಸಾವು

ಕರಾಚಿ, ಅಕ್ಟೋಬರ್‌ 7 (ಎಪಿ) ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಚೀನಾದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಅತಿದೊಡ್ಡ ವಿಮಾನ ನಿಲ್ದಾಣದ ಹೊರಗೆ ಟ್ಯಾಂಕರ್‌ ಸ್ಫೋಟಗೊಂಡಿದೆ ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪೋರ್ಟ್‌ ಖಾಸಿಮ್‌ ಎಲೆಕ್ಟ್ರಿಕ್‌ ಪವರ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೀನಾದ ಸಿಬ್ಬಂದಿಯನ್ನು ವಾಹನದಲ್ಲಿ ಬೆಂಗಾವಲು ಪಡೆ ಕರೆದುಕೊಂಡು ಹೋಗುವಾಗ ರಾತ್ರಿ 11 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದು, ಇಬ್ಬರು ಚೀನೀಯರು ಬಲಿಯಾಗಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಚೀನಾ ರಾಯಭಾರ ಕಚೇರಿ ಹೇಳಿಕೆ ತಿಳಿಸಿದೆ. ಪಾಕಿಸ್ತಾನದ ಸಿಬ್ಬಂಧಿಯೂ ಬಲಿಯಾಗಿದ್ದಾರೆ ಎಂದು ಅದು ಹೇಳಿದೆ. ಪ್ರಾಂತೀಯ ಗೃಹ ಸಚಿವ ಜಿಯಾ ಉಲ್‌ ಹಸನ್‌ , ಈ ಸ್ಫೋಟವು ವಿದೇಶಿಯರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿದೆ ಎಂದು ಹೇಳಿದರು.

ಸಾವಿರಾರು ಚೀನೀ ಕಾರ್ಮಿಕರು ಪಾಕಿಸ್ತಾನದಲ್ಲಿದ್ದಾರೆ, ಅವರಲ್ಲಿ ಹೆಚ್ಚಿನವರು ಬೀಜಿಂಗ್‌ನ ಬಹು-ಶತಕೋಟಿ-ಡಾಲರ್‌ ಬೆಲ್‌್ಟ ಮತ್ತು ರೋಡ್‌ ಇನಿಶಿಯೇಟಿವ್‌ನಲ್ಲಿ ತೊಡಗಿಸಿಕೊಂಡಿದ್ದಾರೆ, ಇದು ದಕ್ಷಿಣ ಮತ್ತು ಮಧ್ಯ ಏಷ್ಯಾವನ್ನು ಚೀನಾದ ರಾಜಧಾನಿಯೊಂದಿಗೆ ಸಂಪರ್ಕಿಸುತ್ತದೆ ಎಂದು ತಿಳಿಸಿದರು. ಕಾರುಗಳನ್ನುಬೆಂಕಿಜ್ವಾಲೆಗಳು ಆವರಿಸಿರುವುದನ್ನು ಮತ್ತು ದಟ್ಟವಾದ ಹೊಗೆಯು ಏರುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ಸ್ಥಳದಲ್ಲಿ ಭಾರೀ ಸೇನಾ ಸಿಬ್ಭಂಧಿ ನಿಯೋಜನೆ ಇದ್ದು, ಆ ಸ್ಥಳವನ್ನು ಸುತ್ತುವರಿಯಲಾಗಿತ್ತು.

ಚೀನಾದ ಹೇಳಿಕೆಯು ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ ಮತ್ತು ನಂತರದ ಪರಿಣಾಮಗಳನ್ನು ನಿಭಾಯಿಸಲು ಚೀನಾ ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಅಪರಾಧಿಗಳನ್ನು ಶಿಕ್ಷಿಸಲು ಸಮಗ್ರ ತನಿಖೆಗೆ ಕರೆ ನೀಡಿದ್ದು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ದೇಶದಲ್ಲಿರುವ ಚೀನಾದ ನಾಗರಿಕರಿಗೆ ನೆನಪಿಸಲಾಗಿದೆ, ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‌ ಜನರಲ್‌ ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿ ಎರಡೂ ದೇಶಗಳ ಅಮಾಯಕ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.

ಇದು ತೈಲ ಟ್ಯಾಂಕರ್‌ ಸ್ಫೋಟದಂತೆ ತೋರುತ್ತಿದೆ ಎಂದು ಡೆಪ್ಯುಟಿ ಇನ್‌್ಸಪೆಕ್ಟರ್‌ ಜನರಲ್‌ ಅಜ್ಫರ್‌ ಮಹೇಸರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾವು ಸ್ಫೋಟದ ಸ್ವರೂಪ ಮತ್ತು ಕಾರಣಗಳನ್ನು ನಿರ್ಧರಿಸುತ್ತಿದ್ದೇವೆ. ಇದು ಸಮಯ ತೆಗೆದುಕೊಳ್ಳುತ್ತದೆ. ಗಾಯಗೊಂಡವರಲ್ಲಿ ಪೊಲೀಸ್‌‍ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಹೇಳಿದರು. ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಾಹತ್‌ ಹುಸೇನ್‌ ಪ್ರಕಾರ ಈ ಸ್ಫೋಟವು ಎಷ್ಟು ದೊಡ್ಡದಾಗಿದೆ ಎಂದರೆ ಅದು ವಿಮಾನ ನಿಲ್ದಾಣದ ಕಟ್ಟಡಗಳನ್ನು ನಡುಗಿಸಿತ್ತು.

RELATED ARTICLES

Latest News